ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು 7,06,207 ಮತದಾರರು ಇದ್ದಾರೆ. 13,45,707 ಯುವ ಮತದಾರರು ಇದ್ದಾರೆ (18-19 ವರ್ಷ), 80 ವರ್ಷ ಮೇಲ್ಪಟ್ಟವರು 11,76,093 ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿ 2024ರ ಪ್ರಕಾರ ಮತಗಟ್ಟೆಗಳು 58,834ಗೆ ಏರಿಕೆಯಾಗಿವೆ. ಆ ಮೂಲಕ 2023 ಗಿಂತ 552 ಮತಗಟ್ಟೆ ಏರಿಕೆಯಾಗಿದೆ ಎಂದರು.
ಅಂತಿಮ ಮತದಾರರ ಪಟ್ಟಿಯನ್ನು ಜ.5, 2024 ಕ್ಕೆ ಪ್ರಕಟಿಸಲಾಗುವುದು. ಇಂದಿನಿಂದ 2024 ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಆರಂಭವಾಗಲಿದೆ. ಇಂದಿನಿಂದ ಡಿ.9 ವರೆಗೆ ಆಕ್ಷೇಪಣೆಗೆ ಅವಕಾಶ ಇರಲಿದೆ. ವಿಶೇಷ ಅಭಿಯಾನ ನ.18, ನ.19, ಡಿ.1, ಡಿ. 3 ರಂದು ನಡೆಯಲಿದೆ. ಆಕ್ಷೇಪಣೆಗಳ ವಿಲೇವಾರಿ ಡಿ.26ರಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಫಾರ್ಮ್ 6 ರಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇರಲಿದೆ. ಫಾರ್ಮ್ 7ರಲ್ಲಿ ಮತದಾರರ ಪಟ್ಟಿಯಲ್ಲಿ ಪ್ರಸ್ತಾಪಿತ ಸೇರ್ಪಡೆಗೆ ಆಕ್ಷೇಪಣೆಗಾಗಿ ಮತ್ತು ಅಳಿಸಬೇಕು. ಫಾರ್ಮ್ 8ರಲ್ಲಿ ತಿದ್ದುಪಡಿಗೆ ಅವಕಾಶ ಇರಲಿದೆ ಎಂದು ವಿವರಿಸಿದರು.
ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 3,89,353 ಹೆಸರು ಅಳಿಸಲಾಗಿದೆ ಎಂದು ಹೇಳಿದರು. ಈ ಪೈಕಿ ಮತದಾರರ ಮರಣದಿಂದ ಅಳಿಸಿದ ಮತದಾರರು 1,27,703, ಮತದಾರರ ಸ್ಥಳಾಂತರದಿಂದ ಅಳಿಸುವಿಕೆ 2,38,617 ಸೇರಿವೆ. ವಿಧಾನಸಭೆ ಚುನಾವಣೆ ಬಳಿಕ 6,02,199 ಹೊಸ ಹೆಸರು ಸೇರಿಸಲಾಗಿದೆ. ಇನ್ನು 6,39,995 ಮತದಾರರು ವಿವಿಧ ತಿದ್ದುಪಡಿ ಮಾಡಿದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. 2019ರ ಲೋಕಸಭೆ ಚುನಾವಣೆ ಅವಧಿಯ ಅಂತಿಮ ಮತದಾರರ ಪಟ್ಟಿಯಲ್ಲಿ 5,10,51,432 ಮತದಾರರು ಇದ್ದರು ಎಂದು ತಿಳಿಸಿದರು.