ಜುಲೈ 8ರಂದು ಜಪಾನಿನ ಟೋಕಿಯೋದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ದುಷ್ಕರ್ಮಿಯ ಗುಂಡಿಗೆ ಬಲಿಯಾಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ(67) ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ ಎಂದು ಜಪಾನ್ ಮಾಧ್ಯಮ ಒಂದು ವರದಿ ಮಾಡಿದೆ.
ಅಂತ್ಯಸಂಸ್ಕಾರಕ್ಕೆ ಪ್ರಧಾನಿ ಮೋದಿ ಬೇಟಿ ಕುರಿತು ಜಪಾನ್ ಸರ್ಕಾರ ಯೋಜನೆ ರೂಪಿಸುತ್ತಿದ್ದು ಈ ವೇಳೆ ಪ್ರಧಾನಿ ಪುಮಿಯೊ ಕಿಶಿದಾರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಕ್ಯುಡೊ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ, ಪ್ರಧಾನಿ ಮೋದಿ ಭೇಟಿ ಕುರಿತು ಅಲ್ಲಿನ ಸರ್ಕಾರವಾಗಲಿ ಅಥವಾ ಭಾರತ ಸರ್ಕಾರದಿಂದಾಗಲಿ ಯಾವುದೇ ಅಧಿಕೃತ ಘೋಷನೆಯಾಗಿಲ್ಲ.