ʼಸಾರ್ವಜನಿಕ ಹಿತಾಸಕ್ತಿ ಅರ್ಜಿʼ (PIL)ಯನ್ನು ಆಧುನಿಕ ಪ್ರಜಾಪ್ರಭುತ್ವಕ್ಕೆ ಪರಿಚಯಿಸಿದ ಭಾರತದ ʼನ್ಯಾಯಾಂಗ ಕ್ರಿಯಾಶೀಲತೆʼಯು ಇತಿಹಾಸದಲ್ಲಿ ಮರೆಯಲಾಗದ್ದು ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಆರ್ಎಸ್ಎಸ್ ಬೆಂಬಲಿತ ವಕೀಲರ ಸಂಘ ʼಅಖಿಲ ಭಾರತೀಯ ಅಧಿವಕ್ತ ಪರಿಷದ್ʼ ನಡೆಸಿದ ಪ್ರೊ. NR ಮಾಧವ ಮೆನನ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೇಶದ ಉನ್ನತ ನ್ಯಾಯಾಲಯಗಳು ದೇಶದ ಏಳಿಗೆಗೆ ಉತ್ತಮ ಕೆಲಸ ಮಾಡಿದೆ, ಅದರಲ್ಲೂ ಸುಪ್ರೀಂ ಕೋರ್ಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿರುವ ಅನಕ್ಷರಸ್ಥರ, ಹಿಂದುಳಿದ ವರ್ಗದವರ ಕಣ್ಣೀರು ಒರೆಸಿಕೊಳ್ಳುವ ಕೆಲಸ ಮಾಡಿದೆ. ಅದೆಷ್ಟೋ ಬಾರಿ ಸುಪ್ರೀಂ ಕೋರ್ಟ್ಗೆ ಹೆಚ್ಚಿನ ಅಧಿಕಾರವಿದ್ದರೂ, ಅದು ತನ್ನ ನ್ಯಾಯಾಂಗ ಕ್ರಿಯಾಶೀಲತೆ ಹೊರತಾಗಿ ಕಾರ್ಯ ನಿರ್ವಹಿಸಿಲ್ಲ” ಎಂದರು.
ತುರ್ತು ಪರಿಸ್ಥಿತಿಯ ನಂತರ ಸುಪ್ರೀಂ ಕೋರ್ಟ್ ಹೊಸ ಯುಗಕ್ಕೆ ಸಾಕ್ಷಿಯಾಯಿತು. ಪಿಐಎಲ್ ನಂತಹ ಮಹತ್ವದ ಹೊಸ ಬಗೆಯನ್ನ ಅಳವಡಿಸಿಕೊಂಡಿದ್ದು ನ್ಯಾಯಾಂಗ ಇತಿಹಾಸದಲ್ಲೇ ಒಂದು ದಿಟ್ಟ ನಿರ್ಧಾರ.
ಮಾಜಿ ಮುಖ್ಯ ನ್ಯಾಯಾಧೀಶ ಪಿಎನ್ ಭಗವತಿ ಕೂಡಾ ಅಟಾರ್ನಿ ಜನರಲ್ ವೇಣುಗೋಪಾಲ್ ಅವರ ʼನ್ಯಾಯಾಂಗ್ ಕ್ರಿಯಾಶೀಲತೆʼಗೆ ಧ್ವನಿಗೂಡಿಸಿ, ಸುಪ್ರೀಂ ಕೋರ್ಟ್ ನಿಂದಾಗಿಯೇ ʼನ್ಯಾಯಾಂಗ ಕ್ರಿಯಾಶೀಲತೆʼ ಜಗತ್ತಿನಲ್ಲಿಯೇ ಅತಿ ಹೆಚ್ಚು ಪವರ್ ಫುಲ್ ಆಗಿದೆ ಎಂದು ತಿಳಿಸಿದರು.
