
ನವದೆಹಲಿ:ಐಫೋನ್ (iPhone 16 for sale )ಮಾರಾಟ ಆರಂಭವಾಗಿದ್ದು, ಆಪಲ್ ಅಂಗಡಿಗಳ ಮುಂದೆ ಜನ ಕ್ಯೂ ನಿಂತ (People stood in queue)ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇಂದು ಬಿಡುಗಡೆಯಾದ ಆಯಪಲ್ ಕಂಪನಿಯ ಐಫೋನ್‌ನ 16ನೇ ಸರಣಿಯ ವಿವಿಧ ಸ್ಮಾರ್ಟ್‌ಫೋನ್‌ಗಳ ಮಾರಾಟ ಭಾರತದಲ್ಲಿ ಆರಂಭವಾಗಿದೆ.
हे प्रभु हे हरिराम कृष्ण जगन्नाथन प्रेमानंद ये क्या हुआ।,😂🤣🤔#iPhone16 खरीदने के लिए इतने सारे लोग 🧐 pic.twitter.com/Rw8POJfCtX
— Sonu Singh Maurya (@sonusingh00143) September 20, 2024
ಇದು ಮಾರಾಟವು ಪ್ರಾರಂಭವಾಗುತ್ತಿದ್ದಂತೆ, ಜನರು ಮುಂಬೈ ಮತ್ತು ದೆಹಲಿಯ ಆಪಲ್ ಸ್ಟೋರ್‌ಗಳ ಹೊರಗೆ ಫೋನ್ ಖರೀದಿಸಲು ಕ್ಯೂನಲಿ ನಿಂತಿರುವುದು ಕಂಡುಬಂತು.

ವೈರಲ್ ಆದ ವಿಡಿಯೋದಲ್ಲಿ ಮುಂಬೈನ ಬಿಕೆಸಿಯಲ್ಲಿರುವ ಕಂಪನಿಯ ಅಂಗಡಿಯ ಹೊರಗೆ ಮೊಬೈಲ್ ಫೋನ್‌ಗಳನ್ನು ಪಡೆಯಲು ಹೆಚ್ಚಿನ ಸಂಖ್ಯೆಯ ಜನರು ಸರದಿಯಲ್ಲಿ ನಿಂತಿರುವುದನ್ನು ನೋಡಬಹುದಾಗಿದೆ.
ಇದೇ ಮೊದಲ ಬಾರಿಗೆ ಹಿಂದಿನ ಆವೃತ್ತಿಯ ದುಬಾರಿ ಮಾದರಿಯ ಫೋನ್ ಬೆಲೆಗಿಂತ ಅಗ್ಗದ ಬೆಲೆಗೆ 16 ಸರಣಿಯ ಐಫೋನ್ ಪ್ರೊ ಸರಣಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.



