ಪೀರಿಯಡ್ಸ್ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಹೊಟ್ಟೆ ಹಾಗೂ ಬೆನ್ನಿನ ಭಾಗದಲ್ಲಿ ತುಂಬಾನೇ ನೋವು ಹಾಗೂ ಎಳೆತ ಇರುತ್ತದೆ. ಇಂತಹ ಸಂದರ್ಭದಲ್ಲಿ ಸರಿಯಾಗಿ ಊಟ ತಿಂಡಿ ಸೇರುವುದಿಲ್ಲ, ವಾಕರಿಕೆ, ತಲೆನೋವು ಹಾಗೂ ಕೋಪದ ಜೊತೆಗೆ ಮೂಡ್ ಸ್ವಿಂಗ್ಸ್ ಹೆಚ್ಚಿರುತ್ತದೆ. ಕೆಲವೊಬ್ಬರಿಗೆ ಬ್ಲಡ್ ಫ್ಲೋ ಕೂಡ ಜಾಸ್ತಿ ಇರುತ್ತದೇ. ಸೊ ತಿಂಗಳಿಗೆ ಒಮ್ಮೆ ಬರುವ ಈ ಮುಟ್ಟಿನ ನೋವು ಹೆಣ್ಣು ಮಕ್ಕಳಿಗೆ ನರಕ ಯಾತನೆ ಅಂದ್ರೆ ತಪ್ಪಾಗಲ್ಲ. ಈ ಮುಟ್ಟಿನ ನೋವು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಇರುತ್ತದೆ ಆದರೆ ಕೆಲವರಿಗೆ ಹೆಚ್ಚಿರುತ್ತದೆ. ಈ ನೋವನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ಯಾವುದೇ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಇದರಿಂದ ನಮಗೆ ಬೇರೆ ರೀತಿಯ ಸಮಸ್ಯೆಗಳು ಹೆಚ್ಚಾಗುವುದು ಸಹಜ .ಹಾಗಾಗಿ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿ ಮುಟ್ಟಿನ ನೋವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅನ್ನುವುದರ ಮಾಹಿತಿ ಇಲ್ಲಿದೆ. ನೋವನ್ನ ಕಡಿಮೆ ಮಾಡುವ ಸೂಪರ್ ಮನೆ ಮದ್ದುಗಳು ಇವು..

ಮೆಂತ್ಯ ಟೀ(Fenugreek Tea)
ಮೆಂತ್ಯ ನ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಮುಟ್ಟಿನ ನೋವು ತಕ್ಷಣವೇ ಕಡಿಮೆಯಾಗುತ್ತದೆ.ಹೆಚ್ಚು ಜನ ಮಹಿಳೆಯರಿಗೆ ಮೆಂತ್ಯಯಿಂದ ಆಗುವ ಉಪಯೋಗಗಳು ತಿಳಿದಿಲ್ಲ .ಮತ್ತೊಂದು ಮುಖ್ಯವಾದ ವಿಚಾರ ಅಂದ್ರೆ ನಿಮಗೆ ಪಿರಿಯಡ್ಸ್ ಆಗುವ ಎರಡು ದಿನದ ಮೊದಲಿನಿಂದಲೇ ಮೆಂತೆ ಟೀಯನ್ನು ಸೇವನೆ ಮಾಡಿ ಇದರಿಂದ ಹೊಟ್ಟೆ ನೋವು(Stomach Pain) ತುಂಬಾನೇ ಕಡಿಮೆ ಇರುತ್ತದೆ.ಹಿಂದೆಲ್ಲಾ ಹೆಣ್ಣು ಮಕ್ಕಳು ಮೊದಲನೇ ಬಾರಿ ಮುಟ್ಟಾದಾಗ ಮೆಂತ್ಯೆಯಿಂದ ಮುದ್ದೆಯನ್ನ ಮಾಡಿಕೊಡುತ್ತಿದ್ದರು. ಇದರಿಂದ ತ್ವಜೆಗೆ ತುಂಬಾನೇ ಒಳ್ಳೆಯದು, ಜೊತೆಗೆ ಬೆನ್ನಿನ ಮೂಳೆಯನ್ನು(Bones) ಗಟ್ಟಿ ಮಾಡುತ್ತದೆ.

ಸಾಸಿವೆ ಎಣ್ಣೆ ಮಸಾಜ್(Mustard Oil)
ಪಿರಿಯಡ್ಸ್ ಸಂದರ್ಭದಲ್ಲಿ ಎರಡು ಟೇಬಲ್ ಸ್ಪೂನ್ ನಷ್ಟು ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಚೆನ್ನಾಗಿ ಹಚ್ಚಿ ಮಸಾಜ್(Massage) ಮಾಡುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.ಸಾಸಿವೆಯಲ್ಲಿ ನೋವನ್ನ ಹೀರಿಕೊಳ್ಳುವ ಅಂಶ ಹೆಚ್ಚಿರುವುದರಿಂದ ನೋವಿಗೆ ಒಳ್ಳೆಯದು.

ಎಳನೀರು(Coconut Water)
ಮುಟ್ಟಿನ ಸಂದರ್ಭದಲ್ಲಿ ಪ್ರತಿ ದಿನ ಒಂದು ಎಳನೀರನ್ನು ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಎಳನೀರು ನಮ್ಮ ದೇಹವನ್ನು ತಂಪಾಗಿ(Cold) ಇರಿಸುತ್ತದೆ. ಇದರಲ್ಲಿ ಅಡಗಿರುವ ನ್ಯೂಟ್ರಿಷನ್(Nutrition) ಹಾಗೂ ಮಿನರಲ್ ಅಂಶದಿಂದ ಸುಸ್ತಾಗಿರುವ ನಮ್ಮ ದೇಹ ಒಂದು ರೀತಿ ರಿಲ್ಯಾಕ್ಸ್(Relax) ಆಗುತ್ತದೆ.

ಜೀರಿಗೆ ಕಷಾಯ(Cumin Decoction)
ಹೊಟ್ಟೆ ನೋವು ಬಂದಾಗ ಜೀರಿಗೆ ಕಷಾಯ ಅತ್ಯುತ್ತಮ ಮದ್ದು.ಜೀರಿಗೆ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಬೆಲ್ಲವನ್ನು(Jaggery) ಬೆರೆಸಿ ಕುಡಿಯುವುದರಿಂದ ನಿಮಗೆ ರುಚಿ ವೈಸ್ ಕೂಡ ಚೆನ್ನಾಗಿರುತ್ತೆ.ಹಾಗೂ ನೋವನ್ನು ಕೂಡ ನಿವಾರಣೆ ಮಾಡುತ್ತದೆ ನಿನಗೆ ಒಂದು ಬಾರಿ ಜೀರಿಗೆ ಕಷಾಯವನ್ನು ಕುಡಿಯುವುದರಿಂದ ಈ ಹೊಟ್ಟೆ ನೋವು ಮಾತ್ರವಲ್ಲದೆ ಎದೆ ಉರಿ(Heart Burn) ಹಾಗೂ ಗ್ಯಾಸ್ಟ್ರಿಕ್(Gastric) ಆಗಿದ್ರು ಕೂಡ ನಿವಾರಣೆ ಆಗುತ್ತದೆ.
