ಮೈಸೂರು : ಸಿದ್ದರಾಮಯ್ಯರನ್ನು ಕಟ್ಟಿ ಹಾಕೋಕೆ ಬಿಜೆಪಿ ಸಚಿವ ವಿ.ಸೋಮಣ್ಣರನ್ನು ಕಣಕ್ಕಿಳಿಸಿದೆ. ಸೋಮಣ್ಣ ಪರ ಮತಯಾಚನೆ ಮಾಡಲು ತೆರಳಿದ್ದ ಸಂಸದ ಪ್ರತಾಪ್ ಸಿಂಹಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು ಅಂತೀರಲ್ವಾ..? ಸಿದ್ದರಾಯ್ಯ ಹತ್ರ ಕುಳಿತುಕೊಳ್ಳಿ ಆಗ ನಿಮಗೆ ತಿಳಿಯುತ್ತೆ ಎಂದಿದ್ದಾರೆ.

ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನೇ ಬದಲಾವಣೆ ಮಾಡುತ್ತೀವಿ ಎಂದು ಹೇಳುತ್ತೀರಾ. ಅಕ್ಕಿ ನೀಡಿದ್ದು ಬಿಜೆಪಿ , ಚೀಲ ನೀಡಿದ್ದು ಸಿದ್ದರಾಮಯ್ಯ ಎಂದು ಹೇಳುತ್ತೀರಾ.. ಹಾಗಿದ್ದ ಮೇಲೆ ನಮಗೆ ಅಕ್ಕಿ ಏಕೆ ಕಡಿಮೆ ಕೊಡುತ್ತಿದ್ದೀರಾ..? ಎಂದು ಪ್ರತಾಪ್ ಸಿಂಹಗೆ ತರಾಟೆ ತೆಗೆದುಕೊಂಡಿದ್ದಾರೆ.
ರಸ್ತೆಗಳ ರಾಜ ಅಂಥ ಮಹದೇವಪ್ಪಗೆ ಬಿರುದು ಕೊಡ್ತಿರಾ.ಅದೇ ಮಹದೇವಪ್ಪ ವಿರುದ್ಧ ಮಾತನಾಡುತ್ತೀರಾ.ಸಂಸದ ಶ್ರೀನಿವಾಸ ಪ್ರಸಾದ ಗೆದ್ದ ಬಳಿಕ ಒಂದು ದಿನವೂ ನಮ್ಮ ಸಮಸ್ಯೆ ಕೇಳಲು ಬಂದಿಲ್ಲ.ವರುಣ ಮತದಾರರ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ಕಕ್ಕಾಬಿಕ್ಕಿಯಾಗಿದ್ದಾರೆ.