ಫೀಲ್ಡಿಂಗ್ ಮಾಡುವಾಗ ಕ್ಯಾಚ್ ಹಿಡಿಯಲು ಯತ್ನಿಸಿದ ರೋಹಿತ್ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಗಾಯ
ಬಾಂಗ್ಲಾದೇಶ ವಿರುದ್ಧ ಭಾರತ ಸೋಲು ಕಂಡರೂ ನಾಯಕ ರೋಹಿತ್ ಶರ್ಮಾ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ವೀರೋಚಿತ ಸೋಲು ಕಂಡಿದ್ದು, ಬಾಂಗ್ಲಾದೇಶ 5 ರನ್ಗಳ ರೋಚಕ ಗೆಲುವು ಸಾಧಿಸಿದೆ.
ಅಂತಿಮ ಹಂತದಲ್ಲಿ ಕ್ರೀಸ್ಗೆ ಬಂದ ನಾಯಕ ರೋಹಿತ್ ಪಂದ್ಯ ಗೆಲ್ಲಿಸಲು ಹೋರಾಟ ನಡೆಸಿ ವಿಫಲರಾದರು. ಫೀಲ್ಡಿಂಗ್ ಮಾಡುವಾಗ ಕ್ಯಾಚ್ ಹಿಡಿಯಲು ಯತ್ನಿಸಿದ ರೋಹಿತ್ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು.
ಆದರೆ ಎಡಗೈ ಗಾಯದ ನಡುವೆಯೂ ಮೈದಾನಕ್ಕಿಳಿದ ರೋಹಿತ್ ಬಾಂಗ್ಲಾದೇಶ ಜೊತೆ ಹುಲಿಯಂತೆ ಕಾದಾಡಿದರು. 5 ಸಿಕ್ಸ್, 3 ಬೌಂಡರಿ ಸಿಡಿಸಿ 51 ರನ್ ಗಳಿಸಿದ ರೋಹಿತ್ ಔಟಾಗದೆ ಅಜೇಯರಾಗಿ ಉಳಿದರು.
ನೋವಿನ ನಡುವೆಯೂ ರೋಹಿತ್ ಗೆಲುವಿಗಾಗಿ ನಡೆಸಿದ ಹೋರಾಟ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದು, ಬಿಗ್ ಸೆಲ್ಯೂಟ್, that’s our captain ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಕೂಡ Massive Respect Bro ಎಂದು ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