
ಮೈಸೂರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಅಭ್ಯರ್ಥಿಯಾಗಿ ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧಿಸಿ ಉರಿ ಬಿಸಿಲಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಇತ್ತ ಯದುವೀರ್ ಅವರ ತಾಯಿ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಅವರು ಮೊಮ್ಮಗನೊಂದಿಗೆ ಜಾಲಿ ಮೂಡ್ ನಲ್ಲಿ ಕಾಲ ಕಳೆದಿದ್ದಾರೆ.ಪ್ರಮೋದ ದೇವಿ ಒಡೆಯರ್ ಅವರು ಮೊಮ್ಮಗನೊಂದಿಗೆ ಮೈಸೂರು ಚಾಮರಾಜ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಮೋದ ದೇವಿ ಒಡೆಯರ್ ಹಾಗೂ ಮೊಮ್ಮಗ ಆದ್ಯವೀರ್ ಮೃಗಾಲಯದಲ್ಲಿ ಪ್ರಾಣಿಗಳ ವೀಕ್ಷಣೆ ಮಾಡಿದರು.
ಇದೆ ವೇಳೆ ಪ್ರಮೋದ ದೇವಿ ಒಡೆಯರ್ ಅವರನ್ನ ಸಿನಿಮಾ ನಟಿ ಮೇಘನಾ ರಾಜ್ ಕುಟುಂಬ ಭೇಟಿಯಾಗಿದ್ದು, ಮೇಘನಾರಾಜ್ ಕುಟುಂಬ ತಮ್ಮ ಪುಟ್ಟ ಮಗನೊಂದಿಗೆ ಮೃಗಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಪ್ರಮೋದ ದೇವಿ ಅವರನ್ನ ಭೇಟಿಯಾಗಿದ್ದು ಮೇಘನಾರಾಜ್ ಅವರು ಕುಶಲೋಪರಿ ವಿಚಾರಿಸಿದ್ದಾರೆ.ಯದುವೀರ್ ಒಡೆಯರ್ ಬಿಜೆಪಿ ಅಭ್ಯರ್ಥಿ ಆದಾಗಿನಿಂದಲೂ ಎಲ್ಲೆಡೆ ಜೋರಾಗಿ ಪ್ರಚಾರ ನಡೆಸ್ತಿದ್ದಾರೆ. ಯದುವೀರ್ ಹೋದಲ್ಲಿ ಬಂದಲ್ಲಿ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ. ಆದ್ರೆ ಈವರೆಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಎಲ್ಲಿಯೂ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಮೊಮ್ಮಗನ ಜೊತೆ ಸಂತೋಷದಿಂದ ಕಾಲಕಳೆಯುತ್ತಿದ್ದಾರೆ.