ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ನಟ ಧನಂಜಯ್ ಆಗಸ್ಟ್ 23 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ . ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ನಟ ಡಾಲಿ ಧನಂಜಯ್ ಈ ಬಾರಿ ಹುಟ್ಟುಹಬ್ಬ ಅಚರಿಸದಿರಲು ನಿರ್ಧರಿಸಿ ಈ ಕುರುತು ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ಧಾರೆ.
ಹೌದು, ಈ ವಿಡಿಯೋದಲ್ಲಿ ಡಾಲಿ ಧನಂಜತ್ ಅವರು, “ನನ್ನ ಅಭಿಮಾನಿಗಳು, ಪ್ರೀತಿ ಪಾತ್ರರೆಲ್ಲರಿಗೂ ನಮಸ್ಕಾರ. ಬಹಳ ಖುಷಿಯಾಗುತ್ತದೆ. ನನ್ನ ಹುಟ್ಟುಹಬ್ಬ ಅಂದಾಕ್ಷಣ ತುಂಬಾ ಹಿಂದಿನಿಂದಲೇ ಸೆಲೆಬ್ರೆಷನ್ ಶುರು ಮಾಡುತ್ತೀರಾ. ಬೆಂಗಳೂರಿನಲ್ಲೂ ರಕ್ತದಾನ ಶಿಬಿರ, ನೇತ್ರದಾನ ನೋಂದಣಿ ಶಿಬಿರ ಎಲ್ಲಾ ನಡೆಸಿದ್ರೆ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ನಡೆಸಿದ್ದೀರಾ. ನನಗೂ ನಿಮ್ಮೊಟ್ಟಿಗೆ ಸೇರಿ ಹುಟ್ಟುಹಬ್ಬ ಆಚರಿಸಲು ಆಸೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣ ಸೆಲೆಬ್ರೇಟ್ ಮಾಡಲು ಸಾಧ್ಯವಾಗಲಿಲ್ಲ. ಈ ವರ್ಷ ಕೂಡ ಬರ್ತ್‌ಡೇ ಸೆಲೆಬ್ರೆಷನ್ ಮಾಡುವ ಪರಿಸ್ಥಿತಿಯಲ್ಲಿ ನಾನು ಕೂಡ ಇಲ್ಲ. ನಮ್ಮ ನಾಡು ಕೂಡ ಇಲ್ಲ. ಯಾಕೆಂದರೆ ಅಪ್ಪು ಅವರು ಅಗಲಿ ಇನ್ನು ವರ್ಷ ಕೂಡ ಆಗಿಲ್ಲ. ಶಿವಣ್ಣ ಸೇರಿದಂತೆ ಯಾರು ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಹಾಗಾಗಿ ಈ ವರ್ಷ ಕೂಡ ಬರ್ತ್‌ಡೇ ಆಚರಣೆ ಇರಲ್ಲ. ಹೇಗೆ ಎರಡು ವರ್ಷ ಕ್ಷಮಿಸಿ ಪ್ರೀತಿಸಿದ್ರೋ ಹಂಗೆ ಈ ವರ್ಷ ಕೂಡ ಕ್ಷಮಿಸಿ. ಮುಂದಿನ ವರ್ಷ ಎಲ್ಲರೂ ಸೇರಿ ಬರ್ತ್‌ಡೇ ಆಚರಿಸೋಣ” ಎಂದು ಹೇಳಿದ್ದಾರೆ.
ಮುಂದಿನ ವರ್ಷ ಒಳ್ಳೆ ಕೆಲಸಗಳ ಮೂಲಕ ಹುಟ್ಟುಹಬ್ಬ ಆಚರಿಸೋಣ. ನಾನು ಕೂಡ ನಿಮ್ಮ ಜೊತೆ ನಿಮ್ಮ ಜೊತೆ ಸೇರಿಕೊಳ್ಳುತ್ತೇನೆ. ಹಾಗಾಗಿ ಈ ವರ್ಷ ಎಲ್ಲಿದ್ದಿರೋ ಅಲ್ಲಿಂದಲೇ ಶುಭಾಶಯ ಕೋರಿ. ನನ್ನ ಹುಟ್ಟುಹಬ್ಬಕ್ಕೆ ತರುತ್ತಿದ್ದ ಕೇಕ್, ಹಾರ, ಶಾಲೂ ಮತ್ತೊಂದು ಎಲ್ಲದಕ್ಕೂ ಖರ್ಚು ಮಾಡುತ್ತಿದ್ದ ದುಡ್ಡಲ್ಲಿ ಒಂದಿಷ್ಟು ಅವಶ್ಯಕ ಇರುವ ಜೀವಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಿ. ಅದರ ಮೂಲಕ ಹುಟ್ಟುಹಬ್ಬ ಆಚರಿಸೋಣ. ಅವರ ಪ್ರಾರ್ಥನೆಗಳು ನನ್ನನ್ನು ಕಾಯುತ್ತದೆ. ನಿಮ್ಮನ್ನು ಕಾಯುತ್ತದೆ ಎಂದು ಹೇಳಿದ್ದಾರೆ.