ಇಂದು ಬೆಳಿಗ್ಗೆ 9:30 ರ ಸುಮಾರಿಗೆ ರೇಣುಕಸ್ವಾಮಿ (Renukaswamy) ಪ್ರಕರಣದ A1 ಆರೋಪಿ ಪವಿತ್ರ ಗೌಡ (Pavitra gowda) ಪರಪ್ಪನ ಅಗ್ರಹಾರ (Parappana agrahara) ಜೈಲಿಂದ ರಿಲೀಸ್ ಆಗಿದ್ದಾರೆ. ಡಿಸೆಂಬರ್ 13 ರಂದು ಹೈಕೋರ್ಟ್ ನಲ್ಲಿ ಜಾಮೀನು ಮಂಜೂರಾದ ಹಿನ್ನಲೆ ಇಂದು ರಿಲೀಸ್ ಆಗಿದ್ದಾರೆ.
ಪರಪ್ಪನ ಅಗ್ರಹಾರದಿಂದ ನೇರವಾಗಿ ಪವಿತ್ರ ಗೌಡ ಮತ್ತು ಅವರ ತಾಯಿ ಭಾಗ್ಯಮ್ಮ ತಲಘಟ್ಟಪುರದ ವರ್ಜ ಮುನೇಶ್ವರ ಸ್ವಾಮಿ (Muneshwara swamy) ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಹರಕೆ ನೆರವೇರಿಸಿದ್ದಾರೆ.
ಮೊದಲಿಗೆ ಪವಿತ್ರ ಗೌಡ ಗೆ ಜಲ ಪ್ರೋಕ್ಷಣೆ ಮಾಡಿ ಪುಣ್ಯ ಸ್ನಾನ ನೆರವೇರಿಸಲಾಯ್ತು. ಆ ನಂತರ ಮುನೇಶ್ವರ ಸ್ವಾಮಿಗೆ ಅರ್ಚನೆ ಮಾಡಿಸುವ ವೇಳೆ, ತಾಯಿ ಮಗಳು ತಮ್ಮನ ಹೆಸರಿನ ಜೊತೆಗೆ ನಟ ದರ್ಶನ್ ಹೆಸರಲ್ಲೂ ಕೂಡ ಪವಿತ್ರ ಅರ್ಚನೆ ಮಾಡಿಸಿದ್ದಾರೆ.