ಶಾಸಕ ಮುನಿರತ್ನ ವಿರುದ್ಧದ ಬರಹಗಳಿರುವ ಪೋಸ್ಟರ್‌ಗಳು ಕ್ಷೇತ್ರದೆಲ್ಲೆಡೆ ದಿಢೀರನೆ ಕಾಣಿಸಿದ್ದು, ಆರ್.ಆರ್.ನಗರಕ್ಕೆ ಮಂಜೂರಾಗಿದ್ದ 10 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು?
ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ಆರಂಭಿಸುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಆರ್.ಆರ್. ನಗರದಲ್ಲಿ ಪೋಸ್ಟರ್ ಪಾಲಿಟಿಕ್ಸ್ ಶುರುವಾಗಿದೆ.
ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಬರಹಗಳಿರುವ ಪೋಸ್ಟರ್‌ಗಳು ಕ್ಷೇತ್ರದೆಲ್ಲೆಡೆ ದಿಢೀರನೆ ಕಾಣಿಸಿದ್ದು, ಆರ್.ಆರ್.ನಗರಕ್ಕೆ ಮಂಜೂರಾಗಿದ್ದ 10 ಸಾವಿರ ಕೋಟಿ ರೂ. ಎಲ್ಲಿ ಹೋಯ್ತು? ಎಂದು ಪೋಸ್ಟರ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಈ ಪೋಸ್ಟರ್‌ಗಳಲ್ಲಿ ನೊಂದ ಗುತ್ತಿಗೆದಾರರು ಪ್ರಾಯೋಜಿಸುವ “Guess & Win Contest” ಎಂಬ ತಲೆಬರಹವನ್ನ ಸಹ ಹಾಕಲಾಗಿದೆ.

ಶಾಸಕ ಮುನಿರತ್ನ ಅವರು 2013ರಿಂದ ಇಲ್ಲಿಯವರೆಗೆ 10 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ ಕ್ಷೇತ್ರದಲ್ಲಿ ರಸ್ತೆ, ಪಾರ್ಕ್, ಕೆರೆಗೆ ವಿನಿಯಯೋಗಿಸಿರುವುದು 2 ರಿಂದ 3 ಸಾವಿರ ಕೋಟಿ ರೂ. ಮಾತ್ರ. ಹಾಗಾದರೆ ಉಳಿದ ಹಣ ಎಲ್ಲಿ ಹೋಯ್ತು? ಊಹಿಸಿ ಎಂದು ಪೋಸ್ಟರ್‌ನಲ್ಲಿ ಪ್ರಶ್ನಿಸಲಾಗಿದೆ.
ಅಲ್ಲದೇ 10 ಸಾವಿರ ಕೋಟಿ ರೂ. ಕಾಮಗಾರಿ ತೋರಿಸುವುದಾದರೆ ಕರೆ ಮಾಡಿ ಅತ್ಯಾಕರ್ಷಕ ಉಡುಗೊರೆ ಗೆಲ್ಲಿ ಎಂದು 8447704040 ಮೊಬೈಲ್ ನಂಬರ್‌ಗೆ ಕಾಲ್ ಮಾಡಿ ಎಂದು ಪೋಸ್ಟರ್‌ನಲ್ಲಿ ಹಾಕಲಾಗಿದೆ. ಈ ಪೋಸ್ಟರ್‌ಗಳನ್ನ ಮುನಿರತ್ನಂ ಅವರ ಕಚೇರಿ ಸೇರಿದಂತೆ, ಆರ್.ಆರ್. ನಗರದ ಮುಖ್ಯದ್ವಾರ, ಬಸ್ ನಿಲ್ದಾಣಗಳಲ್ಲಿ ಅಂಟಿಸಲಾಗಿದೆ.