ಪ್ರಜ್ವಲ್ (prajwal revanna) ಪ್ರಕರಣ ಸಿಬಿಐಗೆ (CBI) ಕೊಡುವ ವಿಚಾರಕ್ಕೆ ಮಾಜಿ ಸಿಎಂ ಡಿ. ವಿ ಸದಾನಂದಗೌಡ (D.V.sadananda gowda) ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆಡಳಿತ ಮಾಡುವ ಸರ್ಕಾರ, ಅದರಲ್ಲಿ ಎಂಟ್ರಿ ಆಗ್ತಿದೆ ಎಂಬ ಸಂಶಯ ಬರುತ್ತೆ ಎಂದು ಆರೋಪಿಸಿದ್ದಾರೆ.
ಉತ್ತರ ಕನ್ನಡದ ಪರೇಶ್ ಮೇಸ್ತ (paresh mestha) ಘಟನೆಯಲ್ಲಿ ನಾವು ಸತ್ಯ ಹರಿಶ್ಚಂದ್ರರು ಅಂತ ಸಿಬಿಐಗೆ (CBI) ಕೊಟ್ಟಿಲ್ವಾ. ಇವತ್ತು ಇವರಿಗೆ ಸಿಬಿಐಗೆ ಕೊಡ್ಲಿಕೆ ಏನಾಗಿದೆ. ನಿಜವಾಗಿಯೂ ಇವರು ತಪ್ಪಿತಸ್ಥರು ಅಲ್ಲ ಅಂತ ಆದರೆ, ಇದರ ಹಿಂದೆ ಸಿದ್ದರಾಮಯ್ಯ (Siddaramaiah) ಡಿ.ಕೆ ಶಿವಕುಮಾರ್ (DK Shivakumar) ಇಲ್ಲ ಅಂದ್ರೆ ಆವತ್ತಿನ ರೀತಿಯಲ್ಲೇ ಸಿಬಿಐಗೆ ಕೊಡಬಹುದಲ್ವಾ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಡಿ.ಕೆ ಶಿವಕುಮಾರ್ ಅದ್ಭುತ ಕಲೆಗಾರ, SIT ಅವರು ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿಕೆ ಕೊಟ್ಟಿದ್ದಾರೆ ಇದರ ಸೂತ್ರಧಾರ ಡಿ.ಕೆ ಶಿವಕುಮಾರ್. ದೇವೇಗೌಡರನ್ನ (Devegowda) ನಾವು ತುಂಬ ಮೆಚ್ಚಲೇಬೇಕು. ಎಲ್ಲಿಯೂ ಕೂಡ ಪ್ರಕರಣದ ಬಗ್ಗೆ ದೇವೇಗೌಡರು ಮಾತಾಡಿಲ್ಲ. ಸಿದ್ದರಾಮಯ್ಯ ಕಾನೂನು ತಿರುಚುವ ಕೆಲಸ ಮಾಡಿದ್ದಾರೆಂದು ಆರೋಪಿಸಿದ್ದಾರೆ.