• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಪ್ರಜ್ವಲ್​ ಬಂಧಿಸಿದ್ದು, ಕರೆತಂದಿದ್ದು ಮಹಿಳಾ ಆಫಿಸರ್ಸ್​​..! ಯಾಕೆ ಗೊತ್ತಾ..?

ಪ್ರತಿಧ್ವನಿ by ಪ್ರತಿಧ್ವನಿ
May 31, 2024
in Uncategorized, ರಾಜಕೀಯ
0
ಪ್ರಜ್ವಲ್​ ಬಂಧಿಸಿದ್ದು, ಕರೆತಂದಿದ್ದು ಮಹಿಳಾ ಆಫಿಸರ್ಸ್​​..! ಯಾಕೆ ಗೊತ್ತಾ..?
Share on WhatsAppShare on FacebookShare on Telegram

ಲೈಂಗಿಕ ದೌರ್ಜನ್ಯ, ಅತ್ಯಾಚಾರ ಕೇಸ್​ ದಾಖಲಾಗ್ತಿದ್ದ ಹಾಗೆ ದೇಶ ಬಿಟ್ಟು ಜರ್ಮನಿಗೆ ಪರಾರಿ ಆಗಿದ್ದ ಜೆಡಿಎಸ್​​ ಸಂಸದ ಪ್ರಜ್ವಲ್​ ರೇವಣ್ಣ ಶುಕ್ರವಾರ 1 ಗಂಟೆ (ಗುರುವಾರ ಮಧ್ಯರಾತ್ರಿ) ಸುಮಾರಿಗೆ ಬಂಧನಕ್ಕೆ ಒಳಪಟ್ಟಿದ್ದಾರೆ. ಬೆಂಗಳೂರಿನ ಕೆಂಪೇಗೌಡ Airport ಗೆ ಬಂದು ಇಳಿಯುತ್ತಿದ್ದ ಹಾಗೆ ವಶಕ್ಕೆ ಪಡೆದ SIT ಟೀಂ ನೇರವಾಗಿ CCB ಕಚೇರಿಗೆ ಕರೆತರುವ ಕೆಲಸ ಮಾಡಿತ್ತು. ಆ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು, ಬರೋಬ್ಬರಿ ಐವರು ಮಹಿಳಾ ಅಧಿಕಾರಿಗಳು ಪ್ರಜ್ವಲ್​ ರೇವಣ್ಣ ಅವರನ್ನು ಕರೆತಂದಿದ್ದರು. ಪೊಲೀಸ್​ ಜೀಪ್​ನಲ್ಲಿ ಕೇವಲ Driver ಹೊರತು ಪಡಿಸಿ ಉಳಿದ ಎಲ್ಲರೂ ಮಹಿಳಾ ಅಧಿಕಾರಿಗಳೇ ಆಗಿದ್ದರು. ಇದು ಹೇಗೆ ಅನ್ನೋದು ಸಾಕಷ್ಟು ಜನರ ಪ್ರಶ್ನೆಯಾಗಿದೆ.

ADVERTISEMENT

ಬಂಧನ ಮಾಡುವಾಗ ಯಾವುದೇ ಹೈಡ್ರಾಮಾ ನಡೆಯಬಾರದು ಅನ್ನೋ ಕಾರಣಕ್ಕೆ ಮೊದಲೇ ಬಂದೋಬಸ್ತ್​​ ಮಾಡಿಕೊಂಡಿದ್ದರು. ಆ ಬಳಿಕ ಎಸ್​ಐಟಿ ಕಚೇರಿ ಬಳಿಯೂ ಹೆಚ್ಚುವರಿ ಭದ್ರತೆ ಮಾಡಿಕೊಳ್ಳಲಾಗಿತ್ತು. ಏರ್​ಪೋರ್ಟ್​ನಲ್ಲಿ ವಶಕ್ಕೆ ಪಡೆದುಕೊಂಡು ಎಸ್​ಐಟಿ ಕಚೇರಿಗೆ ಕರೆತಂದಾಗ ಪ್ರಜ್ವಲ್ ಹಾಗು ಡ್ರೈವರ್​ ಹೊರತುಪಡಿಸಿ ಉಳಿದ ಐವರು ಮಹಿಳಾ ಸದಸ್ಯರಾಗಿದ್ದರು. ಎಸ್​ಐಟಿಯಲ್ಲಿ ಪುರುಷ ಅಧಿಕಾರಿಗಳೂ ಇದ್ದರು ಮಹಿಳಾ ಅಧಿಕಾರಿಗಳ ತಂಡವನ್ನು ನಿಯೋಜನೆ ಮಾಡಿದ್ದು ಯಾಕೆ ಅನ್ನೋದು ಬಿಸಿಬಿಸಿ ಚರ್ಚೆಯ ಭಾಗವಾಗಿದೆ. ಅದಕ್ಕೆ ಎರಡು ಪ್ರಮುಖ ಕಾರಣಗಳು ಇವೆ.

