• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರವೀಣ್ ನೆಟ್ಟಾರ್ ಮನೆಗೆ ಅಮಿತ್ ಶಾ ಭೇಟಿ ಅನುಮಾನ; ಕಾರ್ಯಕರ್ತರಲ್ಲಿ ಮತ್ತೆ ಅಸಮಾಧಾನ

Shivakumar A by Shivakumar A
August 3, 2022
in ಕರ್ನಾಟಕ, ದೇಶ
0
ಪ್ರವೀಣ್ ನೆಟ್ಟಾರ್ ಮನೆಗೆ ಅಮಿತ್ ಶಾ ಭೇಟಿ ಅನುಮಾನ; ಕಾರ್ಯಕರ್ತರಲ್ಲಿ ಮತ್ತೆ ಅಸಮಾಧಾನ
Share on WhatsAppShare on FacebookShare on Telegram

ADVERTISEMENT

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು ಇಲ್ಲಿನ ಮೂರೂ ಪಕ್ಷಗಳು ತಮ್ಮ ತಮ್ಮ ಮಟ್ಟದಲ್ಲಿ ಒಂದು ಹಂತದ ರಾಜಕೀಯ ತಂತ್ರಗಾರಿಕೆಯನ್ನು ಚುರುಕುಗೊಳಿಸಿವೆ.

ಸದ್ಯಕ್ಕೆ ಚುನಾವಣೆ ಪೂರ್ವ ತಯಾರಿಯಲ್ಲಿ ಬಿಜೆಪಿಯೂ ಇದೆ. ಇದಕ್ಕೆ ಕಾರಣ ರಾಜ್ಯ ನಾಯಕರ ಮೇಲೆ ಕೇಂದ್ರ ನಾಯಕರ ಒತ್ತಡ. ಈಗಾಗಲೇ ಕೇಂದ್ರ ಹೈಕಮಾಂಡ್ ಇಲ್ಲಿನ ನಾಯಕರಿಗೆ 150 ಪ್ಲಸ್ ಟಾರ್ಗೆಟ್ ನೀಡಿದ್ದಾರೆ. ಈತನ್ಮಧ್ಯೆ ಕಳೆದ ಕೆಲವು ವಾರಗಳಿಂದ ಕರಾವಳಿ ಭಾಗದಲ್ಲಿ ನಡೆದ ಕೆಲವೊಂದು ಅನಪೇಕ್ಷಿತ ಘಟನೆಗಳು ರಾಜ್ಯ ಮತ್ತು ಕೇಂದ್ರ ನಾಯಕರ ನಿದ್ದೆಗೆಡಿಸಿದೆ.

ಇಲ್ಲಿನ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಮತ್ತು ನಂತರ ಸ್ಪೋಟಗೊಂಡ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಆಕ್ರೋಶ ಮತ್ತಿದು ರಾಜ್ಯಮಟ್ಟಕ್ಕೆ ಹಬ್ಬಿದ ರೀತಿ.. ಇದೆಲ್ಲವೂ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬಳಿಕ ಮುಖ್ಯಮಂತ್ರಿಯಾದಿಯಾಗಿ ಆಡಳಿತ ಪಕ್ಷದ ಘಟಾನುಘಟಿ ಸಚಿವರೇ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದರೂ ಇಲ್ಲಿ ಎದ್ದಿರುವ ಒಳಕುದಿ ಇನ್ನೂ ತಣಿದಂತೆ ಕಾಣುತ್ತಿಲ್ಲ. ಇನ್ನೊಂದೆಡೆ ಮಸೂದ್ ಮತ್ತು ಫಾಝಿಲ್ ಹತ್ಯೆ ಪ್ರಕರಣಗಳೂ ಸಹ ಬಿಜೆಪಿಗೆ ಇನ್ನಷ್ಟು ಹೊಡೆತ ನೀಡಿರುವುದು ಸುಳ್ಳಲ್ಲ.

ಈ ಎಲ್ಲಾ ವಿಚಾರಗಳ ಹಿನ್ನಲೆಯಲ್ಲಿ ಬಿಜೆಪಿಯ ಮಾಸ್ಟರ್ ಮೈಂಡ್, ಕೇಂದ್ರ ಗೃಹಸಚಿವ ಅಮಿತ್ ಶಾ ಇಂದು ರಾತ್ರಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಮತ್ತು ಗುರುವಾರ ಪೂರ್ತಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲಿನಲ್ಲೇ ‘ಸಂಕಲ್ಪ್ ಸೆ ಸಿದ್ದಿ’ ಹೆಸರಿನಲ್ಲಿ ಪಕ್ಷದ ನಾಯಕರ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಶಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಪ್ರವೀಣ್ ಹತ್ಯೆ ಕಡೆಗಣನೆ?

