• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೆಹಲಿ ಪ್ರತಿಭಟನೆ ಕುರಿತು ವೈರಲ್‌ ಆದ 9 ವದಂತಿಗಳಿಗೆ ಪೊಲೀಸರ ಫ್ಯಾಕ್ಟ್‌ಚೆಕ್‌; ಅಸಲಿಯತ್ತು ಬಹಿರಂಗ!

ಪ್ರತಿಧ್ವನಿ by ಪ್ರತಿಧ್ವನಿ
July 22, 2026
in Top Story
0
ದೆಹಲಿ ವಿದ್ಯಾರ್ಥಿ ಪ್ರತಿಭಟನೆಗೆ ಯುವ ರಾಜ್‌ಕುಮಾರ್ ಧ್ವನಿ;  ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಭಾರಿ ಚರ್ಚೆ
Share on WhatsAppShare on FacebookShare on Telegram

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈ 20 ಮತ್ತು 21ರಂದು ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಹಲವು ಆರೋಪಗಳಿಗೆ ದೆಹಲಿ ಪೊಲೀಸರು ಅಧಿಕೃತ ಫ್ಯಾಕ್ಟ್‌ಚೆಕ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿ ಹರಿದಾಡುತ್ತಿದ್ದ 9 ಪ್ರಮುಖ ಸುಳ್ಳು ದಾವೆಗಳನ್ನು ಸಾಕ್ಷ್ಯಾಧಾರಗಳೊಂದಿಗೆ ತಳ್ಳಿಹಾಕಿರುವ ಪೊಲೀಸರು, ಜನರು ಪರಿಶೀಲಿಸದ ಮಾಹಿತಿಯನ್ನು ನಂಬಬಾರದು ಎಂದು ಮನವಿ ಮಾಡಿದ್ದಾರೆ.

ADVERTISEMENT

 

ಪೊಲೀಸರ ಪ್ರಕಾರ, “ಪೆಲೆಟ್‌ ಗನ್‌ ಬಳಸಲಾಗಿದೆ”, “ಮೊಳೆ ಜೋಡಿಸಿದ ಲಾಠಿಗಳಿಂದ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲಾಗಿದೆ”, “3,000 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ” ಎಂಬ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಹಲವು ವಿಡಿಯೊಗಳು ಹಳೆಯ ಘಟನೆಗಳಿಗೆ ಸಂಬಂಧಿಸಿದ್ದಾಗಿದ್ದು, ಅವುಗಳನ್ನು ಹೊಸ ಪ್ರತಿಭಟನೆಗೆ ಸಂಬಂಧಿಸಿದಂತೆ ತಪ್ಪಾಗಿ ಬಿಂಬಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Delhi Congress Protest:  ಕಾಂಗ್ರೆಸ್‌ ನಾಯಕರನ್ನು ವಶಕ್ಕೆ ಪಡೆದ ಪೊಲೀಸ್ರು #pratidhvani

ಸಿಜೆಪಿ ವಕ್ತಾರ ಸೌರವ್ ದಾಸ್ ಹಾಗೂ ಕೆಲ ಸಾಮಾಜಿಕ ಜಾಲತಾಣ ಖಾತೆಗಳು ಪ್ರತಿಭಟನಾಕಾರರ ಮೇಲೆ ಪೆಲೆಟ್‌ ಗನ್‌ ಬಳಸಲಾಗಿದೆ ಎಂದು ಆರೋಪಿಸಿದ್ದವು. ಆಲ್ಟ್ ನ್ಯೂಸ್‌ನ ಮೊಹಮ್ಮದ್ ಜುಬೈರ್ ಸೇರಿದಂತೆ ಕೆಲವರು ಮೊಳೆ ಜೋಡಿಸಿದ ಲಾಠಿಗಳಿಂದ ಹಲ್ಲೆ ನಡೆದಿದೆ ಎಂದು ವಿಡಿಯೊಗಳನ್ನು ಹಂಚಿಕೊಂಡಿದ್ದರು.

