ಬ್ರಿಟನ್ ರಾಣಿ ಎಲಿಜಬೆತ್ ಸಾವಿನಿಂದ ಅತೀವ ದುಃಖವಾಗಿದೆ ಎಂದು ಪ್ರಧಾನಿ ಮೋದಿ ರಾಣಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ರಾಣಿ ಎಲಿಜಬೆತ್ ನಮ್ಮ ಕಾಲದ ಧೀಮಂತ ನಾಯಕಿಯಾಗಿ ಸದಾ ನೆನಪಿನಲ್ಲಿ ಉಳಿಯುತ್ತಾರೆ. ತಮ್ಮ ದೇಶದ ಜನತೆಗೆ ಅವರು ಸ್ಪೂರ್ತಿದಾಯಕ ನಾಯಕತ್ವವನ್ನು ನೀಡಿದವರು. ಸಾರ್ವಜನಿಕ ಜೀವನದಲ್ಲಿ ಘನತೆ ಹಾಗೂ ಸಭ್ಯತೆಯನ್ನು ಕಾಪಾಡಿಕೊಂಡವರು. ಅವರ ಕುಟುಂಬ ಹಾಗೂ ಬ್ರಿಟನ್ ಜನತೆಯೆ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ ಅವರ ಜೊತೆ ನಾವಿದ್ದೇವೆ ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
2015 ಹಾಗೂ 2018ರಲ್ಲಿ ಬ್ರಿಟನ್ಗೆ ಭೇಟಿ ನೀಡಿದ ಸಮಯದಲ್ಲಿ ಅವರ ಜೊತೆ ಮಾತುಕತೆ ನಡೆಸಿರುವುದು ಸ್ಮರಣೀಯವಾಗಿದೆ ಅವರ ದಯಾಪರತೆಯನ್ನು ಎಂದಿಗೂ ಮರೆಯಲಾರೆ. ಅಂದಿನ ಕಾಲದಲ್ಲಿ ಗಾಂಧೀಜಿಯವರು ನೀಡಿದ ಉಡುಗೊರೆಯನ್ನು ಸಭೆಯೊಂದರ ವೇಳೆ ನನ್ನಗೆ ತೋರಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.