ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಈಗಾಗಲೇ ಕೋಟ್ಯಂತರ ರೈತರು ಆರ್ಥಿಕ ನೆರವು ಪಡೆದಿದ್ದಾರೆ. ಈಗಾಗಲೇ 13 ಕಂತುಗಳ ಸದುಪಯೋಗ ಪಡೆದಿರುವ ರೈತರು 14ನೇ ಕಂತಿನ ಬಿಡುಗಡೆಗೆ ಕಾಯುತ್ತಿದ್ದಾರೆ. ಅನೇಕರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಹಣ ಪಡೆಯಲು ಸಾಧ್ಯವಿದೆಯಾ ಎಂಬ ಅನುಮಾನವಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ
ಪಿಎಂ ಕಿಸಾನ್ ಯೋಜನೆಯು ಜಮೀನು ಮಾಲೀಕನಿಗೆ ಮಾತ್ರ ಸಿಗುವಂತದ್ದು. ಹೀಗಾಗಿ ಜಮೀನು ಮಾಲೀಕನಾದವನು ಈ ಯೋಜನೆಯಿಂದ ಮಾಸಿಕ 2000 ರೂಪಾಯಿಗಳನ್ನು ಪಡೆಯಬಹುದಾಗಿದೆ. ಕೆಲವೊಂದು ಕಡೆಗಳಲ್ಲಿ ಜಮೀನಿಗೆ ಜಂಟಿ ಮಾಲೀಕತ್ವ ಇದ್ದಲ್ಲಿ ಆಗ ಕೂಡ ಕೇವಲ ಒಬ್ಬರು ಮಾತ್ರ ಈ ಯೋಜನೆಯ ಫಲಾನುಭವಿಯಾಗಲು ಸಾಧ್ಯವಿದೆ.
ಒಂದು ವೇಳೆ ಒಂದೇ ಮನೆಯಲ್ಲಿದ್ದು ಬೇರೆ ಬೇರೆ ಜಮೀನಿನ ಮಾಲೀಕರು ನೀವಾಗಿದ್ದಲ್ಲಿ ಆದ ಈ ಯೋಜನೆಯ ನಿಯಮದ ಪ್ರಕಾರ ಯೋಜನೆಯ ಲಾಭವನ್ನು ಪಡೆಯುವುದು ಸಾಧ್ಯವಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು ಹೇಗೆ ?
ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ pmkisan.gov.inಗೆ ಭೇಟಿ ನೀಡಿ
ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಬೆನಿಫಿಶಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ
ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಊರನ್ನು ಆರಿಸಿಕೊಳ್ಳಿ.
ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ನೋಡಿಕೊಳ್ಳಿ