ಆದರೆ, ಈ ದೃಶ್ಯಗಳು ಜುಲೈ 20ರ ಪ್ರತಿಭಟನೆಗೆ ಸಂಬಂಧಿಸಿದವುಗಳಲ್ಲ. ಹಳೆಯ ಹಾಗೂ ಬೇರೆ ಘಟನೆಗಳ ವಿಡಿಯೊಗಳನ್ನು ತಪ್ಪಾಗಿ ಬಳಸಿಕೊಂಡು ಜನರಲ್ಲಿ ಗೊಂದಲ ಸೃಷ್ಟಿಸಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

FootPath Eviction Start Again: ಶಿವಾಜಿನಗರದಲ್ಲಿ ಮತ್ತ ಫುಟ್​ಪಾತ್ ಒತ್ತುವರಿ ತೆರವು ಕಾರ್ಯ ಆರಂಭ  #pratidhvani

ಗೀತಾಂಜಲಿ ಎಂಬ ಮಹಿಳೆಯ ಕೂದಲು ಎಳೆದು ಹಲ್ಲೆ ನಡೆಸಲಾಗಿದೆ, 12 ವರ್ಷದ ಬಾಲಕಿಗೆ ಗಾಯವಾಗಿದೆ ಹಾಗೂ 40–50 ಜನರ ತಲೆ ಒಡೆದಿದೆ ಎಂಬ ಆರೋಪಗಳನ್ನೂ ಪೊಲೀಸರು ತಳ್ಳಿಹಾಕಿದ್ದಾರೆ. ಈ ರೀತಿಯ ಯಾವುದೇ ಘಟನೆ ನಡೆದಿರುವುದು ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಎಎಪಿ ನಾಯಕ ಸಂಜಯ್ ಸಿಂಗ್ ಸೇರಿದಂತೆ ಕೆಲವರು 3,000 ವಿದ್ಯಾರ್ಥಿಗಳನ್ನು ಬಂಧಿಸಿ ಕ್ರೀಡಾಂಗಣಗಳಲ್ಲಿ ಆಹಾರ-ನೀರು ಇಲ್ಲದೆ ಇರಿಸಲಾಗಿದೆ ಎಂದು ಆರೋಪಿಸಿದ್ದರು. ಇದನ್ನೂ ದೆಹಲಿ ಪೊಲೀಸರು “ಸಂಪೂರ್ಣ ಸುಳ್ಳು ಹಾಗೂ ದಾರಿತಪ್ಪಿಸುವ ಮಾಹಿತಿ” ಎಂದು ಸ್ಪಷ್ಟಪಡಿಸಿದ್ದಾರೆ.

Rahul Gandhi Stage Protest Outside PM Modi's Residence In Delhi: ಪ್ರಧಾನಿ ಮೋದಿ ಮನೆ ಮುಂದೆ ರಾಹುಲ್ ಧರಣಿ

ಅಭಿಜಿತ್ ದಿಪ್ಕೆ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ವದಂತಿಯನ್ನೂ ನಿರಾಕರಿಸಿರುವ ಪೊಲೀಸರು, ಅವರು ಪ್ರತಿಭಟನಾ ಸ್ಥಳದಲ್ಲೇ ಇದ್ದರು, ಬಂಧಿಸುವ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ತಿಳಿಸಿದ್ದಾರೆ.

ಜೂನ್ 18, 2026ರಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಹಳೆಯ ವಿಡಿಯೊವೊಂದನ್ನು ಜುಲೈ 20ರ ಪ್ರತಿಭಟನೆಯ ದೃಶ್ಯವೆಂದು ಹಂಚಿಕೊಳ್ಳಲಾಗಿತ್ತು. ಅಲ್ಲದೆ, ಜುಲೈ 20ರಂದು ಪ್ರತಿಭಟನೆ ನಡೆಸಲು ಸಿಜೆಪಿಗೆ ಅಧಿಕೃತ ಅನುಮತಿ ಇರಲಿಲ್ಲ ಎಂಬುದನ್ನೂ ಪೊಲೀಸರು ಉಲ್ಲೇಖಿಸಿದ್ದಾರೆ.

