ಕಡಲ ಭದ್ರತೆ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆಯಲಿರುವ ಇಂದಿನ ಸಭೆಯ ಅಧ್ಯಕ್ಷತೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ.
ಸಂಜೆ 5.30ಕ್ಕೆ ನಡೆಯಲಿರುವ ಕಡಲ ಭದ್ರತೆ ಕುರಿತಾದ ಉನ್ನತ ಮಟ್ಟದ ವರ್ಚುವಲ್ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್, ಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಅಧ್ಯಕ್ಷ ಫೆಲಿಕ್ಸ್-ಆಂಟೊಯಿನ್ ಶಿಶೆಕೆಡಿ ಶಿಲ್ಲೊಂಬೊ, ಆಫ್ರಿಕನ್ ಯೂನಿಯನ್ ಅಧ್ಯಕ್ಷರು, ಯುಎಸ್ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಸೇರಿದಂತೆ ಹಲವು ರಾಷ್ಟ್ರ ನಾಯಕರು ಭಾಗವಹಿಸಲಿದ್ದಾರೆ.

ಸಾಗರ ವಲಯದಲ್ಲಿ ವಿಶ್ವದ ಎಲ್ಲಾ ದೇಶಗಳ ನಡುವೆ ಸಮನ್ವಯ ಕೊರತೆ ನೀಗಿಸಲು, ಹೆಚ್ಚಾಗುತ್ತಿರುವ ಅಪರಾಧವನ್ನು ಪರಿಣಾಮಕಾರಿಯಾಗಿ ಎದುರಿಸಲು ಈ ಸಭೆ ನಡೆಸಲಾಗುತ್ತಿದೆ.
ವಿಶ್ವಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್ ಇದೇ ಮೊದಲ ಬಾರಿಗೆ ಸಮುದ್ರ ಮಟ್ಟದ ಭದ್ರತೆಯನ್ನು ಸಮಗ್ರ ರೀತಿಯಲ್ಲಿ ಚರ್ಚಿಸಿ ಇದರ ಬಲವರ್ಧನೆಗೆ ಒಂದು ವಿಶೇಷವಾದ ಕಾರ್ಯಸೂಚಿ ತಯಾರಿಸಲಾಗುತ್ತದೆ.
ಕೇವಲ ಒಂದು ದೇಶದಿಂದ ಮಾತ್ರ ಸಾಗರ ಭದ್ರತೆಯ ವೈವಿಧ್ಯಮಯ ಅಂಶಗಳನ್ನು ಪರಿಹರಿಸಲು ಸಾಧ್ಯವೇ ಇಲ್ಲ. ಎಲ್ಲಾ ದೇಶಗಳು ಒಗ್ಗಟ್ಟಿನಿಂದ ಎದುರಿಸಬೇಕಾದ ಸಮಸ್ಯೆಗಳಿವು. ಕಡಲ ಭದ್ರತೆಗೆ ಸಮಗ್ರ ವಿಧಾನ ಕಾನೂನು ಬದ್ಧವಾಗಿರಬೇಕು. ಇಲ್ಲಿ ಬರುವ ಬೆದರಿಕೆಗಳನ್ನು ಎಲ್ಲಾ ದೇಶಗಳು ಬಹಳ ಪರಿಣಾಮಕಾರಿಯಾಗಿ ಎದುರಿಸಬೇಕು ಎಂಬುದು ಸಭೆಯ ಉದ್ದೇಶ.
ಇನ್ನು, ಶಾಂತಿ ಪಾಲನೆ ಮತ್ತು ಭಯೋತ್ಪಾದನಾ ನಿಗ್ರಹ, ಕೋವಿಡ್-19 ವಿರುದ್ಧ ಹೋರಾಡುವುದು ಹೇಗೆ ಎನ್ನುವುದರ ಕುರಿತು ಚರ್ಚೆ ನಡೆಸಲಿದ್ದಾರೆ. ರಾಜ್ಯ ಪ್ರಾಯೋಜಿತ ಗುಂಪುಗಳಿಂದ ಬೆದರಿಕೆಗಳು ಬರುತ್ತಿವೆ. ಈ ಎಲ್ಲವನ್ನು ಹೇಗೆ ಎದುರಿಸಬೇಕು ಎಂಬ ಚರ್ಚೆಯೂ ಆಗಲಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಆಫ್ರಿಕನ್ ಯೂನಿಯನ್ ಪರವಾಗಿ ಸಂಕ್ಷಿಪ್ತವಾಗಿ ಚರ್ಚೆಯಲ್ಲಿ ಭಾಗವಹಿಸುತ್ತಿದ್ದಾರೆ. 54 ಸದಸ್ಯರು 55 ಸದಸ್ಯರ ಆಫ್ರಿಕಾ ಗುಂಪಿನ ಭಾಗವಾಗಿದ್ದಾರೆ. ಇದು ವಿಶ್ವಸಂಸ್ಥೆಯ ಸದಸ್ಯರಾಗಿ ವಿಂಗಡಿಸಲಾದ ಭೌಗೋಳಿಕವಾಗಿ ವರ್ಗೀಕರಿಸಿದ ಗುಂಪುಗಳ ದೊಡ್ಡ ಗುಂಪಾಗಿದೆ. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಪ್ರಧಾನ ಮಂತ್ರಿ ರಾಲ್ಫ್ ಗೊನ್ಸಾಲ್ವೆಸ್ ಸಹ ಭಾಗವಹಿಸುವ ಬಗ್ಗೆ ದೃಢಪಡಿಸಿದ್ದಾರೆ.
ಯುಎಸ್ ನೇತೃತ್ವದ ಅಂತರಾಷ್ಟ್ರೀಯ ಪಡೆಗಳು 20 ವರ್ಷಗಳ ಅಸ್ತಿತ್ವವನ್ನು ಕೊನೆಗೊಳಿಸುವುದರಿಂದ ದೇಶದ ವಿಕಸಿಸುತ್ತಿರುವ ಭದ್ರತಾ ಪರಿಸ್ಥಿತಿಯ ಕುರಿತು ಯುಎನ್ ಸಹಾಯ ಮಿಷನ್ ಬ್ರೀಫಿಂಗ್ಗೆ ಹಾಜರಾಗಲು ಪಾಕ್ ಮಾಡಿದ ಮನವಿಯನ್ನು ಯುಎನ್ಎನ್‌ಸಿ ತಿರಸ್ಕರಿಸಿದೆ.