ಸನಾತನ ಧರ್ಮದ ಬಗ್ಗೆ ನಟ ಪ್ರಕಾಶ ರಾಜ್ ಹೇಳಿರುವ ಮಾತು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಅವರ ಮಾತಿಗೆ ಇದೀಗ ದೇಶಾದ್ಯಂತ ಬಲ ಪಂಥಿಯ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ಇದೀಗ ಪ್ರಕಾಶ್ ರಾಜ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆಕ್ರೋಶ ವ್ಯಕ್ತ ಪಡಿಸುವ ಸಂದರ್ಭದಲ್ಲಿ ನಾಲಿಗೆ ಹರಿಬಿಟ್ಟು ತಮ್ಮ ಸಂಸದ ಸ್ಥಾನಕ್ಕೆ ಸೂಕ್ತವಲ್ಲ ರೀತಿಯಲ್ಲಿ ನಡೆದುಕೊಂಡಿದ್ದಾರೆ. ʼʼಯಾವಾಗಲೂ ಸುದ್ದಿಯಲ್ಲಿರಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಪ್ರಕಾಶ್ ರಾಜ್ ಅವರದ್ದು ಅತೃಪ್ತ ಆತ್ಮ ಎಂದು ಹೇಳಿಕೆ ನೀಡುವ ಮೂಲಕ ಅಗೌರವಯುತವಾಗಿ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸನಾತನ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆಯ ಬಗ್ಗೆ ಮಾತನಾಡಿದ ಅವರು ಡಾ.ಜಿ ಪರಮೇಶ್ವರ್ ಅವರನ್ನ ಒಬ್ಬ ಜಂಟಲ್ ಮ್ಯಾನ್ ಅಂತ ಅಂದುಕೊಂಡುದ್ದೆವು, ಅವರು ತಮ್ಮ ಪಕ್ಷದ ಮತಬ್ಯಾಂಕ್ ರಾಜಕಾರಣಕ್ಕಾಗಿ ಏನೇನೋ ಮಾತಾನಾಡುತ್ತಿದ್ದಾರೆ. ಹಿಂದೂ ಸನಾತನ ಧರ್ಮ ಅನ್ನುವುದು ನಿತ್ಯ ನೂತನ, ಪ್ರತಿಯೊಬ್ಬರಿಗೂ ಅದು ಚಿರಪರಿಚಿತ, ಇನ್ನು ಸನಾತನ ಧರ್ಮ ಹೊಸದಾಗಿ ಹುಟ್ಟಿಕೊಂಡಿರುವ ಧರ್ಮವಲ್ಲ ಅದು ಬಹಳ ಪುರಾತನ ಕಾಲದ್ದು ಎನ್ನುವುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಪರಮೇಶ್ವರ್ ವಿರುದ್ದ ಕಿಡಿಕಾರಿದರು.

ಆದರೆ ಪ್ರಕಾಶ್ ರಾಜ್ ನೀಡಿದ್ದ ಹೇಳಿಕೆಗೆ ಇದೀಗ ಪ್ರಹ್ಲಾದ್ ಜೋಶಿ ಆಡಿರುವ ಮಾತು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕೂಡ ಹುಟ್ಟು ಹಾಕಿದೆ, ಈ ಕುರಿತು ಇದೀಗ ಪ್ರಕಾಶ್ ರಾಜ್ ಹೇಳಿಕೆಗೆ ವ್ಯಕ್ತವಾಗುತ್ತಿರುವ ಆಕ್ರೋಶದಂತೆ ಇದೀಗ ಪ್ರಹ್ಲಾದ್ ಜೋಶಿ ಅವರ ಅತಿರೇಕದ ವರ್ತನೆಗೆ ಕೂಡ ವ್ಯಾಪಕವಾದ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.
