ಹಾಸನ ಲೋಕಭಾ ಚುನಾವಣಾ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ತೀವ್ರ ಕುತೂಹಲ ಮೂಡಿಸುತ್ತಿ ಹಾಸನದ ಫಲಿತಾಂಶ. ಹಾವು ಏಣಿ ಆಟದಂತಾಗಿರೋ ಮತ ಗಳಿಕೆ ಲೆಕ್ಕಾಚಾರದಲ್ಲಿ ಅಲ್ಪ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ.
ಅತ್ಯಾಚಾರ ಆರೋಪದಡಿ ಎಸ್ಐಟಿ ಬಂಧನದಲ್ಲಿರೋ ಪ್ರಜ್ವಲ್ ರೇವಣ್ಣ, ಎಂಟನೇ ಸುತ್ತಿನ ಮತ ಎಣಿಕೆ ನಂತರ ಅಲ್ಪ ಅಂತರದಲ್ಲಿ ಮುಂದಿದ್ದಾರೆ. ಕೇವಲ 1992 ಮತಗಳಿಂದ ಪ್ರಜ್ವಲ್ ಮುನ್ನಡೆ ಪಡೆದಿದ್ದಾರೆ. ಕಳೆದ ಎರಡು ಸುತ್ತುಗಳಲ್ಲಿ ಪ್ರಜ್ವಲ್ ಹಿಂದಿಕ್ಕೆ ಮುನ್ನಡೆ ಸಾಧಿಸಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್.
ಇತ್ತ ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ಫಲಿತಾಂಶ ನೋಡುವ ಅವಕಾಶ ಇಲ್ಲದಂತಾಗಿದೆ. ತನ್ನ ರಿಸಲ್ಟ್ ತಾನೇ ನೋಡಲಾಗದ ಸ್ಥಿತಿಯಲ್ಲಿರುವ ಪ್ರಜ್ವಲ್ ರೇವಣ್ಣ, ಮತ ಎಣಿಕೆ ನಡೆಯುತ್ತಿರುವುದನ್ನು ನೋಡಲು ಸಾಧ್ಯವಾಗ್ತಿಲ್ಲ. ಫಲಿತಾಂಶ ವೀಕ್ಷಿಸಲು ಟಿವಿ ವ್ಯವಸ್ಥೆ ಮಾಡದ ಎಸ್ಐಟಿ ಅಧಿಕಾರಿಗಳು.
ಟಿವಿ ಇಲ್ಲದೆ ಸೆಲ್ನಲ್ಲಿ ಸೈಲೆಂಟಾಗಿ ಕುಳಿತ ಪ್ರಜ್ವಲ್ ರೇವಣ್ಣ, ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಹಾಸನದಲ್ಲಿ ಮತದಾನಕ್ಕೂ ಮುನ್ನ ನಾಲ್ಕು ದಿನಗಳ ಕಾಲ ಪೆನ್ ಡ್ರೈವ್ ಸದ್ದು ಮಾಡಿತ್ತು. ಆ ಬಳಿಕ ಮತದಾನ ನಡೆದಿತ್ತು. ಪೆನ್ಡ್ರೈವ್ ಫಲಿತಾಂಶ ಏನಾಗಲಿದೆ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.