ನಾಮ ಪತ್ರಿಕೆ(Nominations )ಸಲ್ಲಿಕೆ ಮಾಡಿದ ನಂತರ ಸಾಲು ಸಾಲು ಬಿಜೆಪಿ ಅಭ್ಯರ್ಥಿಗಳು (BJP candidates) ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ .ಒಂದರ್ಥದಲ್ಲಿ ಹಳೆ ಮೈಸೂರು ಭಾಗಕ್ಕೆ ಅಭ್ಯರ್ಥಿಗಳಿಗೆ ಆದಿಚುಂಚನಗಿರಿ(aadi chunchana giri) ಪವರ್ ಸೆಂಟರ್ ಆಗಿ ಬದಲಾಗಿದೆ.
ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಉತ್ತರ (Bangalore north) ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha karandlaje) ಮತ್ತು ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ (yaduveer odeyar) ಇನ್ನುಳಿದ ಹಾಗೆ ಸಿಟಿ ರವಿ (CT ravi) ಮತ್ತು ಇನ್ನಷ್ಟು ಬಿಜೆಪಿ ನಾಯಕರು ಆದಿಚುಂಚನಗಿರಿ ಮಠಕ್ಕೆ ಭೇಟಿ ಕೊಟ್ಟಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಕೊನೆಗಾಣಿಸಲು ಜೆಡಿಎಸ್ ಮತ್ತು ಬಿಜೆಪಿ (Jds & BJP ) ಮೈತ್ರಿ ಬಲ ಪ್ರಯತ್ನ ಪಡುತ್ತಿದ್ದು ಈ ಬಾರಿಯ ಚುನಾವಣೆಯಲ್ಲಿ ಇದನ್ನ ಸಾಧ್ಯವಾಗಿಸಲು, ಮೈತ್ರಿ ನಾಯಕರು ಈ ನಡೆಯನ್ನ ಅನುಸರಿಸುತ್ತಿದ್ದಾರೆ ಎಂಬ ಚರ್ಚೆಗಳು ಗರಿಗಿದವೆ . ಒಟ್ನಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷದ ನಾಯಕರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.