ಪೊಲೀಸರ ಫ್ಯಾಕ್ಟ್‌ಚೆಕ್‌ ಬಳಿಕ ಹಲವು ಸಾಮಾಜಿಕ ಜಾಲತಾಣ ಖಾತೆಗಳು ತಮ್ಮ ಪೋಸ್ಟ್‌ಗಳು ಹಾಗೂ ವಿಡಿಯೊಗಳನ್ನು ಅಳಿಸಿವೆ ಎಂದು ತಿಳಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಪರಿಶೀಲಿಸದೆ ನಂಬಬಾರದು ಅಥವಾ ಹಂಚಿಕೊಳ್ಳಬಾರದು ಎಂದು ದೆಹಲಿ ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ. ಸುಳ್ಳು ಸುದ್ದಿ ಹಾಗೂ ವದಂತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Tags: CJP ProtestDelhi PoliceDelhi ProtestFact checkFake Newskannada newsPolice ClarificationProtest NewsSocial MediaViral Video
Previous Post

ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಕೇಂದ್ರ ಸರ್ಕಾರದ ವಿರುದ್ಧ ರಮ್ಯಾ ಕಿಡಿ, ಇಬ್ಬರು ಸಚಿವರ ರಾಜೀನಾಮೆಗೆ ಒತ್ತಾಯ

Next Post

ವಿದ್ಯಾರ್ಥಿಗಳನ್ನು ಕಾಂಗ್ರೆಸ್‌ ನಾಚಿಕೆಯಿಲ್ಲದೆ ರಾಜಕೀಯ ದಾಳವಾಗಿ ಬಳಸಿಕೊಳ್ತಿದೆ : ರಾಗಾ ವಿರುದ್ಧ ಪ್ರಧಾನ್‌ ವಾಗ್ದಾಳಿ..

Related Posts

ನಿಮ್ಮ ಮನೆಯ ಸುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ? ಮೊಬೈಲ್‌ನಲ್ಲೇ AQI ತಿಳಿಯಲು 5 ಸುಲಭ ಮಾರ್ಗಗಳು!
Top Story

ನಿಮ್ಮ ಮನೆಯ ಸುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ? ಮೊಬೈಲ್‌ನಲ್ಲೇ AQI ತಿಳಿಯಲು 5 ಸುಲಭ ಮಾರ್ಗಗಳು!

by Shivakumar
November 10, 2026
0

ನಾವು ಪ್ರತಿದಿನ ಉಸಿರಾಡುವ ಗಾಳಿ ಶುದ್ಧವಾಗಿದೆಯೇ ಅಥವಾ ಮಾಲಿನ್ಯದಿಂದ ಕೂಡಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ, ಕಚೇರಿಗೆ ತೆರಳುವಾಗ ಅಥವಾ...

Read moreDetails
Why was ₹2,000 in drought relief credited to farmers' accounts? Here is the clarification from DCM Parameshwara

ರೈತರ ಖಾತೆಗೆ ₹2,000 ಬರ ಪರಿಹಾರ ಬಂದಿದ್ದೇಕೆ? ಉಳಿದ ಹಣ ಯಾವಾಗ? ಇಲ್ಲಿದೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ!

November 10, 2026
Why do you feel nauseous when looking at your phone while traveling in a car? Here is the scientific reason

ಕಾರಿನಲ್ಲಿ ಪ್ರಯಾಣಿಸುವಾಗ ಫೋನ್ ನೋಡಿದರೆ ವಾಕರಿಕೆ ಬರುವುದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

November 10, 2026
War with Iran has ended: Donald Trump's significant statement

ಇರಾನ್ ಜೊತೆಗಿನ ಯುದ್ಧ ಅಂತ್ಯಗೊಂಡಿದೆ : ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ

November 10, 2026
Thick smoke blankets India and Pakistan: Scene captured by NASA satellite

ಭಾರತ-ಪಾಕಿಸ್ತಾನವನ್ನು ಆವರಿಸಿರುವ ದಟ್ಟವಾದ ಹೊಗೆ: ನಾಸಾ ಉಪಗ್ರಹದಲ್ಲಿ ದೃಶ್ಯ ಸೆರೆ

November 10, 2026
Next Post
Rahul Gandhi Vs Dharmendra Pradhan

ವಿದ್ಯಾರ್ಥಿಗಳನ್ನು ಕಾಂಗ್ರೆಸ್‌ ನಾಚಿಕೆಯಿಲ್ಲದೆ ರಾಜಕೀಯ ದಾಳವಾಗಿ ಬಳಸಿಕೊಳ್ತಿದೆ : ರಾಗಾ ವಿರುದ್ಧ ಪ್ರಧಾನ್‌ ವಾಗ್ದಾಳಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada