ಬೆಂಗಳೂರು: ಪೆನ್ ಡ್ರೈವ್ ಪ್ರಕರಣ, ಅತ್ಯಾಚಾರ ಪ್ರಕಾರಣದಲ್ಲಿ ಎಸ್‍ಐಟಿ (SIT) ಅಧಿಕಾರಿಗಳ ವಶದಲ್ಲಿರುವ ಪ್ರಜ್ವಲ್ ರೇವಣ್ಣ (Prajwal Revanna) ಪುರುಷತ್ವ ಪರೀಕ್ಷೆ ಮಾಡಲಾಗಿದೆ.
ಪ್ರಜ್ವಲ್ ಕಸ್ಟಡಿ ಅವಧಿ ಗುರುವಾರ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಅನುಮತಿ ಪಡೆದು ಪುರುಷತ್ವ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆ ನಡೆಸಲಾಗಿದೆ. ಇಂದು ಶಿವಾಜಿ ವಾಜಪೇಯಿ ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋದ ಅಧಿಕಾರಿಗಳು ಸಂಜೆ 5ರವರೆಗೆ ಪುರುಷತ್ವ ಪರೀಕ್ಷೆ ಸೇರಿದಂತೆ ತನಿಖೆಗೆ ಅಗತ್ಯವಿರುವ ಹಲವಾರು ಪರೀಕ್ಷೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ 6 ದಿನಗಳಿಂದಲೂ ಪ್ರಜ್ವಲ್ ಎಸ್ ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿಯೇ ಇದ್ದಾರೆ. ಯಾವುದೇ ಪ್ರಶ್ನೆಗೂ ಸಮರ್ಪಕ ಉತ್ತರ ನೀಡದೆ, ಪ್ರಜ್ವಲೇ ನುಣುಚಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳು ಟೆಕ್ನಿಕಲ್ ಆಗಿ ಆರೋಪವನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿಯೇ ಪುರುಷತ್ವ ಪರೀಕ್ಷೆ ಸೇರಿದಂತೆ ಹಲವಾರು ಪರೀಕ್ಷೆಗಳು ನಡೆದಿವೆ. ನಾಳೆಗೆ ಪ್ರಜ್ವಲ್ ಕಸ್ಟಡಿ ಅಂತ್ಯವಾಗಲಿದ್ದು, ವಿಚಾರಣೆ ವೇಳೆ ಆರೋಪಿಯ ಅಸಹಕಾರ ಬಾಕಿ ಇರುವ ಪ್ರಕ್ರಿಯೆಗಳನ್ನು ಕೋರ್ಟ್ ಗಮನಕ್ಕೆ ತಂದು ಮತ್ತೆ ಕಸ್ಡಡಿಗೆ ಪಡೆಯುವ ಯತ್ನವನ್ನು ಎಸ್ ಐಟಿ ಅಧಿಕಾರಿಗಳು ಮಾಡಲಿದ್ದಾರೆ.