ಒಂದು ಕಾಲದಲ್ಲಿ ಹೊಯ್ಸಳರ ರಾಜಧಾನಿಯಾಗಿದ್ದ ಹಳೇಬೀಡಿನಲ್ಲಿ ರಸ್ತೆ ಕಾಮಗಾರಿಗಾಗಿ ಐತಿಹಾಸಿಕ ಕೋಟೆ ಗೋಡೆಯನ್ನು ಕೆಡವಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಒಂದು ಕಾಲದಲ್ಲಿ ಹೊಯ್ಸಳರ ರಾಜಧಾನಿಯಾಗಿದ್ದ (capital of Hoysalas) ಹಳೇಬೀಡಿನಲ್ಲಿ ಶತಮಾನಗಳಿಂದ ನಿಂತಿದ್ದ ಐತಿಹಾಸಿಕ ಕೋಟೆಯನ್ನು (fortification) ಇತ್ತೀಚೆಗೆ ರಸ್ತೆ ನಿರ್ಮಿಸಲು ಸಲುವಾಗಿ ಕೆಡವಿದ್ದಾರೆ. ವಿಶ್ವ ಪರಂಪರೆಯ ತಾಣದ ಟ್ಯಾಗ್ಗೆ ಶಿಫಾರಸು ಮಾಡಲಾದ ಈ ಸ್ಥಳದಲ್ಲಿ ಇಂತಹ ಘಟನೆ ಸಂಭವಿಸಿದ್ದು ಜನರು ಆಘಾತಕ್ಕೊಳಗಾಗಿದ್ದಾರೆ.
ಇತ್ತೀಚೆಗೆ ದಿ ಹಿಂದೂ ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ, ಸ್ಥಳೀಯ ನಿವಾಸಿ ಮಧು ಮಾತನಾಡಿ, “ಶತಮಾನಗಳಷ್ಟು ಹಳೆಯದಾದ ಈ ಕೋಟೆಯ ಗೋಡೆಯನ್ನು (fort wall) ಬೃಹತ್ ಬಂಡೆಗಳಿಂದ ನಿರ್ಮಿಸಲಾಗಿದೆ. ಇಷ್ಟು ವರ್ಷಗಳಾದರು ಅದು ಗಟ್ಟಿಯಾಗಿ ಉಳಿದಿತ್ತು ಆದರೆ ಸುಮಾರು 15 ದಿನಗಳ ಹಿಂದೆ ಇದನ್ನು ಕೆಡವಲಾಗಿದೆ ಎಂದು ಹೇಳಿದ್ದಾರೆ.
ಹಳೇಬೀಡಿನ ಸರ್ವೆ ನಂಬರ್ 501/3ರಲ್ಲಿ ಇದ್ದ ಕೋಟೆ ಗೋಡೆಯನ್ನು 20 ಅಡಿ ಅಗಲದ ರಸ್ತೆಗೆ ಬದಲಾಯಿಸಲಾಗಿದೆ. ಸುತ್ತಲೂ ಬಿದ್ದಿರುವ ಬೃಹತ್ ಬಂಡೆಗಳು ಕೋಟೆಯು ಒಂದು ಕಾಲದಲ್ಲಿ ಹೇಗೆ ಇತ್ತು ಎಂಬ ಕಲ್ಪನೆಯನ್ನು ನೀಡುತ್ತದೆ. ಹೊಸ ರಸ್ತೆಯ ಸಮೀಪದಲ್ಲಿ ವಸತಿ ಲೇಔಟ್ ಬರುವ ನಿರೀಕ್ಷೆಯಿದೆ. ಸ್ಥಿರಾಸ್ತಿದಾರರು (realtors) ಸಹಾಯ ಮಾಡಲು ಕೋಟೆ ಗೋಡೆಯನ್ನು ಕೆಡವಲಾಗಿದೆ ಎಂದು ಹೇಳಲಾಗಿದೆ.
ಹೊಯ್ಸಳ ಅರಸರು (Hoysala rulers) 11ನೇ ಶತಮಾನದಲ್ಲಿ ಗ್ರಾನೈಟ್ ಬಂಡೆಗಳನ್ನು ಬಳಸಿ ಕೋಟೆಯನ್ನು ನಿರ್ಮಿಸಿದ್ದರು. ಇದು ರಾಜಧಾನಿ ಟೌನ್ಶಿಪ್ಗೆ ರಕ್ಷಣೆ ಗೋಡೆಯಾಗಿ ಕಾರ್ಯನಿರ್ವಹಿಸಿತು, ಇದರಲ್ಲಿ ಹೊಯ್ಸಳೇಶ್ವರ, ಶಾಂತಿನಾಥ ಬಸದಿ ಸೇರಿದಂತೆ ಇತರ ಐತಿಹಾಸಿಕ ರಚನೆಗಳು ಮತ್ತು ಸ್ಮಾರಕಗಳು ಸೇರಿವೆ. ಕೆಲ ವರ್ಷಗಳ ಹಿಂದೆ ಕೋಟೆಯ ಗೋಡೆಯ ಭಾಗಗಳು ಹಾನಿಗೊಳಗಾದವು. ಆದಾಗ್ಯೂ, ಇತ್ತೀಚಿನ ಘಟನೆಗಳು ಐತಿಹಾಸಿಕ ರಚನೆಗಳನ್ನು ಸಂರಕ್ಷಿಸಲು ಆಸಕ್ತಿ ಹೊಂದಿರುವವರಿಗೆ ಆಘಾತವನ್ನುಂಟು ಮಾಡಿದೆ. ಬೇಲೂರು ರಸ್ತೆಯಲ್ಲಿರುವ ಕೋಟೆ ಗೋಡೆಯ ಹೊರತಾಗಿ, ಜೈನ ಬಸದಿಯ ಸಮೀಪವಿರುವ ಇನ್ನೊಂದು ಭಾಗವು ಇತ್ತೀಚಿಗೆ ಹಾನಿಗೊಳಗಾಗಿತ್ತು.
”ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಸ್ಥಳೀಯ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಪದೇ ಪದೇ ಕೋಟೆ ಗೋಡೆಗೆ ಹಾನಿಯಾಗುತ್ತಿರುವ ಘಟನೆಗಳಿಗೆ ಕಾರಣ.” ಎಂದು ಹೆಸರು ಹೇಳಲಿಚ್ಛಿಸದ ನಿವಾಸಿಯೊಬ್ಬರು ತಿಳಿಸಿದರು.
ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಹಳೇಬೀಡು ವಾರಾಂತ್ಯದಲ್ಲಿ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕಳೆದ ಕೆಲವು ವರ್ಷಗಳಿಂದ, ಈ ಸ್ಥಳವು ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದೆ. ಭಾರತೀಯ ಪುರಾತತ್ವ ಇಲಾಖೆಯು ಸ್ಮಾರಕಗಳ ಮೇಲೆ ನಿಯಂತ್ರಣ ಹೊಂದಿದೆ. ಆದರೆ ಸ್ಮಾರಕಗಳ ಸುತ್ತಲಿನ ಸ್ಥಳಗಳು ಅಸುರಕ್ಷಿತವಾಗಿವೆ ಎಂದು ದಿ ಹಿಂದೂ ವರದಿ ಮಾಡಿದೆ.
ಕೋಟೆ ಗೋಡೆಗೆ ಹಾನಿಯಾಗಿರುವ ವಿಚಾರವನ್ನು ‘ದಿ ಹಿಂದೂ’ ಪತ್ರಿಕೆಯು ಹಾಸನ ಉಪ ವೃತ್ತದ ಎಎಸ್ಐ ಸಂರಕ್ಷಣಾ ಸಹಾಯಕ ಕೆ.ಗೌತಮ್ ಅವರ ಗಮನಕ್ಕೆ ತಂದಾಗ, ಕೋಟೆಯು ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. “ನಾವು ಸ್ಮಾರಕಗಳನ್ನು ನೋಡಿಕೊಳ್ಳುತ್ತಿದ್ದೇವೆ. ರಾಜ್ಯ ಸರಕಾರದ ಮುಜರಾಯಿ ಇಲಾಖೆ ಅಥವಾ ಪುರಾತತ್ವ ಇಲಾಖೆಯನ್ನು ಸಂಪರ್ಕಿಸಬಹುದು,” ಎಂದರು.
ಆದರೆ, ಸ್ಥಳೀಯರ ಪ್ರಕಾರ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬೆಳವಣಿಗೆಗಳ ಬಗ್ಗೆ ತಿಳಿದಿದ್ದರೂ ಅವರು ಕೋಟೆ-ಗೋಡೆಯ ರಕ್ಷಣೆಗೆ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.