ಪ್ರಜ್ವಲ್ (prajwal) ವಿರುದ್ಧ ಜಾರಿಯಾಗುತ್ತಾ ರೆಡ್ ಕಾರ್ನರ್ ನೋಟಿಸ್ (Red corner notice) ಜಾರಿಯಾಗೋ ಸಾದ್ಯತೆಯಿದೆ. ಸದ್ಯ ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ (Lookout notice) ಎಸ್‌ಐಟಿ (SIT) ಅಧಿಕಾರಿಗಳು ಜಾರಿ ಮಾಡಿದ್ದಾರೆ. ಆದರೆ ಪ್ರಜ್ವಲ್ ದೇಶಕ್ಕೆ ವಾಪಸ್ ಮರಳೋದು ಡೌಟ್ ಆಗಿರುವ ಹಿನ್ನಲೆ ಇದೀಗ ಈ ಸಾಧ್ಯತೆ ಹೆಚ್ಚಳವಾಗಿದೆ.
ಸಧ್ಯ ಬಂಧನ ಭೀತಿ ಇರೋದ್ರಿಂದ ಪ್ರಜ್ವಲ್ ರೇವಣ್ಣ ವಾಪಸ್ ಬರೋದು ಡೌಟ್ ಎನ್ನಲಾಗ್ತಿದ್ದು, ಅವರ ಬಳಿ ರಾಜತಾಂತ್ರಿಕ ಪಾಸ್ ಪೋರ್ಟ್(Diplomatic passport) ಇರೋದ್ರಿಂದ ವೀಸಾ (VISA) ಆಗತ್ಯವೇ ಬೀಳುವುದಿಲ್ಲ. ಈ ಹಿನ್ನೆಲೆ ದೇಶದಿಂದ ದೇಶಕ್ಕೆ ಓಡಾಡಿಕೊಂಡು ಇರಬಹುದು. ಹೀಗಾಗಿ ಪ್ರಜ್ವಲ್ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಸಾಧ್ಯತೆ ಇದೆ.
ರೆಡ್ ಕಾರ್ನರ್ ನೋಟಿಸ್ ನೀಡಲು, ಮೊದಲು CID ಮುಖಾಂತರ CBIಗೆ ಮನವಿ ಮಾಡೋಕು. ನಂತರ ಸಿಬಿಐ ಇಂಟರ್‌ಪೋಲ್ ಮೂಲಕ ನೋಟಿಸ್ ಹೊರಡಿಸಬೇಕು. ಯಾವ ದೇಶದಲ್ಲಿದ್ರು ಆ ದೇಶದ ಪೊಲೀಸರಿಗೆ ಈ ನೋಟಿಸ್ ತಲುಪುತ್ತೆ ಅಲ್ಲಿನ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಂಧನ ಮಾಡುತ್ತಾರೆ.ಬಂಧಿಸಿದ ಬಳಿಕ ಸಂಬಂಧಪಟ್ಟ ದೇಶಕ್ಕೆ ಈ ಬಗ್ಗೆ ಮಾಹಿತಿ ನೀಡ್ತಾರೆ.