ತುಮಕೂರು: ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ‘ಪೇ ಸಿಎಂ’(PAY CM) ಅಭಿಯಾನ ಬಳಿಕ ಕಾಂಗ್ರೆಸ್(Congress) ನಾಯಕರು ನಗರದಲ್ಲಿ ‘ಪೇ ಎಂಎಲ್‌ಎ’ (PAY MLA) ಅಭಿಯಾನವನ್ನು (Campaign)ಆರಂಭಿಸಿದ್ದಾರೆ.
ಶುಕ್ರವಾರ ರಾತ್ರಿ ನಗರದ ಬಿಜಿಎಸ್ ವೃತ್ತ, ಬಿ.ಎಚ್.ರಸ್ತೆ, ಹೊರಪೇಟೆ ಸೇರಿದಂತೆ ವಿವಿಧೆಡೆಯ ರಸ್ತೆ ಗೋಡೆಗಳ ಮೇಲೆ ‘ಪೇ ಎಂಎಲ್‌ಎ’ ಪೋಸ್ಟರ್’ಗಳನ್ನು(Poster) ಕಾಂಗ್ರೆಸ್ ಕಾರ್ಯಕರ್ತರು ಅಂಟಿಸಿದ್ದಾರೆ.
ಪೋಸ್ಟರ್ ಮಧ್ಯದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಭಾವಚಿತ್ರವನ್ನು ಹಾಕಲಾಗಿದ್ದು, ‘ನಿಮ್ಮ ಕೆಲಸ ಆಗಬೇಕೆ? ನನಗೆ ಪೇ ಮಾಡಿ. ಭ್ರಷ್ಟಾಚಾರವೇ ನನ್ನ ಮೊದಲ ಆದ್ಯತೆ’ ಎಂದು ನಮೂದಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶಾಸಕರು ಲಂಚ ಪಡೆದಿದ್ದಾರೆ ಎಂಬ ಆರೋಪ ಇಟ್ಟುಕೊಂಡು ಈ ಅಭಿಯಾನ ಆರಂಭಿಸಿದ್ದಾರೆ ಎನ್ನಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಪೊಲೀಸರು ಪೋಸ್ಟರ್’ಗಳನ್ನು ಕಿತ್ತು ಹಾಕಿದ್ದಾರೆ.