ʻಪೆಂಟಗನ್ʼ ಚಿತ್ರದ ನಟಿಗೆ ಯೂಟ್ಯೂಬರ್ ಸೋಗಿನಲ್ಲಿ ಬಂದು ವ್ಯಕ್ತಿಯೊಬ್ಬ ಕೆಟ್ಟದಾಗಿ ಪ್ರಶ್ನೆ ಕೇಳಿದ್ದರ ಸಂಬಂಧ, ಇಂದು ಚಿತ್ರದ ನಿರ್ದೇಶಕ ರಘು ಶಿವಮೊಗ್ಗ ಹಾಗೂ ನಟಿ ತನಿಷಾ ಕುಪ್ಪಂಡ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಕಳೆದೆರಡು ದಿನಗಳ ಹಿಂದೆ ಸಂದರ್ಶನದ ವೇಳೆ ನಟಿ ತನಿಷಾಗೆ ಯೂಟ್ಯೂಬರ್ ಒಬ್ಬ ʻನೀವು ನ್ಯೂಡ್ ಫಿಲ್ಮ್ ಮಾಡ್ತೀರಾ ಅಂತ ಪ್ರಶ್ನೆ ಕೇಳಿದ್ದ. ಈ ವೇಳೆ ನಟಿ ಮುಜುಗರದ ಸನ್ನಿವೇಶಕ್ಕೆ ಒಳಗಾಗಿದ್ದು, ಯೂಟ್ಯೂಬರ್ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಂದು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡಿದ ನಟಿ ತನಿಷಾ, ತಮಗಾದ ಕಹಿ ಘಟನೆಯನ್ನ ನೆನಪಿಸಿಕೊಂಡರು.. ನಾನು ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೀನಿ ಅನ್ನೋ ಒಂದೇ ಒಂದು ಕಾರಣಕ್ಕೆ, ಸಾಕಷ್ಟು ಜನ ಕೆಟ್ಟದಾಗಿ ಕಮೆಂಟ್ ಮಾಡ್ತಿದ್ದಾರೆ ಅಂತ ತನಿಷಾ ಕಣ್ಣೀರಿಟ್ಟರು.

ದುಡ್ಡು ಮಾಡೋ ಸಲುವಾಗಿಯೋ ಅಥವಾ ಫೇಮಸ್ ಆಗ್ಬೇಕು ಅಂತಲೋ ನಾನು ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿಲ್ಲ.. ನಾನು ಒಬ್ಬ ಕಲಾವಿದೆಯಾಗಿ, ನನಗೆ ಕೊಟ್ಟ ಪಾತ್ರವನ್ನ ಮಾಡಿದ್ದೀನಿ ಅಂತ ತನಿಷಾ ಕೊಪ್ಪಂಡ ಹೇಳಿದ್ರು. ಬಳಿಕ ಮಾತನಾಡಿದ ʻಪೆಂಟಗನ್ʼ ಚಿತ್ರದ ನಿರ್ದೇಶಕ ರಘು ಶಿವಮೊಗ್ಗ, ಒಂದು ಹೆಣ್ಣು ಸಾಂಗ್ ಒಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಅಂತ ಏನೆನೋ ಮಾತಾಡ್ತಾರೆ, ಆದ್ರೆ ಅದೇ ಹಾಡಿನಲ್ಲಿ ಒಬ್ಬ ಗಂಡು ಕೂಡ ಇದ್ದಾನೆ.. ಆತನ ಬಗ್ಗೆ ಯಾಕೆ ಮಾತಾಡಲ್ಲ..? ಪ್ರತಿ ಸಾರಿ ಹೆಣ್ಣನ್ನೇ ಯಾಕೆ ಟಾರ್ಗೆಟ್ ಮಾಡ್ತಾರೆ? ಅಂತ ಹೇಳಿದ್ರು.

ಏನೇ ಹೇಳಿ.. ಯಾರೋ ಒಬ್ಬ ತಲೆ ಇಲ್ಲದವನು ಅಸಭ್ಯವಾಗಿ ಪ್ರಶ್ನೆ ಕೇಳಿದ್ದಾನೆ ಅಂತ ಬೇರೆಯವರು ಆತನಿಂದ ಪ್ರೇರಣೆಗೊಳಗಾಗಿಯೋ? ಅಥವಾ ಆ ನಟಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾಳೆ ಅಂತಲೋ ಆಕೆಯ ಬಗ್ಗೆ ಬೇಕಾಬಿಟ್ಟಿಯಾಗಿ ಕಮೆಂಟ್ ಮಾಡುವುದು, ಮಾತನಾಡುವುದು ತಪ್ಪು. ಒಂದು ಹೆಣ್ಣಿನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡೋಕು ಮುಂಚೆ ನಿಮ್ಮ ಮನೆಯಲ್ಲೂ ಒಬ್ಬ ಹೆಣ್ಣು ಮಗಳಿದ್ದಾಳೆ ಅನ್ನೋದನ್ನ ಮರೆಯದಿರಿ.. ಕಲೆಗೆ ಬೆಲೆ ಕೊಡಿ.. ಕಲಾವಿದರನ್ನ ಗೌರವಿಸಿ..