ರಾಜ್ಯದಲ್ಲಿ ಸರಣಿ ರಾಜಕೀಯ ಕೊಲೆಗಳು ನಡೆಯುತ್ತಿದ್ದರೂ ಕೇಂದ್ರ ಗೃಹ ಮಂತ್ರಿ ಈ ಕುರಿತಾಗಿ ಚಕಾರವೆತ್ತಿಲ್ಲ. ಅದಕ್ಕು ಮಿಗಿಲಾಗಿ, ಅಮಿತ್ ಶಾ ಕೊಲೆಯಾದ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡುತ್ತಾರೆ ಎಂಬ ಪುಕಾರು ಬಃಲ ಬಲವಾಗಿ ಹಬ್ಬಿತ್ತು. ಆದರೆ, ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಅಧಿಕೃತ ಪ್ರಕಟಣೆಯ ಪ್ರಕಾರ ಅಮಿತ್ ಶಾ ಪ್ರವೀಣ್ ಮನೆಗೆ ಭೇಟಿ ನೀಡುವುದಿಲ್ಲ. ಬದಲಾಗಿ, ಬೆಂಗಳೂರಿನಲ್ಲಿ ನಡೆಯಲಿರುವ ಸಂಕಲ್ಪ್ ಸೆ ಸಿದ್ದಿ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದಲೇ ನೇರವಾಗಿ ದೆಹಲಿಗೆ ವಾಪಾಸ್ಸಾಗಲಿದ್ದಾರೆ.

ಈ ಸುದ್ದಿ ಬಿಜೆಪಿ ನಾಯಕರಿಗೂ ತಳಮಳ ಉಂಟುಮಾಡಿದೆ. ಒಂದು ವೇಳೆ ಶಾ ನೆಟ್ಟಾರಿಗೆ ಬಂದರೆ ಪಕ್ಷವು ತನ್ನ ತಳಮಟ್ಟದ ಕಾರ್ಯಕರ್ತರೊಂದಿಗೆ ಅವರ ಕಷ್ಟ ಕಾಲದಲ್ಲೂ ನಿಲ್ಲಲಿದೆ ಎಂಬ ಮೆಸೇಜ್ ಹೋಗುತ್ತದೆ ಎಂಬ ನಿರಿಕ್ಷೆ ಬಿಜೆಪಿ ಪಾಳಯದಲ್ಲಿದ್ದರೆ, ಒಂದುವೇಳೆ ಶಾ ಬರದಿದ್ದರೆ, ಬೆಂಗಳೂರಿನವರೆಗೆ ಬಂದು ಬೆಳ್ಳಾರೆವರೆಗೆ ನಿಮ್ಮ ನಾಯಕರು ಬರಲಿಲ್ಲ ಎಂಬ ಮಾತು ಪ್ರತಿಪಕ್ಷಗಳಿಂದ ಮತ್ತು ಸ್ವತಃ ತನ್ನ ಕಾರ್ಯಕರ್ತರಿಂದ ಎದುರಾಗಬಹುದು ಎಂಬ ಭೀತಿಯೂ ಕಮಲ ಪಾಳಯದಲ್ಲಿದೆ.

ಸಿದ್ದರಾಮೋತ್ಸವಕ್ಕೆ ಬೆದರಿದರೇ ಬಿಜೆಪಿಯ ಚಾಣಕ್ಯ?

ಮೂಲಗಳ ಪ್ರಕಾರ ಮುಂದಿನ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಈಗಾಗಲೇ ರಾಜ್ಯವ್ಯಾಪಿ ಸಮೀಕ್ಷೆ ನಡೆಸಿದ್ದು ಅದರಿಂದ ಲಭಿಸಿರುವ ಫಲಿತಾಂಶಗಳು ಉನ್ನತ ಕಮಲ ನಾಯಕರ ನಿದ್ದೆಗೆಡಿಸಿದೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ಭರ್ತಿಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಇಂದು ದಾವಣಗೆರೆಯಲ್ಲಿ ‘ಸಿದ್ದರಾಮೋತ್ಸವ’ ನಡೆಸಿದ್ದು ಇದಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯೂ ಸಹ ಬಿಜೆಪಿ ಪಕ್ಷದಲ್ಲಿ ಸಣ್ಣ ತಳಮಳವನ್ನುಂಟು ಮಾಡಿದೆ.

ಸಿದ್ದರಾಮೋತ್ಸವಕ್ಕೆ ಕೌಂಟರ್ ಕೊಡಲು ಯೋಜಿಸಿದ್ದ ‘ಜನೋತ್ಸವ’ ರದ್ದಾಗಿದ್ದು ಬಿಜೆಪಿಗೆ ದೊಡ್ಡ ಹೊಡೆತ!
ಹೌದು, ಸಿದ್ದರಾಮೋತ್ಸವ ಹೆಸರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಬಲಪ್ರದರ್ಶನಕ್ಕೆ ಸರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದ ಸಂದರ್ಭದಲ್ಲೇ ಇದಕ್ಕೆ ಕೌಂಟರ್ ಕೊಡುವ ಉದ್ದೇಶದಿಂದ ಬಿಜೆಪಿ, ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಮೂರು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ ಮತ್ತು ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ‘ಜನೋತ್ಸವ’ ಹೆಸರಿನಲ್ಲಿ ಬೃಹತ್ ಸಮಾವೇಶವನ್ನು ನಡೆಸಲುದ್ದೇಶಿಸಿತ್ತು ಮತ್ತು ಕೇಂದ್ರ ನಾಯಕರ ಉಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಸಾಧನೆಯ ತುತ್ತೂರಿ ಊದುವುದು ಇದರ ಉದ್ದೇಶವಾಗಿತ್ತು.

ಆದರೆ ಸಡನ್ ಆಗಿ ಬಂದೆರಗಿದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಿಸಿಗಾಳಿ ರಾಜ್ಯ ಬಿಜೆಪಿ ನಾಯಕರ ಜಂಘಾಬಲವನ್ನೇ ಉಡುಗಿಸಿತ್ತು ಮತ್ತು ಕಾರ್ಯಕರ್ತರ ಸಿಟ್ಟಿನ ಮುಂದೆ ಜನೋತ್ಸವ ಧೂಳೀಪಟವಾಗಲಿದೆ ಎಂದು ಅರಿತ ಕೇಂದ್ರ ನಾಯಕರು ದಿಢೀರ್ ಆಗಿ ಈ ಸಮಾವೇಶವನ್ನು ರದ್ದುಗೊಳಿಸುವಂತೆ ರಾಜ್ಯ ನಾಯಕರಿಗೆ ಆದೇಶ ನೀಡಿದ್ದರು.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಕಾಮನ್‌ ವೆಲ್ತ್:‌ ಭಾರತ ಪುರುಷರ ಹಾಕಿಗೆ ಭರ್ಜರಿ ಜಯ

Next Post

4ನೇ ಚೆಸ್‌ ಒಲಿಂಪಿಯಾಡ್‌ ನಲ್ಲಿ ತಮಿಳು ಅಸ್ಮಿತೆ ಪ್ರತಿಪಾದಿಸಿದ ಎಂಕೆ ಸ್ಟಾಲಿನ್‌ ಸರ್ಕಾರ!

Related Posts

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?
Top Story

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?

by ಪ್ರತಿಧ್ವನಿ
January 13, 2026
0

ಬೆಂಗಳೂರು: ಬಳ್ಳಾರಿ ಬ್ಯಾನರ್‌ ಗಲಾಟೆ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ(MLA Janardhana Reddy) ಮತ್ತೆ ಗಣಿ ಸಂಕಷ್ಟ ಎದುರಾಗುವ...

Read moreDetails
10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

January 13, 2026
Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

January 13, 2026
BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

January 13, 2026
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

January 13, 2026
Next Post
4ನೇ ಚೆಸ್‌ ಒಲಿಂಪಿಯಾಡ್‌ ನಲ್ಲಿ ತಮಿಳು ಅಸ್ಮಿತೆ ಪ್ರತಿಪಾದಿಸಿದ ಎಂಕೆ ಸ್ಟಾಲಿನ್‌ ಸರ್ಕಾರ!

4ನೇ ಚೆಸ್‌ ಒಲಿಂಪಿಯಾಡ್‌ ನಲ್ಲಿ ತಮಿಳು ಅಸ್ಮಿತೆ ಪ್ರತಿಪಾದಿಸಿದ ಎಂಕೆ ಸ್ಟಾಲಿನ್‌ ಸರ್ಕಾರ!

Please login to join discussion

Recent News

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?
Top Story

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?

by ಪ್ರತಿಧ್ವನಿ
January 13, 2026
10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?
Top Story

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

by ಪ್ರತಿಧ್ವನಿ
January 13, 2026
Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು
Top Story

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

by ಪ್ರತಿಧ್ವನಿ
January 13, 2026
BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!
Top Story

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

by ಪ್ರತಿಧ್ವನಿ
January 13, 2026
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!
Top Story

ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?

January 13, 2026
10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!