ಲೈಂಗಿಕ ದೌರ್ಜನ್ಯ (Sexual harresment) ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನ (Prajwal revanna) ಲಾಕ್ ಮಾಡೋಕೆ SIT ಸಕಲ ತಯಾರಿ ಮಾಡಿಕೊಂಡಿದೆ. ವಿದೇಶದಲ್ಲಿರುವ ಪ್ರಜ್ವಲ್‌ರನ್ನ ವಶಕ್ಕೆ ಪಡೆಯೋಕೆ ಕಾನೂನಾತ್ಮಕ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದ್ದು, ಪ್ರಜ್ವಲ್ ಭಾರತಕ್ಕೆ (India) ಮರಳಿದ್ರೆ ವಾಪಸ್ ಬರುತ್ತಿದ್ದಂತೆ ಎಸ್‌ಐಟಿ (SIT) ಅವರನ್ನ ವಶಕ್ಕೆ ಪಡೆಯಲಿದೆ.
ಒಂದು ವೇಳೆ ಭಾರತಕ್ಕೆ ವಾಪಸ್ ಬರದೇ ಇದ್ರೆ , ಆಗ ಇಂಟರ್‌ಪೋಲ್(inter poll) ಸಹಾಯದ ಮೂಲಕ ಬಂಧನ ಮಾಡಲು SIT ಪ್ಲಾನ್ ಮಾಡಿದೆ .ಪ್ರಜ್ವಲ್ ರೇವಣ್ಣ ವಿರುದ್ಧ ಎರಡು ಕೇಸ್‌ಗಳು ದಾಕಲಾಗಿದ್ದು ಸ್ಟ್ರಾಂಗ್ ಸೆಕ್ಷನ್‌ಗಳಿವೆ, ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಮೂರು ನೋಟಿಸ್ (Notice) ಜಾರಿ ಮಾಡಲಾಗಿದೆ. ಆದ್ರೆ ಪ್ರಜ್ವಲ್ ರೇವಣ್ಣ ಸದ್ಯ ವಿದೇಶದಲ್ಲಿದ್ದು, ವಿಚಾರಣೆಗೆ ಹಾಜರಾಗಿಲ್ಲ.
ಈ ನಡುವೆ ಮತ್ತೊಂದು ರೇಪ್ ಕೇಸ್ ಕೂಡ ಪ್ರಜ್ವಲ್ ವಿರುದ್ಧ ದಾಖಲಾಗಿದ್ದು IPC 376 ಅಡಿ ಅತ್ಯಾಚಾರ ಕೇಸ್‌ನಲ್ಲಿ ಸಂತ್ರಸ್ತೆಯ 164 ಹೇಳಿಕೆ ಈಗಾಗಲೇ ದಾಖಲಾಗಿದೆ. ಹೀಗಾಗಿ ಈಗ ಪ್ರಜ್ವಲ್‌ಗೆ ಶರಣಾಗೋದು ಬಿಟ್ಟು ಬೇರೆ ಆಯ್ಕೆಗಳಿಲ್ಲವೆಂಬ ಚರ್ಚೆ ಜೋರಾಗಿದೆ.