“ನಿವೃತ್ತ ಮುಖ್ಯ ನ್ಯಾಯಾಧೀಶರು ಹೇಳಿದ್ದರಿಂದ ನಾನು ಒಪ್ಪಿಕೊಳ್ಳಲೇಬೇಕು. ನಾನು ಕೂಡಾ ಸುಪ್ರೀಂ ಕೋರ್ಟ್ ಸರಕಾರದ ಅತ್ಯಂತ ಪವರ್ ಫುಲ್ ಅಂಗ ಅನ್ನೋದನ್ನ ಒಪ್ಪುತ್ತೇನೆ. ಯಾಕೆಂದರೆ ಇಲ್ಲಿ ನೀಡಲಾಗುವ ತೀರ್ಪುಗಳು ಒಂದೊಮ್ಮೆ ಶಾಸಕಾಂಗ ಹಾಗೂ ಕಾರ್ಯಾಂಗದ ಮೇಲೂ ಪ್ರಭಾವ ಬೀರುತ್ತದೆ ಎಂದು ವೇಣುಗೋಪಾಲ್ ತಿಳಿಸಿದರು.
ಅಲ್ಲದೇ ಸುಪ್ರೀಂ ಕೋರ್ಟ್ ಸರಕಾರದ ಇನ್ನಿತರ ಅಂಗಗಳ ಬಗ್ಗೆ ತೀರ್ಮಾನ ನೀಡುವ ಅಂತಗರ್ತ ಶಕ್ತಿಯನ್ನ ಹೊಂದಿದೆ, ಜೊತೆಗೆ ಶಾಸಕಾಂಗ ಹಾಗು ಕಾರ್ಯಾಂಗಗಳು ಸಮರ್ಪಕವಾಗಿಲ್ಲದಿದ್ದಾಗ ಅಸಾಂವಿಧಾನಿಕ ಎಂದು ಕ್ರಮಕೈಗೊಳ್ಳುವ ಅಧಿಕಾರವೂ ಹೊಂದಿದೆ. ಇದು ಪ್ರಜಾಪ್ರಭುತ್ವ ದೇಶವೊಂದರ ಸಂವಿಧಾನ ದೇಶದ ಉನ್ನತ ನ್ಯಾಯಾಲಯಕ್ಕೆ ನೀಡಿದ ನಿಜವಾದ ಶಕ್ತಿಯಾಗಿದೆ ಎಂದರು.
ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಈ ಮೂರು ಅಂಗಗಳು ಸಮಾನವಾದದು ಮತ್ತು ಸಮನ್ವಯತೆಯಿಂದ ಸಾಗಬೇಕಾದುದು ಅಗತ್ಯ. ಇಲ್ಲಿ ಯಾರೊಬ್ಬರೂ ಇನ್ನೊಬ್ಬ ಅಧಿಕಾರದ ಮೇಲೆ ಅತಿಕ್ರಮಣ ನಡೆಸುವಂತಿಲ್ಲ. ಇನ್ನು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೆನನ್, ಸೋನಿಯಾ ಮಾಥುರ್ ಅವರ ಸೇವೆಯ ಅಮೋಘ. ಮೆನನ್ ಓರ್ವ ಪ್ರಖ್ಯಾತ ಶಿಕ್ಷಣ ತಜ್ಞರಾಗಿದ್ದುಕೊಂಡು ಆಧುನಿಕತೆಯನ್ನ ಅಳವಡಿಸಲು ಪ್ರೇರೇಪಿಸಿದರು. 3 ವರುಷಗಳಿಗೊಮ್ಮೆ ನಡೆಯುತ್ತಿದ್ದ LLB ಕಾರ್ಯಕ್ರಮವನ್ನ ಐದು ವರುಷಕ್ಕೇರಿಸಿದವರು.
ಭಾರತೀಯ ಕಾನೂನು ಶೀಕ್ಷಣದ ಪಿತಾಮಹ ಅಂತಲೇ ಹೆಸರಾದ ಮೆನನ್ ಅವರು ಕಳೆದ 2019ರ ಮೇ ತಿಂಗಳಿನಲ್ಲಿ ವಿಧಿವಶರಾಗಿದ್ದಾರೆ.