ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಗೃಹ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಚುಟುಕು ಕ್ರಿಕೆಟ್ ಹಬ್ಬ ಸವಿಯುವ ಅವಕಾಶ ಸಿಕ್ಕಿದೆ.
ಕಳೆದ ವರ್ಷ RCB ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಿಂದ 11 ಜನರು ಪ್ರಾಣ ಕಳೆದುಕೊಂಡಿದ್ದರು. ಇದರ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಾವಳಿಗಳಿಗೆ ಸರ್ಕಾರ ನಿಷೇಧ ಏರಿ ಕಾಲ್ತುಳಿತ ಮತ್ತು ಸ್ಟೇಡಿಯಂ ಭಧ್ರತೆ ವಿಚಾರಕ್ಕೆ ನಿ.ನ್ಯಾ.ಕುನ್ಹಾ ನೇತೃತ್ವದಲ್ಲಿ ಆಯೋಗ ಕೂಡ ರಚಿಸಿತ್ತು. ಈ ಆಯೋಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವೆಲ್ಲ ಬದಲಾವಣೆ ತರಬೇಕೆಂದು ಸಮಗ್ರ ವರದಿ ಸಲ್ಲಿಸಿತ್ತು. ಬಳಿಕ ಪೊಲೀಸರು ಮತ್ತು ಆಯೋಗದ ಸುಮಾರು 17 ಅಂಶಗಳ ಬದಲಾವಣೆಗೆ KSCAಗೆ ಸೂಚಿಸಿತ್ತು. ಈ ಬದಲಾವಣೆ ಬಗ್ಗೆ ಹೊಸ KSCA ಆಡಳಿತ ಮಂಡಳಿ ಚರ್ಚೆ ನಡೆದು ಎಲ್ಲವನ್ನೂ ಜಾರಿಗೆ ತರೋದಾಗಿ ಹೇಳಿದೆ. ಹೀಗಾಗಿ ಗೃಹ ಇಲಾಖೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ನಡೆಸೋದಕ್ಕೆ ಷರತ್ತು ಬದ್ದ ಅನುಮತಿ ನೀಡಿದೆ.
ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ KSCA, ಗೃಹ ಇಲಾಖೆ ನಿಗದಿಪಡಿಸಿದ ಎಲ್ಲಾ ಷರತ್ತುಗಳನ್ನು ಪೂರೈಸುವ ವಿಶ್ವಾಸ ಹೊಂದಿದೆ. ಈಗಾಗಲೇ ತಜ್ಞರ ಪರಿಶೀಲನಾ ಸಮಿತಿಗೆ ವಿವರವಾದ ಕಾರ್ಯಯೋಜನೆಯನ್ನು ಸಲ್ಲಿಸಿದ್ದು, ಸುರಕ್ಷತೆ, ಭದ್ರತೆ ಮತ್ತು ಜನಸಮೂಹ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ಅಕ್ಷರಶಃ ಹಾಗೂ ಆತ್ಮಸಾಕ್ಷಿಯಾಗಿ ಜಾರಿಗೆ ತರಲು ಬದ್ಧವಾಗಿದೆ ಎಂದು ತಿಳಿಸಿದೆ.
ಇನ್ನು ಮ್ಯಾಚ್ ಗಳಿಗೆ ಗೃಹ ಇಲಾಖೆ ಕೆಲವು ಷರತ್ತು ವಿಧಿಸಿದೆ. ಸ್ಟೇಡಿಯಂನಲ್ಲಿ ನಿಗಧಿತ ಸಮಯದೊಳಗೆ ಕಾಮಗಾರಿಗಳು, ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಬೇಕು. KSCA ಸ್ಟೇಡಿಯಂನಲ್ಲಿ
ಅಂತಾರಾಷ್ಟ್ರೀಯ ಮಾನದಂಡ ಅನ್ವಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕು. ಕ್ರೀಡಾಂಗಣದಲ್ಲಿ ನಡೆಯುವ ಕಾಮಗಾರಿಗಳು ಉನ್ನತ ಮಟ್ಟದ ಸಮಿತಿ ಮತ್ತು ಸರ್ಕಾರದ ಉಸ್ತುವಾರಿಗೆ ನಿಬಂಧನೆಗೆ ಒಳಪಟ್ಟಿರುತ್ತದೆ. ಒಂದು ವೇಳೆ KSCA ಅನುಪಾಲನೆ ಅಸಮರ್ಪಕವಾಗಿದ್ದಲ್ಲಿ ತಪಾಸಣೆ ನಡೆಸುವ, ಅನುಮತಿಯನ್ನು ಪರಿಷ್ಕರಿಸುವ, ಹಿಂಪಡೆಯುವ ಸರ್ಕಾರ, ಸಮಿತಿಗೆ ಇರುತ್ತದೆ. ಸದ್ಯ ಕ್ರೀಡಾಂಗಣದಲ್ಲಿ ಪ್ರಸ್ತಾಪಿತ ಕಾಮಗಾರಿಗಳು ನಡೆಯುತ್ತಿದೆ. ಹೀಗಾಗಿ ಪ್ರೇಕ್ಷಕರ ಸಂಖ್ಯೆಗೆ ನಿರ್ಧಿಷ್ಟವಾಗಿ ಅನುಮತಿ ಸಾಧ್ಯವಿಲ್ಲ. ಕಾಮಗಾರಿಗಳು ಪೂರ್ಣಗೊಂಡು ಸಮಿತಿ ವರದಿ ಬಳಿಕ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಸಂಖ್ಯೆಗೆ ಅನುಮತಿಸಲು ಗೃಹ ಇಲಾಖೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.
ಆದರೆ RCB ಆಡಳಿತ ಮಂಡಳಿ ಈಗಾಗಲೇ ಛತ್ತಿಸ್ ಘಡ್ ಮತ್ತು ನವಿ ಮುಂಬೈ ಕ್ರಿಕೆಟ್ ಆಡಳಿತ ಮಂಡಳಿ ಜೊತೆ ಪಂದ್ಯ ಆಡಿಸುವ ಕುರಿತು ಮಾತುಕತೆ ನಡೆಸಿದೆ.ಹಾಗೆ ಕಾಲ್ತುಳಿತದ ಕೇಸ್ ಇನ್ನೂ ಜೀವಂತವಾಗಿರುವುದರಿಂದ RCB ಪಂದ್ಯಾವಳಿಗಳು ಬೆಂಗಳೂರಲ್ಲಿ ನಡೆಯುವುದು ಬಹುತೇಕ ಅನುಮಾನವಾಗಿದೆ.













