ನಮ್ಮ ನಾಡಿನ ವರ ನಟ ಡಾ.ರಾಜ್ ಕುಮಾರವರ ” ಶಂಕರ್ ಗುರು ” ಚಲನಚಿತ್ರದ ಈ ಹಾಡಿನಲ್ಲಿ ..
” ಬೆಳಗಿನ ಬಿಸಿಲು ಚನ್ನಾ, ಹೊಂಗೆಯ ನೆರಳು ಚನ್ನಾ, ಗೆಳತಿಯೆ ನಿನ್ನ ಸ್ನೇಹ ಚಿನ್ನಕ್ಕಿಂತ ಚನ್ನಾ ಆ…..” ಅಂತ, ಅವರದ್ದೇ ಕಂಠ ಸಿರಿಯಲ್ಲಿ ಹೇಳಿದ್ದಾರೆ..
ಮರ ಕಡೆಯೋದು ಸಮಸ್ಯೆಯ ಪರಿಹಾರ ಅಲ್ಲವೇ ಅಲ್ಲ…
.ಪ್ರಕೃತಿ ಮನುಜ ಕುಲಕ್ಕೆ ಕೊಟ್ಟಿರೋ ಇದೊಂದು ವರದಾನವೇ ಸರಿ…..
ನಮ್ಮ ದೇಶದಲ್ಲಿ ಅದರಲ್ಲು ದಕ್ಷಿಣ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಸಿಗುವ ಮರ ಯಾವುದು ಎಂದರೆ ಅದು ಹೊಂಗೆ ಎಂದೆ ಹೇಳಬಹುದು. ಈ ಮರಗಳು ಏಶಿಯಾದ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಕಂಡು ಬರುತ್ತದೆ. ಭಾರತ, ಚೈನ, ಮಲೇಶಿಯಾ, ಇಂಡೋನೇಶಿಯಾ ದೇಶಗಳು ಈ ಮರದ ಆವಾಸ ಸ್ಥಾನ. ಈ ಮರಕ್ಕೆ ಹಿಂದಿಯಲ್ಲಿ ಕರಂಜ್, ತಮಿಳಿನಲ್ಲಿ ಪುಂಗೈ, ತೆಲುಗಿನಲ್ಲಿ ಕಾನುಗ ಮತ್ತು ಸಂಸ್ಕೃತದಲ್ಲಿ ನಕ್ತಮಾಲ ಎಂಬ ಹೆಸರಿವೆ.
ವೈಜ್ಞಾನಿಕವಾಗಿ ಮಿಲ್ಲೆಟಿಯ ಪಿನ್ನಾಟ (Milletia pinnata) ಎಂಬ ಹೆಸರಿದೆ.
ಹೊಂಗೆ ಮರದ ಉಪಯೋಗ :
ಇದನ್ನು ಮಧುಮೇಹ ನಿವಾರಣೆಯಲ್ಲಿ ಬಳಸುತ್ತಾರೆ. ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ಉದುರಿವಿಕೆಯನ್ನು ತಡೆಯಲು, ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು. ಚರ್ಮ ಕಾಯಿಲೆಯಲ್ಲಿ ಅದರ ಬೀಜದ ಎಣ್ಣೆಯನ್ನು ಹಾಗೂ ಎಲೆಯ ಕಷಾಯವನ್ನು ಬಳಸುತ್ತಾರೆ.
ಹೊಂಗೆ ಮರದ ಎಲೆಗಳು ಕಂದು ಅಥವಾ ಬೂದು ಬಣ್ಣಕ್ಕೆ ಬರುವುದು ಸಾಮಾನ್ಯವಾದ ಸಮಸ್ಯೆ.…..ತಾನಾಗೇ ಸರಿ ಪಡಿಸಿಕೊಳ್ಳತ್ತೆ ,
ಇದರ ಉಪಯೋಗಗಳು ಗೊತ್ತಿಲ್ಲದವರಿಗೆ ಅದೊಂದು ಎಲ್ಲಾ ಮರಗಳಿಗಿಂತ ಹೆಚ್ಚು ನೆರಳು ಕೊಡುವ , ತಂಪಾಗಿ ಇಡುವ ಮರ
” ಹೊಂಗೆಯ ನೆರಳು, ತಾಯಿಯ ಮಡಿಲು ” ಅಂತಾನೇ ನಾನ್ನುಡಿ ಇದೆ…..
ಮರ ಕಡೆಯೋ ಯೋಚನೆಗಳು ಮಾಡದೆ….ರಕ್ಕಸರಂತೆ ವರ್ತಿಸದೆ ಪಕೃತಿಯನ್ನು ಗೌರವಿಸೋಣ…..
ಗಿಡ ನೆಟ್ಟು, ಮರ ಬೆಳಸಿ , ಪ್ರಕೃತಿ ಉಳಿಸೋಣ
ಮಾಹಿತಿ : ತೀರ್ಥಹಳ್ಳಿ ಅನಂತ ಕಲ್ಲಾಪುರ