ಪ್ರಜ್ವಲ್ ರೇವಣ್ಣನ (Prajwal revanna) ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರ್ ಮುಗಿಸಿರುವ ಎಸ್ ಐ ಟಿ (SIT) ಸಾಕ್ಷಿಕಲೆಹಾಕೋ ಕೆಲಸ ಮಾಡಿದೆ.
ಸ್ಥಳ ಮಹಜರ್ ವೇಳೆ ಮೂರು ಪ್ರಕರಣಕ್ಕೂ ಪ್ರತ್ಯೇಕ ಹೇಳಿಕೆ ಪಡೆದಿರುವ ಎಸ್ ಐಟಿ ತನಿಖೆ ಮುಂದುವರೆಸಿದ್ದು , ಎರಡನೇ ಬಾರಿ ಕಸ್ಟಡಿ ಮುಗಿದ ನಂತರ ಪ್ರಜ್ವಲ್ ಜೈಲು ಪಿಕ್ಸ್ ಎನ್ನಲಾಗ್ತಿದೆ.
![](https://pratidhvani.com/wp-content/uploads/2024/06/PRAJWAL-REVANNA-1-1.png)
ಆದರೆ ಮೂರು ಪ್ರಕರಣಗಳಿಗು ತನಗು ಯಾವುದೇ ಸಂಬಂಧ ಇಲ್ಲ ಎನ್ನುತ್ತಿರುವ ಪ್ರಜ್ವಲ್ ರೇವಣ್ಣ ವಿಚಾರಣೆಯಲ್ಲಿ ಯಾವುದೇ ಮಾಹಿತಿಯನ್ನೂ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಆರೋಪಿ ಪ್ರಜ್ವಲ್ ರೇವಣ್ಣ ಈ ವರೆಗೆ ಹೇಳಿಕೆ ಎಸ್ ಐ ಟಿ ಮುಂದೆ ಯಾವುದೇ ಹೇಳಿಕೆ ನೀಡಿಲ್ಲ.
ಹೀಗಾಗಿ ಸಂತ್ರಸ್ತೆಯರ ಹೇಳಿಕೆ ಮತ್ತು ಮಹಜರ್ ವೇಳೆ ಪ್ರಜ್ವಲ್ ರೇವಣ್ಣ ನೀಡಿರುವ ಹೇಳಿಕೆ ತಾಳೆ ಮಾಡಿ ಮುಂದಿನ ತನಿಖೆ ಚಿಂತನೆ ನಡೆಸಿರುವ ಎಸ್ ಐ ಟಿ ಎರಡನೇ ಕಸ್ಟಡಿ ಮುಗಿದ ನಂತರ ಬಹುತೇಕ ನ್ಯಾಯಾಂಗ ಬಂಧನ ಫಿಕ್ಸ್ ಎನ್ನಲಾಗಿದೆ.