ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ತಾವರ್‌ಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿ ಆಯ್ಕೆ ಮಾಡಿದ್ದಾರೆ.
ತಾವರ್‌ಚಂದ್ ಗೆಹ್ಲೋಟ್ ಅವರು ಕೇಂದ್ರ ಸಚಿವರಾಗಿದ್ದರು. ಇದೀಗ, ವಜುಭಾಯಿ ವಾಲಾ ಅವರ ಸ್ಥಾನಕ್ಕೆ ಗೆಹ್ಲೋಟ್ ಅವರನ್ನು ನೇಮಿಸಲಾಗಿದೆ.

ಒಟ್ಟು ಎಂಟು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಗೋವಾ ರಾಜ್ಯಪಾಲರನ್ನಾಗಿ ಪಿಎಸ್ ಶ್ರೀಧರನ್ ಪಿಳ್ಳೈ, ತ್ರಿಪುರಾ ರಾಜ್ಯಪಾಲರನ್ನಾಗಿ ಸತ್ಯದೇವ್ ನಾರಾಯಣ್, ಜಾರ್ಖಂಡ್ ರಾಜ್ಯಪಾಲರನ್ನಾಗಿ ರಮೇಶ್ ಬಾಯಸ್ ಹಾಗೂ ಹರ್ಯಾಣ ರಾಜ್ಯಪಾಲರನ್ನಾಗಿ ಬಂಡಾರು ದತ್ತಾತ್ರೇಯ ಅವರನ್ನು ನೇಮಿಸಲಾಗಿದೆ.
ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ನಡೆಯಲು ಎರಡು ದಿನಗಳಿರುವ ಹಿನ್ನೆಲೆಯಲ್ಲಿ ನೂತನ ಎಂಟು ರಾಜ್ಯಪಾಲರ ನೇಮಕ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.