ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಈ ಚುನಾವಣೆ ಮುಂದಿನ 25 ವರ್ಷಗಳ ಕಾಲ ಗುಜರಾತ್ ಭವಿಷ್ಯವನ್ನ ನಿರ್ಧರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುರುವಾರ ಭನಸ್‌ಕಾಂತ ಜಿಲ್ಲೆಯ ಪಾಲನ್‌ಪುರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಡಬಲ್ ಇಂಜಿನ ಸರ್ಕಾರವು ಈಗಾಗಲೇ ಗುಜರಾತ್‌ನಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನ ಮಾಡಿದೆ. ಈ ಚುನಾವಣೆಯೂ ಯಾರು ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ ಎಂದಲ್ಲ ಇದು ಗುಜರಾತ್‌ನ ಮುಂದಿನ 25 ವರ್ಷಗಳ ಭವಿಷ್ಯವನ್ನ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಪ್ರವಾಸೋದ್ಯಮ, ಹೈನುಗಾರಿಕೆ, ನೀರಿನ ಸಮಸ್ಯೆ, ಕರೆಂಟ್, ಪೌಷ್ಠಿಕಾಂಶದ ಕೊರತೆಗಳನ್ನು ಅತಿ ಕಡಿಮೆ ಸಮಯದಲ್ಲಿ ನೀಗಿಸಲು ಪ್ರಯತ್ನಿಸಿದ್ದೇವೆ ಮತ್ತು ಭನಸ್‌ಕಾಂತ ಜಿಲ್ಲೆಯಲ್ಲಿ ತಲೆದೂರಿದ ನೀರು ಹಾಗೂ ವಿದ್ಯುತ್ ಸಮಸ್ಯೆಯನ್ನ ಹೋಗಲಾಡಿಸಿದ್ದೇವೆ ಮತ್ತು 20-25 ವರ್ಷದ ಯುವಕರಿಗೆ ಹಿಂದೆ ಇದ್ದ ಪರಿಸ್ಥಿತಿ ಬಗ್ಗೆ ಗೊತ್ತಿಲ್ಲಾ ಎಂದು ಹೇಳಿದ್ದಾರೆ.
182 ಸದಸ್ಯಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಹಾಗೂ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