ಯಾವುದೇ ಒಂದು ಪ್ರಕರಣದಲ್ಲಿ ಮಹಿಳೆ ದೂರು ನೀಡಿದಾಗ ತನಿಖಾಧಿಯಾಗಿ ಮಹಿಳಾ ಅಧಿಕಾರಿಯನ್ನೇ ನೇಮಕ ಮಾಡಬೇಕು ಅನ್ನೋದು ನಿಯಮ. ಇದೇ ಕಾರಣಕ್ಕೆ ಈ ಪ್ರಕರಣದಲ್ಲಿ ಮಹಿಳಾ ಅಧಿಕಾರಿಗಳ ತಂಡ ಕಟ್ಟಲಾಗಿದೆ. ಸಾಕಷ್ಟು ಮಹಿಳಾ ಸಂತ್ರಸ್ತೆಯರು ಇರುವ ಕಾರಣದಿಂದ ವಿಚಾರಣೆ ಮಾಡಲು ಮಹಿಳಾ ಅಧಿಕಾರಿಗಳ ಅವಶ್ಯಕತೆ ಇದೆ. ಅದೇ ಕಾರಣಕ್ಕೆ SIT ತನಿಖಾ ತಂಡದಲ್ಲಿ ಬಹುತೇಕ ಮಹಿಳಾ ಅಧಿಕಾರಿಗಳನ್ನೇ ನಿಯೋಜನೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ ಒಟ್ಟು ಮೂರು ತಂಡಗಳಲ್ಲಿ ಎರಡು ತಂಡಕ್ಕೆ ಇಬ್ಬರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅದೇ ಕಾರಣದಿಂದ ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ಕರೆದುಕೊಂಡು ಬರಲಾಗ್ತಿದೆ ಎನ್ನಬಹುದು. ಮತ್ತೊಂದು ಕಾರಣ ಈ ರೀತಿ ಇದೆ.

ಮಹಿಳಾ ಪೀಡಕ ಎಂದು ಈಗಾಗಲೇ ಸಮಾಜ ಮಾತನಾಡಿಕೊಳ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಛೀ ಥೂ ಎನ್ನಲಾಗ್ತಿದೆ. ಆದರೆ ಈ ಕೇಸ್​ ಮುಂದಿನ ದಿನಗಳಲ್ಲಿ ಕೋರ್ಟ್​ನಲ್ಲಿ​ ಸಾಕ್ಷ್ಯಾಧಾರಗಳ ಕೊರತೆಯಿಂದ ಶಿಕ್ಷೆ ಆಗುವ ಪ್ರಮಾಣ ತೀರಾ ಕಡಿಮೆ ಎನ್ನುವುದು ಬಹುತೇಕ ಕಾನೂನು ತಜ್ಞರ ಅಭಿಪ್ರಾಯ. ಹೀಗಿರುವಾಗ ಸಮಾಜದ ದೃಷ್ಟಿಯಲ್ಲಿ ಈಗಾಗಲೇ ಸ್ತ್ರೀ ಪೀಡಕ ಎನ್ನುವ ಪಟ್ಟ ಹೊತ್ತುಕೊಂಡಿರುವ ವ್ಯಕ್ತಿಯನ್ನು ಮಹಿಳಾ ಅಧಿಕಾರಿಗಳೇ ವಿಚಾರಣೆ ನಡೆಸಿ, ಹಾದಿ ಬೀದಿಯಲ್ಲಿ ಮಹಿಳಾ ಅಧಿಕಾರಿಗಳೇ ಈತನನ್ನು ಎಳೆದಾಡಿದರೆ ಅದರಿಂದ ಆಗುವ ಹಿಂಸೆ ಜೈಲು ಶಿಕ್ಷೆಗಿಂತಲೂ ಅಧಿಕ ಎನ್ನುವುದು ತನಿಖಾ ತಂಡದ ನಿರ್ಧಾರ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಮಹಿಳಾ ಅಧಿಕಾರಿಗಳಿಗೆ ಈ ಹೊಣೆ ವಹಿಸಿರುವ ಸಾಧ್ಯತೆಗಳಿವೆ ಎನ್ನುತ್ತದೆ ಪೊಲೀಸ್​ ಮೂಲಗಳು. ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಆದರೆ ತನಿಖಾ ಹಂತದಲ್ಲೇ ಶಿಕ್ಷೆ ಅನುಭವಿಷಬೇಕು ಎನ್ನುವ ನಿರ್ಧಾರದಂತಿದೆ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಗುದನಾಳದಲ್ಲಿ ಚಿನ್ನ ಇಟ್ಟುಕೊಂಡು ಸಾಗಿಸಲು ಯತ್ನಿಸಿದ ಗಗನಸಖಿ ಅರೆಸ್ಟ್!

Next Post

ಅತ್ಯಾಚಾರ ಮಾಡಿ, ಕಿರುಕುಳ, ಮದುವೆ ದಿನ ಯುವತಿ ಅಪಹರಿಸಲು ಯತ್ನ

Related Posts

ಡಿಕೆ ಶಿವಕುಮಾರ್ ಪರ ಘೋಷಣೆ ಜೋರಾಗಿದೆ: ಬೆಂಬಲಿಗರ ಸಂಭ್ರಮ, ಹೈಕಮಾಂಡ್‌ನಿಂದ ಎಚ್ಚರಿಕೆ!
Uncategorized

ಡಿಕೆ ಶಿವಕುಮಾರ್ ಪರ ಘೋಷಣೆ ಜೋರಾಗಿದೆ: ಬೆಂಬಲಿಗರ ಸಂಭ್ರಮ, ಹೈಕಮಾಂಡ್‌ನಿಂದ ಎಚ್ಚರಿಕೆ!

by ಪ್ರತಿಧ್ವನಿ
May 27, 2026
0

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಉಪ ಮುಖ್ಯಮಂತ್ರಿ ಡಿ‌ ಕೆ‌‌ ಶಿವಕುಮಾರ್ ಅವರ ಬೆಂಬಲಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಸಿಎಂ ಸ್ಥಾನಕ್ಕೆ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
Next Post
ಅತ್ಯಾಚಾರ ಮಾಡಿ, ಕಿರುಕುಳ, ಮದುವೆ ದಿನ ಯುವತಿ ಅಪಹರಿಸಲು ಯತ್ನ

ಅತ್ಯಾಚಾರ ಮಾಡಿ, ಕಿರುಕುಳ, ಮದುವೆ ದಿನ ಯುವತಿ ಅಪಹರಿಸಲು ಯತ್ನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada