ಆಂಧ್ರಪ್ರದೇಶದಲ್ಲಿ ಆಡಳಿತರೂಢ YSR ಕಾಂಗ್ರೆಸ್ ಹಾಗೂ ಜನಸೇನಾ ಕಾರ್ಯಕರ್ತರ ನಡುವಿನ ಕಿತ್ತಾಟ ತಾರಕಕ್ಕೇರಿದ್ದು ಪೊಲೀಸರು ಜನಸೇನಾ ಪಕ್ಷದ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಜನಸೇನಾ ಪಕ್ಷದ ಮುಖ್ಯಸ್ಥ ನಟ ಪವನ್ ಕಲ್ಯಾಣ್ ಪೊಲೀಸರು ನಮ್ಮ ಪಕ್ಷದ ಅನೇಕ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಮತ್ತು ಜನವಾಣಿ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಕೇಳಿದ್ದಿಕ್ಕೆ ಪೊಲೀಸರು 15ಕ್ಕೂ ಹೆಚ್ಚು ಜನರ ವಿರುದ್ದ ಪ್ರಕರಣವನ್ನ ದಾಖಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದ್ದಲ್ಲದೆ ಪೊಲೀಸರು ನಡುರಾತ್ರಿ ನಾನು ವಿಶಾಖಪಟ್ಟಣದಲ್ಲಿ ತಂಗಿದ್ದ ಹೋಟೆಲ್ಗೆ ಬಂದು ಬಾಗಿಲು ಬಡಿದಿದ್ದಾರೆ ಎಂದು ಪವನ್ ಕಲ್ಯಾಣ್ಆರೋಪಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ನೇತೃತ್ವದ YSR ಕಾಂಗ್ರೆಸ್ ಪಕ್ಷವು ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿ ರಚನೆ ವಿರೋಧಿಸಿ ಜನಸೇನಾ ಪಕ್ಷದ ಕಾರ್ಯಕರ್ತರು ರಾಜ್ಯಧ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಶನಿವಾರ ವಿಶಾಖಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸಿದ ನಟ ಪವನ್ ಕಲ್ಯಾಣ್ ಆಡಳಿತರೂಢ YSR ಕಾಂಗ್ರೆಸ್ ವಿರುದ್ದ ಗುಡುಗಿದ್ದಾರೆ. ಸಮಾವೇಶದಲ್ಲಿ ಪವನ್ ಹಾಗೂ ಚಿರಂಜೀವಿ ಅಭಿಮಾನಿಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಸಮಾವೇಶ ಶುರುವಾಗುವ ಮುನ್ನ ವಿಶಾಖಪಟ್ಟಣಕ್ಕೆ ತೆರಳಿದ್ದ ಸಚಿವೆ ರೋಜಾ, YSRಕಾಂಗ್ರೆಸ್ ನಾಯಕ ಜೋಗಿ ರಮೇಶ್, TTD ಅಧ್ಯಕ್ಷ ಸುಬ್ಬಾ ರೆಡ್ಡಿ ಕಾರಿನ ಮೇಲೆ ಜನಸೇನಾ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.













