ಮೈಸೂರಿನ ಮುಡಾ 50-50 ಹಗರಣದಲ್ಲಿ ಮತ್ತೊಂದು ಮಹತ್ತರ ಬೆಳವಣಿಗೆ ನಡೆದಿದೆ. ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಅರ್ಜಿ ಸಲ್ಲಿಸಲಾಗಿದೆ. ಹೈಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ, ಏಕ ಸದಸ್ಯಪೀಠದ ಆದೇಶವನ್ನು ಪ್ರಶ್ನಿಸಿದ್ದಾರೆ. ಹೈಕೋರ್ಟ್ನ ಏಕಸದಸ್ಯ ಪೀಠ ಮನವಿಯನ್ನು ತಿರಸ್ಕರಿಸಿದ ಬಳಿಕ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.
ಎಲ್ಲಾ ಆರೋಪಿಗಳಿಗೂ ಸಮನ್ಸ್ ಜಾರಿ ಮಾಡುವಂತೆ ದ್ವಿಸದಸ್ಯ ಪೀಠ ಆದೇಶ ಮಾಡಿದೆ. ಏಪ್ರಿಲ್ 28ಕ್ಕೆ ಅರ್ಜಿ ವಿಚಾರಣೆಗೆ ಸಮಯ ನಿಗದಿ ಮಾಡಿದೆ ಹೈಕೋರ್ಟ್ ವಿಭಾಗಿಯ ಪೀಠ. A1 ಸಿದ್ದರಾಮಯ್ಯ, A2 ಪಾರ್ವತಿ, A3 ಆರೋಪಿ ಮಲ್ಲಿಕಾರ್ಜುನ ಸ್ವಾಮಿ, A4 ಆರೋಪಿ ದೇವರಾಜುಗೆ ನೋಟಿಸ್ ಜಾರಿ ಆಗಿದೆ. ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಲೋಕಾಯುಕ್ತಕ್ಕೂ ಸಮನ್ಸ್ ಜಾರಿ ಆಗಿದೆ.
ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಬಿ.ಎಂ. ಅವರಿಗೆ ಹೈಕೋರ್ಟ್ ನೋಟಿಸ್ ಕೊಟ್ಟಿದೆ. ಮುಡಾ ಕೇಸ್ನಲ್ಲಿ ಸಿಬಿಐ ತನಿಖೆ ಕೋರಿ ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಬಿಐ, ಕೇಂದ್ರ ಗೃಹ ಇಲಾಖೆ, ಲೋಕಾಯುಕ್ತ ಪೊಲೀಸರಿಗೂ ನೋಟಿಸ್ ಕೊಟ್ಟಿದ್ದು ಏಪ್ರಿಲ್ 28 ರಂದು ನಡೆಯುವ ವಿಚಾರಣೆ ವೇಳೆ ಎಲ್ಲರೂ ಹಾಜರಾಗಬೇಕಿದೆ.
ಏಕಸದಸ್ಯ ಪೀಠ ಸಿಬಿಐ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಲೋಕಾಯುಕ್ತ ಪೊಲೀಸರೇ ತನಿಖೆಗೆ ಸಮರ್ಥರು ಎಂದಿತ್ತು. ಅದಾಗ್ಯ ಮೇಲ್ಮನವಿ ಸಲ್ಲಿಕೆ ಮಾಡಲ್ಲ ಎಂದಿದ್ದ ಸ್ನೇಹಮಯಿ ಕೃಷ್ಣ ಇದೀಗ ಲೋಕಾಯುಕ್ತರು ಬಿ ರಿಪೋರ್ಟ್ ಸಲ್ಲಿಸಿದ್ದು, ಅದರ ತೀರ್ಪು ಬರುವ ಮೊದಲೇ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬರಲಿದೆ. ಲೋಕಾಯುಕ್ತ ಪೊಲೀಸರ ಸರ್ಕಾರದ ಅಧೀನದಲ್ಲಿದ್ದಾರೆ, ಹೀಗಾಗಿ ಸಿಬಿಐ ತನಿಖೆ ಸೂಕ್ತ ಎನ್ನುವುದು ದೂರುದಾರರ ವಾದ. ಕೋರ್ಟ್ ಏನು ಹೇಳಲಿದೆ ಅನ್ನೋದ್ರ ಮೇಲೆ ಸಿದ್ದರಾಮಯ್ಯ ಸಂಕಷ್ಟದ ದಿನಗಳು ಶುರುವಾಗಲಿವೆ.