• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಹುತ್ವದ ಆಶಯಗಳೂ ನಾಗರಿಕ ಸಮಾಜವೂ

ನಾ ದಿವಾಕರ by ನಾ ದಿವಾಕರ
February 12, 2024
in ದೇಶ, ರಾಜಕೀಯ
0
ಬಹುತ್ವದ ಆಶಯಗಳೂ ನಾಗರಿಕ ಸಮಾಜವೂ
Share on WhatsAppShare on FacebookShare on Telegram

ಬಹುತ್ವದ ಆಶಯಗಳೂ ನಾಗರಿಕ ಸಮಾಜವೂ
ನಾಗರಿಕ ಸಮಾಜವು ಸರ್ವಾಧಿಕಾರಿ ಧೋರಣೆಯ ಪ್ರಭುತ್ವದ ಹಿಡಿತದಿಂದ ಮುಕ್ತವಾಗಿರಬೇಕು
ನಾ ದಿವಾಕರ
ಹೊಸ ಸಂಸತ್‌ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಎಲ್ಲ ಸದಸ್ಯರಿಗೂ ಹಂಚಲಾದ ಸಂವಿಧಾನ ಪೀಠಿಕೆಯ ಪ್ರತಿಯಲ್ಲಿ ʼ ಸಮಾಜವಾದಿʼ ಮತ್ತು ʼ ಜಾತ್ಯತೀತʼ ಎಂಬ ಪದಗಳು ಇರಲಿಲ್ಲ . ವಾಸ್ತವವಾಗಿ ಮೂಲ ಸಂವಿಧಾನದ ಪ್ರತಿಯಲ್ಲಿ ಇದು ಇರಲೂ ಇಲ್ಲ. 1976ರಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಇದನ್ನು ಸೇರ್ಪಡೆ ಮಾಡಲಾಯಿತು. ಈ ಎರಡೂ ಪದಗಳು ಪ್ರಕ್ಷಿಪ್ತವೇ ಆದರೂ ಭಾರತದ ಸಂವಿಧಾನದ ಮೂಲ ಆಶಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಸೇರ್ಪಡೆಯ ಹೊರತಾಗಿಯೂ ಭಾರತವನ್ನು ಒಂದು ಜಾತ್ಯತೀತ, ಸಮಾಜವಾದಿ ರಾಷ್ಟ್ರವನ್ನಾಗಿ ನಿರ್ಮಿಸುವ ಸದಾಶಯವನ್ನು ಸಂವಿಧಾನದ ರಚನೆಯಲ್ಲಿ ಗುರುತಿಸಬಹುದು. ಸಂವಿಧಾನ ರಚನೆಯ ಸುತ್ತ ನಡೆದ ಸ್ವಾತಂತ್ರ್ಯಪೂರ್ವದ ಚರ್ಚೆಗಳನ್ನು ಗಮನಿಸುತ್ತಾ ಈ ಎರಡೂ ಪದಗಳಿಗೆ ಸಂವಾದಿಯಾಗಿ ʼ ಭಾರತದ ಜನಗಳಾದ ನಾವು ʼ ( We the People of India) ಎಂಬ ಸಂವಿಧಾನ ಪೀಠಿಕೆಯ ಆರಂಭದ ಪದಗಳ ಗೂಡಾರ್ಥ ಹಾಗೂ ಒಳಾರ್ಥವನ್ನು ಅರ್ಥಮಾಡಿಕೊಂಡರೆ ನಾವು ಪದಗಳನ್ನು ಬೆನ್ನಟ್ಟದಯೇ ನಮ್ಮ ಸಂವಿಧಾನದ ಆಶಯಗಳನ್ನು ಗ್ರಹಿಸಲು ಸಾಧ್ಯ.

ADVERTISEMENT


ಸಾಮಾನ್ಯವಾಗಿ ನಮ್ಮ ನಾಗರಿಕ ಸಮಾಜದ ಚರ್ಚೆಗಳಲ್ಲಿ ಜನಪ್ರಿಯ ಸಾರ್ವಭೌಮತ್ವದ (Popular Sovereignty) ಅರ್ಥ ಮತ್ತು ಗುಣಲಕ್ಷಣಗಳನ್ನು ಒಂದು ಮಿಥ್ಯೆಯಾಗಿ ಅಥವಾ ಅಮೂರ್ತ ನೆಲೆಯಲ್ಲಿ ಅರ್ಥೈಸಲಾಗುತ್ತದೆ. ಆದಾಗ್ಯೂ ಸಂವಿಧಾನದ ಕ್ರಾಂತಿಕಾರಕ ಶಕ್ತಿ ಇರುವುದೇ ಜನಪ್ರಿಯ ಅಥವಾ ತಳಮಟ್ಟದ ಸಾರ್ವಭೌಮತ್ವದಲ್ಲಿ ಎಂದು ಸಂವಿಧಾನ ತಜ್ಞರು ಹೇಳುತ್ತಾರೆ. ವಸಾಹತುಶಾಹಿ ಆಳ್ವಿಕೆಯಲ್ಲಿ ಕಾಣಬಹುದಾದ ತಲೆಮಾರುಗಳ ನಡುವೆ ನಡೆದ ರಾಜಕೀಯ ಸಂಕಥನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜನಪ್ರಿಯ ಸಾರ್ವಭೌಮತ್ವಕ್ಕೂ ಸಾಂವಿಧಾನಿಕತೆಗೂ ಇರುವ ಅವಿನಾಭಾವ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದು. ಭಾರತದ ಸಂವಿಧಾನವನ್ನು ಅಂಗೀಕರಿಸುವ ಉದಾತ್ತ ನಡೆಯ ಹಿಂದೆ ದಶಕಗಳ ಕಾಲದ ಸಮಾಲೋಚನೆಗಳನ್ನು, ಚರ್ಚೆಗಳನ್ನು, ವಾದ ಪ್ರತಿವಾದಗಳನ್ನು ಗುರುತಿಸಬೇಕಿದೆ. ಭವಿಷ್ಯ ಭಾರತದ ಗಣತಂತ್ರದ ಮೂಲ ಲಕ್ಷಣಗಳನ್ನು ನಿರ್ವಚಿಸುವ ನಿಟ್ಟಿನಲ್ಲಿ ಈ ಚರ್ಚೆಗಳು ಮಹತ್ತರ ಕೊಡುಗೆ ನೀಡಿವೆ. ಹಾಗಾಗಿಯೇ ಸಂವಿಧಾನ ಪೀಠಿಕೆಯಲ್ಲಿ ಸಾಮಾಜಿಕ-ಆರ್ಥಿಕ-ರಾಜಕೀಯ ನ್ಯಾಯ, ಚಿಂತನೆ-ಅಭಿವ್ಯಕ್ತಿ-ನಂಬಿಕೆ-ಶ್ರದ್ಧೆ ಮತ್ತು ಆರಾಧನೆಯ ಸ್ವಾತಂತ್ರ್ಯ ಹಾಗೂ ಸ್ಥಾನಮಾನ-ಅವಕಾಶಗಳ ಸಮಾನತೆ ಪ್ರಶಸ್ಥ ಸ್ಥಾನ ಪಡೆದುಕೊಂಡಿವೆ.
ಸಾರ್ವಭೌಮತ್ವ ಮತ್ತು ತಳಸಮಾಜ
ಆದರೆ ರಾಜಕೀಯ ಸಾರ್ವಭೌಮತ್ವವನ್ನು ಪ್ರಭುತ್ವದ ಅಥವಾ ಆಳ್ವಿಕೆಯ ಸಾರ್ವಭೌಮತ್ವಕ್ಕೆ ಸೀಮಿತಗೊಳಿಸಿದಾಗ ಮೇಲೆ ಉಲ್ಲೇಖಿಸಲಾದ ಸಾಂವಿಧಾನಿಕ ಆಶಯಗಳು ಕೇವಲ ಹಾರಿಕೆಯ ಆಶ್ವಾಸನೆಗಳಾಗಿಬಿಡುತ್ತವೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಂತಃಶಕ್ತಿಯಾಗಿ ಸಂವಿಧಾನವು ಉಳಿಯಬೇಕಾದರೆ ನಾವು ʼ ಭಾರತದ ಜನಗಳಾದ ನಾವು ʼ (We the People of India) ಎಂಬ ಪದಗಳ ಹಿಂದಿನ ಸಾರ್ಥಕ್ಯವನ್ನು ಉಳಿಸಿಕೊಳ್ಳಬೇಕಾಗುತ್ತದೆ. ಪಶ್ಚಿಮ ದೇಶಗಳಲ್ಲಿ ನಾಗರಿಕ ಸಮಾಜವು ಪ್ರಭುತ್ವಗಳ ಅಧಿಕಾರ ದುರುಪಯೋಗದ ಬಗ್ಗೆ ಸದಾ ಎಚ್ಚರಿಕೆ ವಹಿಸುವ ಕಣ್ಗಾವಲು ಶಕ್ತಿಯಂತೆ ವರ್ತಿಸಿರುವುದನ್ನು ಗುರುತಿಸಬಹುದು. ಅಧಿಕಾರದ ಏಕಸ್ವಾಮ್ಯವನ್ನು ಸಾಧಿಸುವ ಪ್ರಭುತ್ವದ ಪ್ರಯತ್ನವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜ ಜಾಗೃತಾವಸ್ಥೆಯಲ್ಲಿರುವುದು ಅತ್ಯವಶ್ಯ. ಚಿಂತಕ ಜರ್ಗನ್‌ ಹಾಬರ್ಮಾಸ್‌ ಇದನ್ನು ʼಉದಾರ ಸಾರ್ವಜನಿಕ ವಲಯʼ ( Liberal Public Sphere) ಎಂದು ಗುರುತಿಸುತ್ತಾರೆ. ಸುಶಿಕ್ಷಿತ ಮಧ್ಯಮ ವರ್ಗಗಳೇ ಪ್ರಧಾನವಾಗಿರುವ ಈ ವಲಯವು ತರ್ಕಬದ್ಧ ಸಂವಾದ-ಚರ್ಚೆ-ಸಂಕಥನಗಳ ಮೂಲಕ ವ್ಯಕ್ತಿ ಸ್ವಾಯತ್ತತೆ ಮತ್ತು ಸ್ವಹಿತಾಸಕ್ತಿಗಳ ರಕ್ಷಣೆಯನ್ನು ಪ್ರತಿಪಾದಿಸುತ್ತದೆ. ಭಾರತದಲ್ಲಿ ಆಧುನಿಕೀಕರಣಗೊಳ್ಳುತ್ತಿರುವ ಸುಶಿಕ್ಷಿತ ಮಧ್ಯಮ ವರ್ಗಗಳು, ವಿಶೇಷವಾಗಿ ನಗರೀಕರಣಕ್ಕೊಳಗಾದ ಹಿತವಲಯದಲ್ಲಿ ಈ ಲಕ್ಷಣವನ್ನು ಕಾಣಬಹುದು.


ಆದರೆ ಈ ಆಧುನಿಕೀಕರಣಗೊಂಡ ಮೇಲ್ಪದರದ ಸಮಾಜದ ಪ್ರಾತಿನಿಧಿಕ ಲಕ್ಷಣಗಳನ್ನು ಗಮನಿಸಿದಾಗ ಅಲ್ಲಿ ಸಾಂಪ್ರದಾಯಿಕ ಮೇಲ್ಪದರದ ಗಣ್ಯ ಸಮುದಾಯವೇ ಮುಂಚೂಣಿಯಲ್ಲಿ ಕಾಣುತ್ತದೆ. ಹಾಗಾಗಿಯೇ ಸಾರ್ವಜನಿಕ ಸಂಕಥನಗಳು ಹೆಚ್ಚು ಹೆಚ್ಚಾಗಿ ಪುರುಷಾಧಿಪತ್ಯದ, ಮೆಲ್ವರ್ಗದ, ಪ್ರಬಲ ಜಾತಿಗಳ ಅಭಿಪ್ರಾಯಗಳನ್ನೇ ಬಿಂಬಿಸುವಂತಿರುತ್ತವೆ. ಕಳೆದ ಹತ್ತು ವರ್ಷಗಳಲ್ಲಿ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎನಿಸಿಕೊಂಡ ಮಾಧ್ಯಮ ವಲಯವೂ ಇದರ ಪ್ರತಿರೂಪದಂತೆ ಕಾಣುತ್ತಿದೆ. ಇಲ್ಲಿ ಉತ್ಪಾದಿಸಲ್ಪಡುವ ಅಭಿಪ್ರಾಯಗಳೇ ಸಾರ್ವಜನಿಕ ಅಭಿವ್ಯಕ್ತಿಯಂತೆ ಬಿಂಬಿಸಲಾಗುತ್ತಿರುವುದು ಸುಡು ವಾಸ್ತವ. ಸಾಂವಿಧಾನಿಕ ಆಳ್ವಿಕೆಯು ಒಡ್ಡಿರುವ ಸವಾಲುಗಳ ನಡುವೆ ಭಾರತದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಈ ಮೆಲ್ಪದರದ ಸಮಾಜವು ಹೆಚ್ಚು ಕಡಿಮೆ ನಿಷ್ಕ್ರಿಯವಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಮತ್ತೊಂದು ಬದಿಯಲ್ಲಿ ನಿಂತು ನೋಡಿದಾಗ, ಜನಪ್ರಿಯ ಅಥವಾ ತಳಮಟ್ಟದ ಸಾರ್ವಭೌಮತ್ವವನ್ನು ಬಲವಾಗಿ ಪ್ರತಿಪಾದಿಸುವ ಪ್ರಜಾಸತ್ತಾತ್ಮಕ ಹಕ್ಕೊತ್ತಾಯದ ಧ್ವನಿಗಳನ್ನು ನಾವು ದೇಶಾದ್ಯಂತ ವ್ಯಾಪಿಸಿ, ಸಕ್ರಿಯವಾಗಿರುವ ಜನಾಂದೋಲನಗಳು, ಚಳುವಳಿಗಳು ಮತ್ತು ಸಾಂಘಿಕ ಚಟುವಟಿಕೆಗಳಲ್ಲಿ ಗುರುತಿಸಬಹುದು. ಸಾಮಾಜಿಕ ಚಳುವಳಿಗಳು, ರೈತ ಹೋರಾಟಗಳು, ಕಾರ್ಮಿಕ ಚಳುವಳಿಗಳು, ಮಾನವ ಹಕ್ಕು ಸಂಘಟನೆಗಳು, ತಳಸಮುದಾಯದ ಜಾತಿ-ಬುಡಕಟ್ಟು ಹೋರಾಟಗಳು ಈ ಧ್ವನಿಯನ್ನು ತಮ್ಮದಾಗಿಸಿಕೊಂಡಿವೆ. ಜಾತಿ ದೌರ್ಜನ್ಯದ ವಿರುದ್ಧ ನಡೆದ ಊನಾ ಚಳುವಳಿ, ಜಾರ್ಖಂಡ್‌ನ ಪಾತಾಲ್‌ಘರಿ ಬುಡಕಟ್ಟು ಹೋರಾಟಗಳು, ಪಂಜಾಬ್-ಹರಿಯಾಣದ ರೈತ ಮುಷ್ಕರಗಳು, ಸಿಎಎ-ಎನ್‌ಆರ್‌ಸಿ ವಿರುದ್ಧ ದೇಶವ್ಯಾಪಿಯಾಗಿ ನಡೆದ ಮುಸ್ಲಿಂ ಅಲ್ಪಸಂಖ್ಯಾತರ ಹೋರಾಟಗಳು ಇವೆಲ್ಲವೂ ಸಹ ತಳಮಟ್ಟದ ಜನಪ್ರಿಯ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಬೆಳವಣಿಗೆಗಳಾಗಿವೆ.
ಸಾಂವಿಧಾನಿಕ ನೈತಿಕತೆಯ ನೆಲೆಗಳು
ಈ ಜನಾಂದೋಲನಗಳ ಬಗ್ಗೆ ಉದಾರ ಸಾರ್ವಜನಿಕ ವಲಯವು ಸಹಾನುಭೂತಿಯನ್ನು ತೋರಿದರೂ ಇವುಗಳನ್ನು ಸಾಮಾನ್ಯವಾಗಿ ನಿರ್ದಿಷ್ಟ ವಿಭಾಗೀಯ ಬೆಳವಣಿಗೆಗಳಂತೆಯೇ ನೋಡುತ್ತದೆ. ಅಥವಾ ಭಾವನಾತ್ಮಕ ನೆಲೆಯ, ಸಾಂಪ್ರದಾಯಿಕ ಉತ್ಕರ್ಷದಂತೆ ಕಾಣಲಾಗುತ್ತದೆ. ಈ ದೃಷ್ಟಿಯಿಂದಲೇ ಇಂತಹ ಹೋರಾಟಗಳಿಗೆ ಬಾಹ್ಯ ಬೆಂಬಲ ವ್ಯಕ್ತವಾಗುತ್ತದೆ. ಆದರೆ ತಳಸಮುದಾಯಗಳ ಆಶೋತ್ತರಗಳನ್ನು ಪ್ರತಿನಿಧಿಸುವ ಈ ಹೋರಾಟಗಳಿಗೆ ನಾಗರಿಕ ಸಮಾಜದಲ್ಲಿ ಒಂದು ಸ್ಥಾನಮಾನವನ್ನು ನೀಡದೆ ಹೋದರೆ ಈ ಅಮೂಲಾಗ್ರ ಪ್ರಜಾಸತ್ತಾತ್ಮಕ ಹೋರಾಟಗಳ ವಿಮೋಚನೆಯ ಸಾಮರ್ಥ್ಯವನ್ನು ಗುರುತಿಸಲಾಗುವುದಿಲ್ಲ. ಜನಪ್ರಿಯ ಹಕ್ಕೊತ್ತಾಯಗಳ ಹಾಗೂ ಸಮೂಹ ಪ್ರತಿಭಟನೆಗಳ ಆಶಯಗಳನ್ನು ಮೂಲೆಗುಂಪು ಮಾಡಿದಂತಾಗುತ್ತದೆ. ಈ ದೃಷ್ಟಿಯಿಂದಲೇ ಡಾ. ಬಿ.ಆರ್.‌ ಅಂಬೇಡ್ಕರ್‌ ಸಂವಿಧಾನ ಪೀಠಿಕೆಯ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರಧಾನವಾಗಿ ಪ್ರತಿಪಾದಿಸಿದ್ದರು. ಸ್ವಾತಂತ್ರ್ಯವಿಲ್ಲದ ಸಮಾನತೆ, ಸಮಾನತೆಯಿಲ್ಲದ ಸ್ವಾತಂತ್ರ್ಯ, ಭ್ರಾತೃತ್ವವಿಲ್ಲದ ಸಮಾನತೆ ಮತ್ತು ಸ್ವಾತಂತ್ರ್ಯ ವ್ಯರ್ಥ ಎಂದು ಒತ್ತಿ ಹೇಳಿದ್ದರು. ಸಮಾನತೆ ಇಲ್ಲದ ಸ್ವಾತಂತ್ರ್ಯ ಅಂತಿಮವಾಗಿ ಕೆಲವೇ ಬಲಾಢ್ಯರ ಪರಮಾಧಿಪತ್ಯಕ್ಕೆ ಕಾರಣವಾಗುತ್ತದೆ ಎಂದು ನಂಬಿದ್ದ ಅಂಬೇಡ್ಕರ್‌, ಸ್ವಾತಂತ್ರ್ಯವಿಲ್ಲದ ಸಮಾನತೆಯು ವ್ಯಕ್ತಿಗತ ಉಪಕ್ರಮಗಳನ್ನೂ ನಾಶಪಡಿಸುತ್ತದೆ ಎಂದು ಹೇಳಿದ್ದರು.

ಬಹುಸಂಖ್ಯಾತ ಸಮಾಜವು ಸಾಂವಿಧಾನಿಕ ನೈತಿಕತೆಯನ್ನು ಪರಿಪಾಲಿಸದೆ ಹೋದರೆ ಯಾವುದೇ ಕಾನೂನು ಸಹ ಸ್ವಾತಂತ್ರ್ಯ-ಸಮಾನತೆಯ ಉಲ್ಲಂಘನೆಗಳನ್ನು ನಿಯಂತ್ರಿಸಲಾಗುವುದಿಲ್ಲ ಎಂಬ ಅಂಶವನ್ನು ಅಂಬೇಡ್ಕರ್‌ ಒತ್ತಿ ಹೇಳುತ್ತಾರೆ. ಸಾಮಾಜಿಕ ಶಿಸ್ತುಪರಿಪಾಲನೆಗಾಗಿ ರೂಪಿಸಲಾಗುವ ಕಾನೂನುಗಳು ತಳಮಟ್ಟದ ಸಮಾಜದಲ್ಲಿ ಸಮನ್ವಯತೆಯನ್ನು ಕಾಪಾಡಬೇಕಾದರೆ, ಆಳ್ವಿಕೆಯಲ್ಲಿರುವ ಬಹುಸಂಖ್ಯಾತ ಸಮಾಜವು ಸಾಂವಿಧಾನಿಕ ನೈತಿಕತೆಯನ್ನು ಹೊಂದಿರುವುದು ಅತ್ಯವಶ್ಯ ಎಂಬ ಅಂಶವನ್ನು ಅಂಬೇಡ್ಕರ್‌ ಪದೇಪದೇ ಉಚ್ಚರಿಸುತ್ತಾರೆ. ಗಾಂಧಿ ತಮ್ಮ ಸ್ವರಾಜ್ಯದ ಪರಿಕಲ್ಪನೆಯಲ್ಲೂ ಇದೇ ಅಭಿಪ್ರಾಯವನ್ನು ಮತ್ತೊಂದು ಆಯಾಮದಲ್ಲಿ ಬಿಂಬಿಸುವುದನ್ನು ಗುರುತಿಸಬಹುದು. ಸ್ವರಾಜ್‌ ಎಂದರೆ ಯಾಂತ್ರಿಕವಾದ ಸ್ವಯಮಾಡಳಿತ ಎಂದು ಭಾವಿಸುವುದರ ಬದಲು, ಎಲ್ಲರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಕಾಪಾಡುವಂತಹ ಆತ್ಮಸಾಕ್ಷಾತ್ಕಾರದ ಸೃಜನಶೀಲ ಪ್ರಕ್ರಿಯೆಯಾಗಿ ಗಾಂಧಿ ಕಾಣುತ್ತಾರೆ.
ಪ್ರಸ್ತುತ ಭಾರತದ ಸಂದರ್ಭದಲ್ಲಿ ನಿಂತು ನೋಡಿದಾಗ, ಪ್ರಗತಿಪರ ನಾಗರಿಕ ಸಮಾಜವು ಒಂದು ಬಹುತ್ವ ಸಮಾಜವಾಗಿ ಉಳಿಯಬೇಕೆಂದರೆ ಎಲ್ಲ ಸಮುದಾಯಗಳ ಮುಕ್ತ-ಸಮಾನ ಭಾಗವಹಿಸುವಿಕೆ, ಪಾಲ್ಗೊಳ್ಳುವಿಕೆ ಅತ್ಯವಶ್ಯವಾಗುತ್ತದೆ. ಯಾವುದೇ ಸಮುದಾಯವನ್ನು ಸಾಮಾಜಿಕ ಕೀಳರಿಮೆಯಿಂದ ನೋಡುವುದಾಗಲೀ ಬೌದ್ಧಿಕವಾಗಿ ಕೀಳು ಎಂದು ಭಾವಿಸುವುದಾಗಲೀ ಇನ್ನುಳಿದ ಸಮುದಾಯಗಳಲ್ಲಿ ಮೇಲರಿಮೆ ಹೆಚ್ಚಾಗಿಸಿ, ಔನ್ನತ್ಯದ ಅಹಮಿಕೆ ಗಟ್ಟಿಯಾಗುತ್ತದೆ. ಹಾಗಾಗಿ ಬಹುತ್ವದ ನಾಗರಿಕ ಸಮಾಜವನ್ನು ಸಾಕಾರಗೊಳಿಸಬೇಕಾದರೆ ಮೂಲತಃ ಪ್ರಾಮಾಣಿಕವಾದ ಚರ್ಚೆ, ಸಂವಾದಗಳು ಏರ್ಪಡಬೇಕು. ಈ ಸಂಕಥನಗಳನ್ನು ನಿರ್ದೇ಼ಶಿಸುವ ಬೌದ್ಧಿಕ ನೆಲೆಗಳಲ್ಲಿ ಆತ್ಮಾವಲೋಕನದ ಮನೋಭಾವ ಪ್ರಧಾನವಾಗಿರಬೇಕು.


ʼಅನ್ಯʼರಿಲ್ಲದ ಸಮಾಜದತ್ತ
ಸಮಾಲೋಚನೆ ಮತ್ತು ಮುಕ್ತ ಚರ್ಚೆಗೆ ತೆರೆದುಕೊಂಡ ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ಮಾತ್ರ ʼ ಅನ್ಯʼ ಭಾವನೆಗಳನ್ನು ದೂರೀಕರಿಸಲು ಸಾಧ್ಯವಾಗುತ್ತದೆ. ಗಾಂಧಿ, ಅಂಬೇಡ್ಕರ್‌ ಮೊದಲಾದ ಆಧುನಿಕ ಚಿಂತನೆಯ ದಾರ್ಶನಿಕರ ಮಾರ್ಗದರ್ಶನ ಇಲ್ಲಿ ಮುಖ್ಯವಾಗುತ್ತದೆ. ಸಮಾಜದಲ್ಲಿ ವಿವಿಧ ನೆಲೆಗಳಲ್ಲಿ, ವಿಭಿನ್ನ ಸಂದರ್ಭಗಳಲ್ಲಿ, ವಿಭಿನ್ನ ಕಾರಣಗಳಿಗಾಗಿ ಸೃಷ್ಟಿಯಾಗುತ್ತಲೇ ಹೋಗುವ ʼಅನ್ಯʼರೊಡನೆ ಸಹಾನುಭೂತಿಯೊಂದಿಗೆ, ಪರಾನುಭೂತಿಯೊಂದಿಗೆ ಆರೋಗ್ಯಕರ ಸಂವಾದದಲ್ಲಿ ತೊಡಗುವ ಮೂಲಕ ಪರಸ್ಪರ ಅರ್ಥಮಾಡಿಕೊಳ್ಳುವಂತಹ ಒಂದು ಸ್ಥಿರ ಅಡಿಪಾಯವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಈ ನಿರ್ಮಾಣದ ಜವಾಬ್ದಾರಿ ಉದಾರ ಸಾರ್ವಜನಿಕ ವಲಯದ ಮೇಲಿರುತ್ತದೆ. ಈ ಅಡಿಪಾಯದ ಮೇಲೆ ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯ ಪೂರ್ವದ ಚಿಂತಕರು ಆಶಿಸಿದಂತಹ ಒಂದು ಬಹುತ್ವ ಸಮಾಜವನ್ನು, ಆಧುನಿಕ ಭಾರತವನ್ನು, ಸಮನ್ವಯದ ರಾಷ್ಟ್ರವನ್ನು ಕಟ್ಟಲು ಸಾಧ್ಯವಾಗುತ್ತದೆ. ಮುಕ್ತ ಸಮಾಲೋಚನೆ, ಸಂವಾದ ಮತ್ತು ಸದ್ಭಾವನೆಗಳ ಮೂಲಕ ಸಮಾಜವನ್ನು ಗ್ರಹಿಸುವ ಹಾಗೂ ನಿರ್ವಚಿಸುವ ಉದಾತ್ತ ಕಲ್ಪನೆಯಿಂದ ಮಾತ್ರವೇ ಅಂಬೇಡ್ಕರ್‌ ಬಲವಾಗಿ ಪ್ರತಿಪಾದಿಸಿದ ಭ್ರಾತೃತ್ವವನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ.
ಮನ್ವಂತರ ಹಾದಿಯಲ್ಲಿ ನಿಂತು, ಹತ್ತು ಹಲವಾರು ಕವಲುಗಳ ಆಲೋಚನಾ ವಿಧಾನಗಳಿಂದ ದಿಕ್ಕುಗಾಣದಂತಾಗಿರುವ ನವ ಭಾರತದ ಯುವ ಸಮೂಹಕ್ಕೆ ಬಹುತ್ವ ಭಾರತದ ಉದಾತ್ತ ಚಿಂತನೆಗಳನ್ನು ರವಾನಿಸಬೇಕಾದರೆ, ಉದಾರ ಸಾರ್ವಜನಿಕ ವಲಯವನ್ನು ಪ್ರತಿನಿಧಿಸುವ ನಾಗರಿಕ ಸಮಾಜದ ಚಿಂತನಾ ವಿಧಾನಗಳೂ ಬದಲಾಗಬೇಕಿದೆ. ತಳಸಮುದಾಯಗಳ ನಾಡಿಮಿಡಿತವನ್ನು ಅರಿತು ಕ್ಷಣಕ್ಷಣಕ್ಕೂ ಸ್ಪಂದಿಸುವ ಮೂಲಕ ಮೇಲ್ಪದರ ಉದಾರ ಸಾರ್ವಜನಿಕ ವಲಯವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಇಲ್ಲವಾದರೆ ತನ್ನ ಸೀಮಿತ ಸ್ವಯಂ-ಜ್ಞಾನವನ್ನೇ ಅನುಸರಿಸಿ ಭಾವಾತಿರೇಕದ ಮೇಲರಿಮೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ನಾಗರಿಕ ಸಮಾಜವು ನಿರಂಕುಶ ಪ್ರಭುತ್ವದ ನಿಷ್ಠಾವಂತ ಅನುಯಾಯಿಯಾಗಿ ಪರ್ಯವಸಾನಗೊಳ್ಳುತ್ತದೆ. ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಶಯಗಳನ್ನು ಕಾಪಾಡಿಕೊಳ್ಳುವ ನೆಲೆಯಲ್ಲಿ ಇದು ಅನಪೇಕ್ಷಿತವೂ ಹೌದು, ಅಪಾಯಕಾರಿಯೂ ಹೌದು.

Tags: ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ಪರಸ್ಪರ ಕಿತ್ತಾಡಿಕೊಂಡ ಪ್ರತಾಪ್ ಸಿಂಹ ಹಾಗೂ ಪ್ರೀತಂಗೌಡ…

Next Post

ಮೈಸೂರಿನ ಸಭೆಯಲ್ಲಿ ಅಮಿತ್‌ ಷಾ ಕೊಟ್ಟ ಮೂರು ಸಲಹೆಗಳು ಏನು..?

Related Posts

Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
0

ಹಾಸನದ ಹೊಳೆನರಸೀಪುರದ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal revanna) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ (Karnataka High Court) ಇತ್ಯರ್ಥಗೊಳಿಸಿದೆ. ಮನೆ ಕೆಲಸದಾಕೆ...

Read moreDetails

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025
Next Post
ಮೈಸೂರಿನ ಸಭೆಯಲ್ಲಿ ಅಮಿತ್‌ ಷಾ ಕೊಟ್ಟ ಮೂರು ಸಲಹೆಗಳು ಏನು..?

ಮೈಸೂರಿನ ಸಭೆಯಲ್ಲಿ ಅಮಿತ್‌ ಷಾ ಕೊಟ್ಟ ಮೂರು ಸಲಹೆಗಳು ಏನು..?

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada