ರಾಜ್ಯದಲ್ಲಿ ಮುಸ್ಲಿಮರ (Muslim) ಸಮರ್ಥನೆಗೆ ಕಾಂಗ್ರೆಸ್ ಕೆಲ ನಿರುದ್ಯೋಗಿ ನಾಯಕರನ್ನು ಮುಂದೆ ಬಿಟ್ಟಿದೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad joshi) ಆರೋಪ ಪರೋಕ್ಷವಾಗಿ ಬಿಕೆ ಹರಿಪ್ರಸಾದ್ (BK Hariprasad) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆರ್. ಎಸ್. ಎಸ್ (RSS) ಕುರಿತ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದು, ಕಾಂಗ್ರೆಸ್ ಉದಯಗಿರಿ ಗಲಭೆ ಪ್ರಕರಣವನ್ನು (Udayagiri riot case) ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.ಈ ಕಾಂಗ್ರೆಸ್ ನವರು ನಿರುದ್ಯೋಗಿ ನಾಯಕರ ಕಡೆ ಮಾತನಾಡುಸುತ್ತಿದ್ದಾರೆ. ಆರ್ ಎಸ್ ಎಸ್ ಬಗ್ಗೆ ನಿರುದ್ಯೋಗಿ ಲೀಡರ್ ಗಳು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ, ಭಯೋತ್ಪಾದಕರಿಗೆ ಬೆಂಬಲ ನೀಡುವ ರೀತಿಯಲ್ಲಿ ಈ ಹಿಂದೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದರು.ದೇಶವನ್ನು ಮಾರಿಯಾದ್ರು,ದೇಶದ ಹಿತವನ್ನು ಕಡೆಗಣಿಸಿಯಾದ್ರು ಅಧಿಕಾರದಲ್ಲಿ ಇರಬೇಕು ಎನ್ನುವುದು ಕಾಂಗ್ರೆಸ್ ನೀತಿ.ಹಿಂದೂ ವಿರೋಧ ನೀತಿಗೆ ಬಗ್ಗೆ ಮಾತನಾಡಿದ್ರೆ ಅವರಿಗೆ ಕಾಂಗ್ರೆಸ್ ನಲ್ಲಿ ಹುದ್ದೆ ಕೊಡತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣ ಉಸ್ತುವಾರಿಗಳು ತಾವೇ ಪ್ರಧಾನಿಗಳಂತೆ ಮಾತನಾಡುತ್ತಿದ್ದಾರೆ.ಅವರು ಏನೇ ಮಾತನಾಡಿದರು ಸಚಿವ ಸ್ಥಾನ ಸಿಗಲ್ಲ, ಅವರನ್ನು ಸಿಎಂ ಸಿದ್ದರಾಮಯ್ಯ ಸಚಿವರನ್ನಾಗಿ ಯಾವುದೇ ಕಾರಣಕ್ಕೂ ಮಾಡಲ್ಲ ಎಂದು ಬಿಕೆ ಹರಿಪ್ರಸಾದ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.