ಮಳೆಗಾಲ ಬಂತು ಅಂದ್ರೆ ಶೀತ ನೆಗಡಿ, ಕೆಮ್ಮು ಜ್ವರ ಇದೆಲ್ಲಾ ಕಾಮನ್ .. ಆದರೆ ಇದೆಲ್ಲದರ ನಡುವೆ ಹೆಚ್ಚು ಜನಕ್ಕೆ ಕಾಡ್ತಾ ಇರುವಂತ ಒಂದು ಕಾಯಿಲೆ ಅಥವಾ ಜ್ವರ ಅಂದ್ರೆ ಡೆಂಗ್ಯೂ.. ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಭಯ ಬೀಳ್ತಾ ಇರೋದು ಮಲೇರಿಯ ಜ್ವರ, ಚಿಕನ್ ಗುನ್ಯಾ , ಝೀಕ ವೈರಸ್ ಇವುಗಳಿಗೆ..ಈ ಸಮಸ್ಯೆ ಜನಕ್ಕೆ ಕಾಡ್ತಾ ಇದೆ. ಜ್ವರಗಳಿಂದ ಪಾರಾಗಿ ಬಂದವರ ಸಂಖ್ಯೆ ಒಂದೆಡೆಯಾದರೆ ಕೆಲವರು ಪ್ರಾಣವನ್ನ ಕೂಡ ಕಳೆದುಕೊಂಡಿದ್ದಾರೆ.

ಈ ಜ್ವರಗಳು ಬಂದಾಗ ರಕ್ತದಲ್ಲಿ ಪ್ಲೇಟ್ಲೆಟ್ಸ್ ಕೌಂಟ್ ಇದ್ದಕಿದ್ದ ಹಾಗೆ ಕಡಿಮೆಯಾಗುತ್ತದೆ.ಹಾಗೂ ವ್ಯಕ್ತಿಯನ್ನು ಸುಸ್ತು ಮಾಡುತ್ತದೆ.ಒಬ್ಬ ವ್ಯಕ್ತಿಗೆ ೪ ಲಕ್ಷಕ್ಕೂ ಮೇಲು ಪ್ಲೇಟ್ಲೆಟ್ಸ್ ಕೌಂಟ್ ಇರಬೇಕು..ಆದ್ರೆ ಈ ಜ್ವರದಿಂದಾಗಿ ೪೦ ಸಾವಿರದಷ್ಟು ಕಡಿಮೆಯಾಗುತ್ತದೆ.ಇಂತಹಾ ಸಂದರ್ಭದಲ್ಲಿ ಯಾವ ಪದಾರ್ಥ ಸೇವಿಸುವುದರಿಂದ ಪ್ಲೇಟ್ಲೆಟ್ಸ್ ಕೌಂಟ್ ಹೆಚ್ಚಿಸಿಕೊಳ್ಳಬಹುದ ಅನ್ನೋದರ ಮಾಹಿತಿ ಇಲ್ಲಿದೆ.

ಪಪ್ಪಾಯ ಎಲೆಗಳು
ಲೇಟ್ ಲೇಟ್ ಕೌಂಟನ್ನ ಹೆಚ್ಚಿಸಿಕೊಳ್ಳಲು ಪಪ್ಪಾಯ ಎಲೆಯಿಂದ ಮಾಡಿರುವಂತಹ ಪದಾರ್ಥಗಳನ್ನ ಸೇವಿಸುವುದು ಉತ್ತಮ. ಅದರಲ್ಲೂ ಕೂಡ ತಪ್ಪದೇ ಪ್ರತಿದಿನ ನೀವು ಪಪ್ಪಾಯ ಎಲೆಯ ಜ್ಯೂಸ್ ಅನ್ನ ಕುಡಿಯಬೇಕು. ಪಪ್ಪಾಯಿ ಎಲೆಗಳ ಸಾರವು ALOX12 ಅರಾಚಿಡೋನೇಟ್ 12-ಲಿಪೊಕ್ಸಿಜೆನೇಸ್ ಅಥವಾ ಪ್ಲೇಟ್‌ಲೆಟ್ ಟೈಪ್ ಲಿಪೊಕ್ಸಿಜೆನೇಸ್ ಅನ್ನು 15 ಪಟ್ಟು ಹೆಚ್ಚಿಸುತ್ತದೆ.

ಕಿವಿ ಹಣ್ಣು
ಕಿವಿ ಫ್ರೂಟ್ನಲ್ಲಿ ದೇಹಕ್ಕೆ ಬೇಕಾದಷ್ಟು ವಿಟಮಿನ್ ಸಿ ,ವಿಟಮಿನ್ ಇ, ವಿಟಮಿನ್ ಕೆ, ಪೊಟ್ಯಾಶಿಯಂ ಅಂಶ ಹೆಚ್ಚಿರುತ್ತದೆ ಇದು ನಮ್ಮ ದೇಹದಲ್ಲಿ ಹುಮಿನಿಟಿ ಜಾಸ್ತಿ ಮಾಡುತ್ತದೆ ಹಾಗೂ ಇದರಿಂದಾಗಿ ಪ್ಲೇಟ್ಲೆಟ್ಸ್ ಕೌಂಟ್ ಕೂಡ ಹೆಚ್ಚಾಗುತ್ತದೆ.

ಬೀಟ್ರೂಟ್
ಬೀಟ್ರೂಟ್ ಅನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದ ಅಂಶವನ್ನ ಹೆಚ್ಚು ಮಾಡುತ್ತದೆ ಹಾಗೂ ಮುಖ್ಯವಾಗಿ ಇದರಲ್ಲಿ ಹೇರಿನವಾಗಿ ಕ್ಯಾಲ್ಸಿಯಂ ಹಾಗೂ ಕನಿಜಾಂಶಗಳು ಇರುತ್ತದೆ. ಇದರಿಂದ ಪ್ಲೇಟ್ಲೆಟ್ಸ್ ಕೌಂಟ್ ಕೂಡ ಹೆಚ್ಚಾಗುತ್ತದೆ.

ಸಿಟ್ರಿಕ್ ಫ್ರೂಟ್ಸ್
ಪ್ಲೇಟ್ಲೆಟ್ ಕೌಂಟನ್ನ ಹೆಚ್ಚಿಸಿಕೊಳ್ಳಲು ಸಿಟ್ರಿಕ್ ಅಂಶವಿರುವ ಹಣ್ಣುಗಳಾದ ಕಿತ್ತಲೆ ಹಣ್ಣು ,ದ್ರಾಕ್ಷಿ ,ಬೆರ್ರಿ ಫ್ರೂಟ್ಸ್ ಇವುಗಳನ್ನ ಸೇವಿಸುವುದು ಉತ್ತಮ. ಈ ಹಣ್ಣುಗಳಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶ ಹೆಚ್ಚಿರುತ್ತದೆ ಅದರಲ್ಲೂ ವಿಟಮಿನ್ ಸಿ ಫೋನೇಟ್ ಹಾಗೂ ಐರನ್ ಕಂಟೆಂಟ್ ಜಾಸ್ತಿ ಇರುತ್ತದೆ ಾಗೂ ಹೆಲ್ದಿ ಬ್ಲಡ್ ಸೆಲ್ಸ್‌ನ ಹೆಚ್ಚು ಮಾಡುತ್ತದೆ.
