ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಎರಡನೇ ಹಂತ ಮುಕ್ತಾಯಗೊಂಡಿದ್ದು, ಎನ್ ಡಿಎ ಅಭ್ಯರ್ಥಿ ದ್ರೌಪದಿ ಮರ್ಮು ಭಾರೀ ಮುನ್ನಡೆ ಗಳಿಸಿ ಗೆಲುವಿನತ್ತ ದಾಪುಗಾಲಿರಿಸಿದ್ದಾರೆ.
ದೆಹಲಿಯಲ್ಲಿ ನಡೆದ ಮತ ಎಣಿಕೆಯ ಅಂತಿಮ ಘಟ್ಟ ತಲುಪಿದ್ದು, ಈಗಾಗಲೇ 10 ರಾಜ್ಯಗಳ ಮತ ಎಣಿಗೆ ಅಂತಿಮಗೊಂಡಿದೆ.
ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಾಗ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮರ್ಮು 1349 ಮತಗಳನ್ನು ಪಡೆದಿದ್ದು, ಇದರ ಮೌಲ್ಯ 4,83,299 ಮತಗಳದ್ದಾಗಿದೆ. ಪ್ರತಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ 537 ಮತಗಳನ್ನು ಪಡೆದಿದ್ದು ಇದರ ಮೌಲ್ಯ 1,89,876 ಮತಗಳಾಗಿವೆ.

ದ್ರೌಪದಿ ಮರ್ಮು ಪ್ರತಿಸ್ಪರ್ಧಿಗಿಂತ ಎರಡು ಪಟ್ಟು ಹೆಚ್ಚು ಮತಗಳನ್ನು ಪಡೆದು ಭಾರೀ ಮುನ್ನಡೆ ಗಳಿಸಿದ್ದು, ಗೆಲುವು ಬಹುತೇಕ ನಿಶ್ಚಿತ ಎಂದು ಹೇಳಲಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಇದಕ್ಕೂ ಮೊದಲು ಮೊದಲ ಹಂತದ ಮತ ಎಣಿಕೆ ವೇಳೆ ದ್ರೌಪದಿ ಮರ್ಮು ಅವರಿಗೆ 540 ಮತಗಳು ಲಭಿಸಿದ್ದು, ಇದರ ಮೌಲ್ಯ 3,78,000 ಆಗಿದೆ. ಯಶವಂತ್ ಸಿನ್ಹಾ 208 ಮತಗಳನ್ನು ಗಳಿಸಿದ್ದು, ಇದರ ಮೌಲ್ಯ 1,45,600 ಆಗಿದೆ.