
ವಾಷಿಂಗ್ಟನ್: ಶಾಲೆಗೆ ಸೇರಿಸಲು ಸಹಾಯ ಮಾಡುವ ನೆಪದಲ್ಲಿ ತನ್ನ ಸಂಬಂಧಿಯನ್ನು ಮೂರು ವರ್ಷಗಳ ಕಾಲ ತಮ್ಮ ಪೆಟ್ರೋಲ್ ಬಂಕ್ ಮತ್ತು ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದ ಆರೋಪದಡಿಯಲ್ಲಿ ಭಾರತೀಯ-ಅಮೆರಿಕನ್ ದಂಪತಿಗೆ ಅಮೆರಿಕದ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
31 ವರ್ಷದ ಹರ್ಮನ್‌ಪ್ರೀತ್ ಸಿಂಗ್‌ಗೆ 11 ವರ್ಷ ಜೈಲು ಶಿಕ್ಷೆ ಮತ್ತು 43 ವರ್ಷದ ಕುಲಬೀರ್ ಕೌರ್‌ಗೆ 7 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯವು ಸಂತ್ರಸ್ತೆ, ಅವರ ಸೋದರಸಂಬಂಧಿ ಗೆ ಪರಿಹಾರವಾಗಿ 1.87 ಕೋಟಿ ರೂಪಾಯಿ ನೀಡುವಂತೆ ಆದೇಶಿಸಿದೆ. ಆದರೆ ಈ ದಂಪತಿಗಳು ಕೆಲ ವರ್ಷ ಮೊದಲೇ ವಿಚ್ಛೇದನ ಪಡೆದಿದ್ದಾರೆ. “ಪ್ರತಿವಾದಿಗಳು ಸಂತ್ರಸ್ಥನೊಂದಿಗಿನ ತಮ್ಮ ಸಂಬಂಧವನ್ನು ದುರ್ಬಳಕೆ ಮಾಡಿಕೊಂಡರು, ಅವರನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಯುನೈಟೆಡ್ ಸ್ಟೇಟ್ಸ್‌ಗೆ ಕರೆತಂದು ಆಮಿಷವೊಡ್ಡಿದ್ದಾರೆ” ಎಂದು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗದ ಸಹಾಯಕ ಅಟಾರ್ನಿ ಜನರಲ್ ಕ್ರಿಸ್ಟನ್ ಕ್ಲಾರ್ಕ್ ಹೇಳಿದ್ದಾರೆ.
“ಪ್ರತಿವಾದಿಗಳು ಸಂತ್ರಸ್ಥನ ವಲಸೆ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡರು ಮತ್ತು ಕನಿಷ್ಠ ವೇತನಕ್ಕಾಗಿ ದೀರ್ಘ ಗಂಟೆಗಳ ಕಾಲ ಕೆಲಸ ಮಾಡಲು ಆತನನ್ನು ಒತ್ತಾಯಿಸಿ ಬೆದರಿಸಿ ದೈಹಿಕ ಬಲ ಪ್ರಯೋಗಿಸಿ ಮತ್ತು ಮಾನಸಿಕ ನಿಂದನೆಗೆ ಒಳಪಡಿಸಿದರು” ಎಂದು ಅವರು ಹೇಳಿದರು.
ಇಂತಹ ಬಲವಂತದ ದುಡಿಮೆಯನ್ನು ನಮ್ಮ ದೇಶ ಸಹಿಸುವುದಿಲ್ಲ ಎಂಬ ಬಲವಾದ ಸಂದೇಶವನ್ನು ಕಳುಹಿಸಬೇಕು” ಎಂದು ಅವರು ಹೇಳಿದರು. ಈಸ್ಟರ್ನ್ ಡಿಸ್ಟ್ರಿಕ್ಟ್ ಆಫ್ ವರ್ಜೀನಿಯಾದ ಯುಎಸ್ ಅಟಾರ್ನಿ ಜೆಸ್ಸಿಕಾ ಡಿ ಅಬೆರ್ ಅವರು ಶಿಕ್ಷಣವನ್ನು ಪಡೆಯಲು ಮತ್ತು ಅವರ ಜೀವನವನ್ನು ಸುಧಾರಿಸಲು ಸಂತ್ರಸ್ಥನ ಬಯಕೆಯನ್ನು ಆರೋಪಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಬದಲಾಗಿ, ಅವರು ಮಾನವನ ಮೂಲಭೂತ ಅಗತ್ಯಗಳನ್ನು ಕಸಿದುಕೊಂಡರು ಮತ್ತು ಅವರ ಸ್ವಾತಂತ್ರ್ಯವನ್ನು ಕಸಿದುಕೊಂಡರು ಎಂದು ವಕೀಲರು ಹೇಳಿದರು.
