ಬಹುಭಾಷಾ ನಟ ಕನ್ನಡಿಗ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ತಮ್ಮ ಮನೋಜ್ಞ ಅಭಿನಯದ ಮೂಲಕ ಖ್ಯಾತಿ ಗಳಿಸಿದ್ದ ಅರ್ಜುನ್ ತಮ್ಮ ಮಗಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಪ್ರೇಮಬರಹ ಚಿತ್ರದ ಮೂಲಕ ಸ್ಯಾಂಡಲ್ವುಡ್ ಹಾಗು ಕಾಲಿವುಡ್ಗೆ ನಾಯಕಿಯಾಗಿ ಪಾದರ್ಪಣೆ ಮಾಡಿದ ಐಶ್ವರ್ಯ ಸರ್ಜಾ ಚಿತ್ರಕ್ಕೆ ಎರಡನೇ ಭಾರಿಗೆ ಅವರ ತಂದೆ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೇಮಬರಹ ಚಿತ್ರದ ಬಳಿಕ ಅಷ್ಟಾಗಿ ಯಾವ ಚಿತ್ರಗಳಲ್ಲಿಯೂ ಐಶ್ವರ್ಯ ಕಾಣಿಸಿಕೊಂಡಿರಲಿಲ್ಲ.
ಈ ಹಿಂದೆ ಪ್ರೇಮ ಬರಹ ಸಿನಿಮಾವನ್ನು ಸ್ವತಃ ನಿರ್ದೇಶಿಸಿ ನಿರ್ಮಾಣ ಮಾಡಿದ್ದ ಅರ್ಜುನ್ ಈ ಭಾರೀ ತಮ್ಮ ಮಗಳನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದ ಪವರ್ಸ್ಟಾರ್ ಪವನ್ ಕಲ್ಯಾಣ್ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇನ್ನು ಹೆಸರಿಡದ ಈ ಚಿತ್ರಕ್ಕೆ ಫಲಕ್ನುನಾ ದಾಸ್ ಖ್ಯಾತಿಯ ಯುವ ನಟ ವಿಶ್ವಕ್ ಸೇನ್ ಜೋಡಿಯಾಗಿ ನಟಿಸುತ್ತಿದ್ದಾರೆ. ತಾಂತ್ರಿಕ ಬಳಗ ಹಾಗು ತಾರಾಗಣದ ಆಯ್ಕೆ ಇನ್ನಷ್ಟೇ ಆಗಬೇಕಿದೆ.