ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹೆಚ್ಚಿನ ತನಿಖೆಗಾಗಿ ಹಾಸನದ ಪೊಲೀಸ್ ಅಧಿಕಾರಿಗಳನ್ನ ಎಸ್ಐಟಿಗೆ ನಿಯೋಜನೆ ಮಾಡಲಾಗಿದೆ. ಹಾಸನ ASP ತಮ್ಮಯ್ಯ, ಸೆನ್ ಠಾಣೆ ಇನ್ಸ್ಪೆಕ್ಟರ್ ಜಗದೀಶ್, ಯಸಳೂರು ಪೊಲೀಸ್ ಠಾಣೆಯ ಪಿಎಸ್ಐ ಶ್ರೀನಿವಾಸ್, ಇಬ್ಬರು ಸಿಬ್ಬಂದಿಯನ್ನ SITಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡಲಾಗಿದೆ.
ಹಾಸನದಲ್ಲಿ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಮಹಿಳಾ ಆಯೋಗ ಪೊಲೀಸರು ಮೊರೆ ಹೋಗಿದೆ. ಕಿರುತೆರೆ ನಟಿಯದ್ದು ಎನ್ನಲಾದ ವಿಡಿಯೋ ಜಾಲತಾಣದಲ್ಲಿ ಹರಿದಾಡ್ತಿದ್ದು, ಎಲ್ಲಾ ವಿಡಿಯೋಗಳನ್ನೂ ಡಿಲೀಟ್ ಮಾಡಿಸುವಂತೆ ಪೊಲೀಸರಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ. ಜೊತೆಗೆ ಮತ್ತಷ್ಟು ವಿಡಿಯೋಗಳು ರಿಲೀಸ್ ಆಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ..
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ತನಿಖೆ ಚುರುಕುಗೊಂಡಿದೆ.. ಹಾಸನ ಸಂಸದ ಪ್ರಜ್ವಲ್‌ಗೆ ಶೋಧಕಾರ್ಯ ಮುಂದುವರಿದಿದೆ.. ಪ್ರಜ್ವಲ್ ಯಾವ ದೇಶದಲ್ಲಿ ಅಡಗಿದ್ದಾರೆಂದು ಪತ್ತೆ ಮಾಡಲು SIT ಹರಸಾಹಸ ಪಡ್ತಿದೆ. ಇಂಟರ್‌ಪೋಲ್ ವ್ಯಾಪ್ತಿಯ 196 ದೇಶಗಳಲ್ಲಿ ಪ್ರಜ್ವಲ್‌ಗಾಗಿ ಶೋಧಕಾರ್ಯ ನಡೆಯುತ್ತಿದೆ.. ಪ್ರಜ್ವಲ್ ಆಪ್ತರ ಸಂಪರ್ಕದಲ್ಲೂ ಇಲ್ವಂತೆ. ಇನ್ನು, ಪ್ರಜ್ವಲ್‌ಗೆ ಬ್ಲೂ ಕಾರ್ನರ್ ನೋಟಿಸ್ ಕೊಟ್ಟು ತಲಾಷ್ ನಡೆಸಲಾಗ್ತಿದೆ.. SITಯ ಒಂದು ತಂಡ ವಿದೇಶಕ್ಕೆ ತೆರಳಿದ್ಯಂತೆ.
ಪ್ರಜ್ವಲ್ ರೇವಣ್ಣ ವಿರುದ್ಧ ಕೆ.ಆರ್ ನಗರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ.. ಪೊಲೀಸರು ಸಂತ್ರಸ್ತೆಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.. ಜಡ್ಜ್ ಎದುರು 164 ಹೇಳಿಕೆ ದಾಖಲಿಸಿ ಚನ್ನರಾಯಪಟ್ಟಣದ ಗನ್ನಿಕಡ ತೋಟದ ಮನೆಯಲ್ಲಿ ಸ್ಥಳ ಮಹಜರ್ ಮಾಡಿದ್ದಾರೆ.. ಗನ್ನಿಕಡದಲ್ಲಿ ಕೆಲಸ ಮಾಡೋ ವೇಳೆ ಲೈಂಗಿಕ ದೌರ್ಜನ್ಯವೆಸಗಿರೋ ಆರೋಪ ಹಿನ್ನೆಲೆ ದೂರು ದಾಖಲಿಸಲಾಗಿದೆ.