ಚಿಕ್ಕಮಗಳೂರು : ರಾಜ್ಯದಲ್ಲಿ ಕುರ್ಚಿ ಕದನದ ನಡುವೆಯೇ ಹಿರಿಯ ಸಚಿವರೊಬ್ಬರು ಪದತ್ಯಾಗದ ಮಾತುಗಳನ್ನಾಡಿರುವುದು ಸಂಚಲನ ಮೂಡಿಸಿದೆ. ನನಗೆ ಉಸ್ತುವಾರಿ ಜವಾಬ್ದಾರಿ ಸಾಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿಂದು ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಸಚಿವನಾಗಿರಲಿ, ಇಲ್ಲದಿರಲಿ ಜಿಲ್ಲೆಯ ಬಗ್ಗೆ ವೈಯಕ್ತಿಕ ಹಿತಾಸಕ್ತಿ ಇದೆ. ಸಚಿವ ಸಂಪುಟ ವಿಸ್ತರಣೆ ಯಾವಾಗಾದ್ರು ಆಗಲಿ ಚಿಕ್ಕಮಗಳೂರು ಜಿಲ್ಲೆಯ ಶಾಸಕರೇ ಉಸ್ತುವಾರಿ ಸಚಿವರಾಗಲಿ ಎಂಬ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ : ಇಸ್ರೇಲ್–ಇರಾನ್ ಸಂಘರ್ಷ : ಸುದ್ದಿ ಚಾನೆಲ್ಗಳ ಟಿಆರ್ಪಿ ಪ್ರಕಟಣೆ ಸ್ಥಗಿತ
ಜಿಲ್ಲೆಯಲ್ಲಿ 5 ಜನ ಶಾಸಕರಿದ್ದಾರೆ, ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಿ, ಅವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಲಿ. ನನಗೆ ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವ ಸ್ಥಾನ ಸಾಕು, ಜಿಲ್ಲೆಗೆ ಆದ್ಯತೆ ನೀಡಿ ಎಂದು ಪಕ್ಷದ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟಿರುವ ವಿಚಾರವಾಗಿದೆ. ಆದರೆ ಯಾವಾಗಲೇ ಆಗಲಿ ಸಂಪುಟ ಪುನರ್ ರಚನೆಯ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಆದ್ಯತೆ ನೀಡಬೇಕು ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಒತ್ತಾಯಿಸಿದ್ದಾರೆ.






