ದಾರಿ ಬಿಡುವ ಸಂಧರ್ಭದಲ್ಲಿ ಇಬ್ಬರು ವಾಹನ ಸವಾರರ ನಡುವೆ ಕಿರಿಕ್ ನಡೆದಿದೆ. ಈ ವೇಳೆ ಕಾರನ್ನ ಅಡ್ಡ ಹಾಕಿ ಕಾರ್ ನ ಬಾನೆಟ್ ಗೆ ಒದ್ದು ಕಾರ ಚಾಲಕನಿಗೆ ಬೈದು, ಬೈಕ್ ಸವಾರ ಪರಾರಿಯಾಗಿದ್ದಾನೆ.

ಯೂ ಟರ್ನ್ ಮಾಡುವ ವೇಳೆ ಕಾರು ಚಾಲಕ ಪ್ರವೀಣ್ ಹಾಗು ದ್ವಿಚಕ್ರವಾಹನ ಸವಾರನ ನಡುವೆ ಕಿರಿಕ್ ನಡೆದಿದೆ. ಈ ವೇಳೆ ಫಾಲೋ ಮಾಡಿಕೊಂಡು ಬಂದಿದ್ದ ದ್ವಿಚಕ್ರವಾಹನ ಸವಾರ, ನಂತರ ಕಾರು ಅಡ್ಡ ಹಾಕಿ ಕೃತ್ಯವೆಸಗಿದ್ದಾನೆ.
ಆ ಮೂಲಕ ನಗರದಲ್ಲಿ ರೋಡ್ ರೇಜ್ ಪ್ರಕರಣಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಕಾರ್ ಡ್ಯಾಷ್ ಕ್ಯಾಮ್ ನಲ್ಲಿ ವಾಹನ ಸವಾರನ ಕೃತ್ಯ ಸೆರೆಯಾಗಿದ್ದು,ಜಕ್ಕೂರು ಬಳಿಕ ಶ್ರೀರಾಮಪುರ ವಿಲೇಜ್ ಬಳಿ ಘಟನೆ ನಡೆದಿದೆ. ಯಲಹಂಕ ಸಂಚಾರಿ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ.