ಅಚ್ಚೆ ದಿನ್ ಬರುತ್ತೆ ಅಂತ ಕಾದು ಕುಳಿತಿರುವ ಜನರಿಗೆ ದಿನದಿಂದ ದಿನಕ್ಕೆ ಕೇಂದ್ರ ಸರ್ಕಾರ ಶಾಕ್ ನೀಡುತ್ತಲೇ ಬಂದಿದೆ. ಪ್ರತಿ ದಿನ ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಕಂಗೆಟ್ಟಿರುವ ಇಂತಹ ಸಂದರ್ಭದಲ್ಲಿ ಮತ್ತೆ ಇಂಧನ ದರ ಏರಿಕೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದಿನ ನಿತ್ಯ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತಿದ್ದು, ಇಂದು ಮತ್ತೆ ಈ ದರದಲ್ಲಿ ಏರಿಕೆ ಕಂಡಿದೆ. ಅಕ್ಟೋಬರ್ 16ನೆಯ ದಿನವಾದ ಇಂದು (ಶನಿವಾರ) ಕೂಡ ತೈಲ ದರ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗಿನ ವೇಳೆಗೆ ಪ್ರತೀ ಒಂದು ಲೀಟರ್ ಪೆಟ್ರೋಲ್ಗೆ 36 ಪೈಸೆ ಏರಿದರೆ, ಪ್ರತೀ ಒಂದು ಲೀಟರ್ ಡೀಸೆಲ್ ದರದಲ್ಲಿ 37 ಪೈಸೆ ಏರಿಕೆ ಕಂಡಿದೆ. ಮುಖ್ಯ ವಿಷಯವೇನೆಂದರೆ ಇಲ್ಲಿಯ ತನಕ ನಮ್ಮ ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್ ಮಾತ್ರ ನೂರರ ಗಡಿ ದಾಟಿತ್ತು, ಆದರೆ ಇಂದು ಡೀಸೆಲ್ ದರ ಕೂಡ 100 ರೂ. ತಲುಪಿದೆ.
ಬೆಂಗಳೂರು ಮತ್ತು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ 650 ಕ್ಕೂ ಹೆಚ್ಚು ಬಂಕ್ ಇದ್ದು ಬಹುತೇಕ ಬಂಕ್ ನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 100 ರೂ ದಾಟಿದೆ.
ಮಾಜಿ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್, ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಮತ್ತು ಹಂಸ ಬಂಕ್ ಮಾಲಿಕ ರವೀಂದ್ರನಾಥ್ ಬಿಆರ್ TNIE ಜೊತೆ ಮಾತನಾಡಿ,”ಬೆಲೆಗಳು ಸ್ವಯಂಚಾಲಿತವಾಗಿ ಉತ್ಪನ್ನ ವೆಚ್ಚ, ತೆರಿಗೆಗಳು, ಶುಲ್ಕಗಳು ಮತ್ತು ಸಾರಿಗೆ ವೆಚ್ಚವನ್ನು ಅವಲಂಬಿಸಿ ಲೆಕ್ಕ ಹಾಕುತ್ತವೆ. ಶನಿವಾರ ಬೆಳಿಗ್ಗೆ 6ರಿಂದ ನಗರದ ಇತರ ಬಂಕ್ಗಳಂತೆಯೇ ನಾವು ಡೀಸೆಲ್ ಅನ್ನು 100.00 ರೂಗೆ ಮಾರಾಟ ಮಾಡುತ್ತಿದ್ದೇವೆ. “ಬೆಂಗಳೂರಿನ ಪ್ರಸ್ತುತ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಬಾಲಾಜಿ ರಾವ್ ಕೂಡ ಡೀಸೆಲ್ ರೂ 100 ಕ್ಕೆ ತಲುಪಿದೆ ಮತ್ತು ಎಲ್ಲಾ ಬಂಕ್ಗಳಲ್ಲಿ ರೂ 100 ಕ್ಕೆ ಮಾರಾಟ ಮಾಡುತ್ತಾರೆ ಎಂದು ಖಚಿತಪಡಿಸಿದ್ದಾರೆ.
ತೈಲ ಬೆಲೆ ಏರಿಕೆಯ ಕುರಿತು ಅನೇಕರು ಟ್ವೀಟರ್ ನಲ್ಲಿ ವಿರೋಧ ವ್ಯಕ್ತಪಡಿಸಿದ್ದು ಅದರ ಪೋರ್ತಿ ವಿವರ ಇಲ್ಲಿದೆ-
ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಪ್ರಮುಖ ಮಹಾ ನಗರಗಳಲ್ಲಿ ಇಂದಿನ ತೈಲ ದರ ಹೀಗಿದೆ –
ಬೆಂಗಳೂರು : ಪೆಟ್ರೋಲ್: 109.16, ಡೀಸೆಲ್: 100.00
ಮಂಗಳೂರು ಪೆಟ್ರೋಲ್: 108.60, ಡೀಸೆಲ್: 99.45
ಮೈಸೂರು: ಪೆಟ್ರೋಲ್: 109.21, ಡೀಸೆಲ್: 100.04
ಮುಂಬಯಿ: ಪೆಟ್ರೋಲ್ : 111.43, ಡೀಸೆಲ್ : 102.15
ಚೆನ್ನೈ: ಪೆಟ್ರೋಲ್ : 102.80, ಡೀಸೆಲ್ : 98.69