ಸಿಎಂ ತವರಲ್ಲಿ ಗೆದ್ದು ಬೀಗಿರೋ ಕಾಂಗ್ರೆಸ್ ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿಕೊಂಡಿದೆ. 2023ರ ಸಾರ್ವತ್ರಿಕ ಚುನಾವಣೆಗೆ ‘ಕೈ’ ಕಲಿಗಳು ಭರ್ಜರಿ ತಯಾರಿ ನಡೆಸಿರುವುದು ಮಾತ್ರವಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಬಾಯಿಂದಲೂ ಇದೇ ಜಪಾ ಮಾಡಿಸುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕೈ ಪಡೆಯ ಘಟಾನುಘಟಿ ನಾಯಕರು ಚುನಾವಣಾ ಜಪ ಮಾಡ್ತಿದ್ದಾರೆ. ಮುಂದಿನ ಚುನಾವಣೆಯೇ ನನ್ನ ಗುರಿ ಅಂತ ನಾಯಕರು ಶಪಥ ಮಾಡಿದ್ದಾರೆ.
ಸಿಎಂ ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿದ್ದ ಹಾನಗಲ್ ಗೆಲುವು ಕಾಂಗ್ರೆಸ್ ಪಾಳಯಕ್ಕೆ ಇನ್ನಿಲ್ಲದ ಶಕ್ತಿ ತುಂಬಿದೆ. ಆ ಗೆಲುವನ್ನೇ ಮೆಟ್ಟಿಲಾಗಿಸಿಕೊಂಡು 2023ರ ಸಾರ್ವತ್ರಿಕ ಚುನಾವಣೆಗೆ ‘ಕೈ’ ಕಲಿಗಳು ಭರ್ಜರಿ ತಯಾರಿ ನಡೆಸ್ತಿದ್ದಾರೆ. ಸಿದ್ದು-ಡಿಕೆಶಿ ಆದಿಯಾಗಿ ಕೈ ನಾಯಕರು ಚುನಾವಣ ಜಪ ಮಾಡ್ತಿದ್ದಾರೆ.
ಉಪಕದನದಲ್ಲಿ ಸಿಎಂ ತವರು ಹಾನಗಲ್ನಲ್ಲಿ ಗೆದ್ದು ಬೀಗಿದ್ದು, ಸಿಂದಗಿಯಲ್ಲಿ ಉತ್ತಮ ಮತ ಕಲೆಹಾಕಿದ್ದು ಕೈ ಪಡೆಗೆ ಶಕ್ತಿ ತುಂಬಿದೆ. ಇದೇ ಖುಷಿಯಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸ್ತಿದೆ. ಅದ್ರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಂತೂ ಶಪಥ, ಹರಕೆಯ ಮೂಲಕ ಈಗಾಗಲೇ ಅಖಾಡಕ್ಕೆ ದುಮುಖಿದಂತಿದೆ.

2023ರ ಸಾರ್ವತ್ರಿಕ ಚುನಾವಣೆಗೆ ‘ಕೈ’ ಕಲಿಗಳಿಂದ ಭರ್ಜರಿ ತಯಾರಿ ನಡೆಯುತ್ತಿದ್ದು, ಮುಂದಿನ ಚುನಾವಣೆಯೇ ನನ್ನ ಗುರಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ದೇವಿಗೆ ಹರಕೆ ಸಲ್ಲಿಸಿದ ಬಳಿಕ ಡಿಕೆಶಿ ಹೊಸ ಶಪಥ ಬೇರೆ ಮಾಡಿದ್ದಾರೆ. ಇನ್ನೂ ಇತ್ತ ಸಿದ್ದರಾಮಯ್ಯರಿಂದಲೂ ಚುನಾವಣಾ ಜಪ ಶುರುವಾಗಿದೆ. ಹರಕೆ, ಜಪ ಮತ್ತು ಶಪಥದ ಹಿಂದೆ 2023ರ ಚುನಾವಣೆ ಗುರಿಯನ್ನು ಕೈ ಪಡೆ ನಿಗಧಿ ಮಾಡಿಕೊಂಡಿದೆ.
‘ಕೈ’ ಕಲಿಗಳು ‘2023’ರ ಗುರಿ, ಈಗೇಕೆ ಶಪಥ?
ಕಾರಣ 01 : ಹಾನಗಲ್ ಗೆಲುವಿನ ಉತ್ಸಾಹದಲ್ಲಿ ಕಾಂಗ್ರೆಸ್ ನಾಯಕರು
ಇದೇ ಉತ್ಸಾಹದಲ್ಲಿ ಮುಂದಿನ ಚುನಾವಣೆ ಎದುರಿಸಲು ಸಜ್ಜು
ಪಕ್ಷ ಸಂಘಟನೆಗೆ ತಯಾರಿ ನಡೆಸಲು ಕೈ ನಾಯಕರಿಂದ ಪ್ಲಾನ್
ಹಾನಗಲ್ ಗೆಲುವಿನ ಉತ್ಸಾಹದಲ್ಲಿರುವ ಕಾಂಗ್ರೆಸ್ ನಾಯಕರು, ಇದೇ ಉತ್ಸಾಹದಲ್ಲಿ ಮುಂದಿನ ಚುನಾವಣೆ ಎದುರಿಸಲು ಸಜ್ಜಾಗ್ತಿದ್ದಾರೆ. ಅದ್ರಲ್ಲೂ ಪಕ್ಷ ಸಂಘಟನೆಗೆ ತಯಾರಿ ನಡೆಸಲು ಕೈ ನಾಯಕರಿಂದ ಭರ್ಜರಿ ಪ್ಲಾನ್ ಕೂಡ ರೆಡಿಯಾಗಿದೆ.
ಕಾರಣ 02 : ಸಿಎಂ ತವರು ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನಾಯಕರು
‘ಕೈ’ ಕಾರ್ಯಕರ್ತರ ರಣೋತ್ಸಾಹ ಮುಂದುವರೆಸಲು ‘ಕೈ’ ಚಿಂತನೆ
2023ರ ಚುನಾವಣೆಗೆ ಸಜ್ಜಾಗಲು ‘ಕೈ’ ಕಾರ್ಯಕರ್ತರಿಗೆ ಸಂದೇಶ
ಸಿಎಂ ತವರು ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನಾಯಕರು, ‘ಕೈ’ ಕಾರ್ಯಕರ್ತರ ರಣೋತ್ಸಾಹ ಮುಂದುವರೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಹೀಗಾಗಿ 2023ರ ಚುನಾವಣೆಗೆ ಸಜ್ಜಾಗಲು ‘ಕೈ’ ಕಾರ್ಯಕರ್ತರಿಗೆ ನಾಯಕರಿಂದ ಸಂದೇಶ ಕೂಡ ರವಾನೆಯಾಗಿದೆ.
ಕಾರಣ 03 : ಎಲೆಕ್ಷನ್ ಹತ್ತಿರ ಬರ್ತಿದ್ದಂತೆ ಅಧಿಕಾರಿಗಳ ನಿಲುವು ಬದಲಾಗುತ್ತದೆ
ಆಡಳಿತ ಪಕ್ಷದ ಪರ ಧೋರಣೆ ಹೊಂದಿರುವ ಅಧಿಕಾರಿಗಳು ತಟಸ್ಥ
ಅಧಿಕಾರಿಗಳು, ಸರ್ಕಾರಿ ನೌಕರರ ಈ ನಡೆ ವಿಪಕ್ಷಗಳಿಗೆ ಪೂರಕ
ಅಧಿಕಾರಿಗಳು ತಟಸ್ಥ ನಿಲುವು ತಳೆಯುವಂಥಾ ಮೂಡ್ ಸೆಟ್ಗೆ ಪ್ಲ್ಯಾನ್
ಅಧಿಕಾರಿಗಳು ತಟಸ್ಥರಾಗುವಂಥಾ ವಾತಾವರಣ ಸೃಷ್ಟಿಗೆ ‘ಕೈ’ ತಂತ್ರ

ಇನ್ನು ಎಲೆಕ್ಷನ್ ಹತ್ತಿರ ಬರ್ತಿದ್ದಂತೆ ಅಧಿಕಾರಿಗಳ ನಿಲುವು ಬದಲಾಗುತ್ತದೆ. ಆಡಳಿತ ಪಕ್ಷದ ಪರ ಧೋರಣೆ ಹೊಂದಿರುವ ಅಧಿಕಾರಿಗಳು ತಟಸ್ಥರಾಗ್ತಾರೆ. ಅಧಿಕಾರಿಗಳು, ಸರ್ಕಾರಿ ನೌಕರರ ಈ ನಡೆ ವಿಪಕ್ಷಗಳಿಗೆ ಪೂರಕವಾಗುತ್ತದೆ. ಅಧಿಕಾರಿಗಳು ತಟಸ್ಥ ನಿಲುವು ತಳೆಯುವಂಥಾ ಮೂಡ್ ಸೆಟ್ ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ. ಅಧಿಕಾರಿಗಳು ತಟಸ್ಥರಾಗುವಂಥಾ ವಾತಾವರಣ ಸೃಷ್ಟಿಗೆ ‘ಕೈ’ ಪಡೆ ತಂತ್ರ ಕೂಡ ರೂಪಿಸಿದೆ.
ಒಟ್ನಲ್ಲಿ ಹಾನಗಲ್ ಹಂಗಾಮದಲ್ಲಿ ಕಮಾಲ್ ಮಾಡಿರುವ ಕಾಂಗ್ರೆಸ್ ಸಿಎಂ ತವರಿನಲ್ಲೇ ಗೆದ್ದು ಬೀಗಿದೆ. ಇದೇ ಉತ್ಸಾಹದಲ್ಲಿ 2023ರ ಸಾವ್ರರ್ತಿಕ ಚುನಾವಣೆಗೆ ಕೈ ಪಡೆ ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಸಿದ್ದು-ಡಿಕೆಶಿ ಟೀಂ ತಂತ್ರ ರಣತಂತ್ರವನ್ನ ಈಗಿನಿಂದಲೇ ಹೆಣೀತಿದೆ.











