
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 16ರಂದು ವಿಜಯ್ ದಿವಸ್ ಪ್ರಯುಕ್ತ ಎಕ್ಸ್‌ನಲ್ಲಿ ಹಂಚಿದ ಒಂದು ಪೋಸ್ಟ್ ಬಾಂಗ್ಲಾದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸಿಫ್ ನಜ್ರುಲ್ ಹಾಗೂ ವಿದ್ಯಾರ್ಥಿ ಮುಖಂಡ ಹಸ್ನತ್ ಅಬ್ದುಲ್ಲಾ, ಮೋದಿ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

“ಮೋದಿ ಅವರ ಪೋಸ್ಟ್ ವಿರೋಧಿಸುತ್ತಿದ್ದೇನೆ. 1971ರ ಗೆಲುವಿನಲ್ಲಿ ಭಾರತ ಮಿತ್ರ ರಾಷ್ಟ್ರವಾಗಿತ್ತು. ಆದರೆ, ಮೋದಿಯವರ ಭಾಷೆಯು ಅತಿರೇಕದಂತೆ ಕಾಣುತ್ತಿದೆ,” ಎಂದು ಆಸಿಫ್ ನಜ್ರುಲ್ ಪ್ರತಿಕ್ರಿಯೆ ನೀಡಿದ್ದಾರೆ.
ತಾರತಮ್ಯ ವಿರೋಧಿ ವಿದ್ಯಾರ್ಥಿ ಮುಖಂಡ ಹಸ್ನತ್ ಅಬ್ದುಲ್ಲಾ, “ಭಾರತವು ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ತನ್ನ ವಿಜಯವೆಂದು ಹೇಳಿಕೊಳ್ಳುವುದು ಸ್ವಾತಂತ್ರ್ಯ ಮತ್ತು ದೇಶದ ಏಕತೆಗೆ ಧಕ್ಕೆ ನೀಡುವಂತಾಗಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸಬೇಕು,” ಎಂದು ಕಟುವಾಗಿ ಹೇಳಿದ್ದಾರೆ. ಇಂದು ವಿಜಯ್ ದಿವಸ್. 1971ರ ಯುದ್ಧದಲ್ಲಿ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ವೀರ ಸೈನಿಕರ ತ್ಯಾಗವನ್ನು ನಾವು ಗೌರವಿಸುತ್ತೇವೆ. ಅವರ ನಿಸ್ವಾರ್ಥ ಸಮರ್ಪಣೆ ಮತ್ತು ಅಚಲ ಸಂಕಲ್ಪ ನಮ್ಮ ದೇಶವನ್ನು ಉಳಿಸಿದೆ. ಅವರು ನಮಗೆ ಕೀರ್ತಿ ತಂದರು.
ಇಂದು – ಅವರ ಅಸಾಧಾರಣ ಶೌರ್ಯ ಮತ್ತು ಅಚಲ ಮನೋಭಾವಕ್ಕೆ ಗೌರವ ಅರ್ಪಿಸುತ್ತಾ, ಅವರ ತ್ಯಾಗಗಳು ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿ ನೀಡುತ್ತವೆ. ಅವರು ನಮ್ಮ ದೇಶದ ಇತಿಹಾಸದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ” ಎಂದು ಪ್ರಧಾನಿ ಮೋದಿ ವಿಜಯ್ ದಿವಸ್ ಸಂದರ್ಭದಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು.