ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ಯೋಜನೆಯ ವಿರುದ್ದ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಸಮಾಜಘಾತುಕ ಶಕ್ತಿಗಳ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ ಸೇನೆ ಸೇರಲು ಬಯಸುವವರು ಯಾರು ಸರ್ವಾಜನಿಕ ಆಸ್ತಿಗಳಾದ ಬಸ್ಸು ಹಾಗು ರೈಲಿಗೆ ಬೇಂಕಿ ಹಚ್ಚುವುದಿಲ್ಲ. ಪ್ರತಿಭಟನೆಯ ಹೆಸರಿನಲ್ಲಿ ಬಡವರಿಗೆ ತೊಂದರೆ ಕೊಡುವುದಿಲ್ಲ ಹಿಂಸಾಚಾರದಲ್ಲಿ ಭಾಗಿಯಾಗಿರುವವರು ಬೇರೆಯವರು ಅಂತಹವರ ವಿರುದ್ದ ಅಲ್ಲಿನ ರಾಜ್ಯ ಸರ್ಕಾರಗಳು ಕ್ರಮ ಜರುಗಿಸುತ್ತವೆ ಎಂದು ಹೇಳಿದ್ದಾರೆ.
ದೇಶದ ವಿವಿಧೆಡೆ ನಡೆಯುತ್ತಿರುವ ಹಿಂಸಾಚಾರಕ್ಕೆ ವಿರೋಧ ಪಕ್ಷಗಳು ಸಹ ಕೈ ಜೋಡಿಸಿವೆ ಎಂಬ ಮಾಹಿತಿ ಇದೆ. ಸರ್ಕಾರ ಯಾವುದೇ ಯೋಜನೆಗಳನ್ನು ತಂದರು ಸಹ ಕಾಂಗ್ರೆಸ್ ಇಂತಹ ದುಷ್ಕೃತ್ಯ ನಡೆಸಲು ತಯಾರಾಗಿರುತ್ತದೆ ಕೆಲವರು ಟೂಲ್ ಕಿಟ್ ಮಾದರಿ ಪ್ರಚಾರ ಮಾಡಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜಗತ್ತಿನ ಅನೇಕ ದೇಶಗಳಲ್ಲಿ ಇಂತಹ ಯೋಜನೆಗಳು ಜಾರಿಯಲ್ಲಿವೆ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದ ಸಮಯದಲ್ಲಿ ಈ ಯೋಜನೆ ಜಾರಿ ಬಗ್ಗೆ ಅಧ್ಯಯನ ಹಾಗು ಸಮಾಲೋಚನೆಯನ್ನ ನಡೆಸಲಾಗಿತ್ತು. ಶೇ.90ರಷ್ಟು ಹಾಲಿ ಹಾಗು ಮಾಜಿ ಸೇನಾಧಿಕಾರಿಗಳು ಈ ಯೋಜನೆಯನ್ನ ಬೆಂಬಲಿಸಿದ್ದಾರೆ ಯುವಜನರು ದಯವಿಟ್ಟು ಇದರ ಪ್ರಯೋಜನ ಪಡೆಯಬೇಕು ಎಂದು ವಿನಂತಿಸಿದ್ದಾರೆ.

ಯೋಜನೆ ಬಗ್ಗೆ ಗೊಂದಲವಿದ್ದಲ್ಲಿ ಅದರ ಬಗ್ಗೆ ಚರ್ಚೆ ನಡೆಸಬೇಕು ಸರ್ಕಾರ ಅವರ ಗೊಂದಲವನ್ನ ಪರಿಹರಿಸುತ್ತೆ. ಒಂದು ಕಾಯ್ದೆ ಜಾರಿಗೆ ತಂದಾಗ ಗೊಂದಲ ಮೂಡುವುದು ಸಹಜ ಹಾಗೆಂದ ಮಾತ್ರಕ್ಕೆ ಜಾರಿಗೆ ತರಬಾರದು ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಅಗ್ನಿಪಥ್ ಯೋಜನೆಯಡಿ ಕೆಲಸಕ್ಕೆ ಸೇರಿದವರು ಸೇನೆಯಲ್ಲಿ ಮುಂದುವರಿಯುವ ಅವಕಾಶವಿದೆ ಈಗಿರುವ ಬೆಟಾಲಿಯನ್ಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಗ್ನಿಫತ್ ಯೋಜನೆಯನ್ನು ಕೃಷಿ ಕಾಯ್ದೆಗೆ ಹೋಲಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ದೇಶದ ಶೇ.90ರಷ್ಟು ಜನರು ಕಾಯ್ದೆಯನ್ನು ಬೆಂಬಲಿಸಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಿಂಪಡೆಯಬೇಕಾಯಿತ್ತು ಎಂದು ಹೇಳಿದ್ದಾರೆ.