ವಿಚಾರಣೆಯಲ್ಲಿ ಪ್ರಸ್ತುತಪಡಿಸಲಾದ ಸಾಕ್ಷ್ಯವು 2018 ರಲ್ಲಿ, ಪ್ರತಿವಾದಿಗಳು ಸಂತ್ರಸ್ಥ , ಸಿಂಗ್ ಅವರ ಸೋದರಸಂಬಂಧಿ ಮತ್ತು ನಂತರ ಅಪ್ರಾಪ್ತ ವಯಸ್ಕನನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವ ಸುಳ್ಳು ಭರವಸೆಯೊಂದಿಗೆ ಭಾರತದಿಂದ ಯುಎಸ್‌ಗೆ ಪ್ರಯಾಣಿಸಲು ಆಮಿಷ ಒಡ್ಡಿದರು ಎಂದು ಸಾಬೀತಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
ಸಿಂಗ್ ಮತ್ತು ಕೌರ್ ಸಂತ್ರಸ್ತನನ್ನು ಅಂಗಡಿ ಶುಚಿಗೊಳಿಸುವುದು, ಅಡುಗೆ ಮಾಡುವುದು, ಸಂಗ್ರಹಣೆ ಮತ್ತು ನಗದು ರಿಜಿಸ್ಟರ್ ಮತ್ತು ಅಂಗಡಿಯ ದಾಖಲೆಗಳನ್ನು ನಿರ್ವಹಿಸುವುದು ಸೇರಿದಂತೆ, ದಿನಕ್ಕೆ 12 ರಿಂದ 17 ಗಂಟೆಗಳ ನಡುವೆ, ಕನಿಷ್ಠ ವೇತನಕ್ಕಾಗಿ, ಕೆಲಸ ಮಾಡಲು ಒತ್ತಾಯಿಸಿದರು. ಸಂತ್ರಸ್ಥನ ವಲಸೆ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡು ದೈಹಿಕ ಕಿರುಕುಳ, ಬಲದ ಬೆದರಿಕೆಗಳು ಮತ್ತು ಇತರ ಗಂಭೀರ ಹಾನಿಗಳಿಗೆ ಒಳಪಡಿಸುವುದು ಸೇರಿದಂತೆ ವಿವಿಧ ಬಲವಂತದ ವಿಧಾನಗಳನ್ನು ಅವರು ಬಳಸಿದರು, ಮತ್ತು ಕೆಲವೊಮ್ಮೆ ಕೆಲಸ ಮಾಡುವುದನ್ನು ಮುಂದುವರಿಸಲು ಒತ್ತಾಯಿಸಲು ಜೀವನ ಪರಿಸ್ಥಿತಿಗಳನ್ನು ಹದಗೆಡಿಸಿದರು, ಎಂದು ಸಾಕ್ಷ್ಯಗಳು ತಿಳಿಸಿವೆ,
ದಂಪತಿಗಳು ಬಲಿಪಶುವನ್ನು ಹಲವಾರು ಸಂದರ್ಭಗಳಲ್ಲಿ ಅಂಗಡಿ ಹಿಂಬದಿ ಕೋಣೆಯಲ್ಲಿ ಮಲಗಲು ಬಿಟ್ಟರು, ಆಹಾರವನ್ನೂ ಸೀಮಿತಗೊಳಿಸಿದರು, ವೈದ್ಯಕೀಯ ಆರೈಕೆ ಅಥವಾ ಶಿಕ್ಷಣವನ್ನು ನೀಡಲು ನಿರಾಕರಿಸಿದರು, ಸಂತ್ರಸ್ತನನ್ನು ಅಂಗಡಿಯಲ್ಲಿ ಮತ್ತು ಅವರ ಮನೆಯಲ್ಲಿ ಮೇಲ್ವಿಚಾರಣೆ ಮಾಡಲು ಕಣ್ಗಾವಲು ಉಪಕರಣಗಳನ್ನು ಬಳಸಿದರು. ಭಾರತಕ್ಕೆ ಮರಳುವ ಆತನ ಮನವಿಯನ್ನು ನಿರಾಕರಿಸಿದರು
ಪ್ರತಿವಾದಿಗಳು ಸಂತ್ರಸ್ತನನ್ನು ಕೌರ್ ಅವರನ್ನು ಮದುವೆಯಾಗುವಂತೆ ಒತ್ತಾಯಿಸಿದರು ಮತ್ತು ಸಂತ್ರಸ್ಥನ ಮೇಲೆ ಕಳ್ಳತನದ ಆರೋಪ ಹೊರಿಸುವುದಾಗಿ ಬೆದರಿಸಿದರು. ತನ್ನ ವಲಸೆ ದಾಖಲೆಗಳನ್ನು ಹಿಂದಕ್ಕೆ ಕೇಳಿದಾಗ ಅಥವಾ ಹೊರಹೋಗಲು ಪ್ರಯತ್ನಿಸಿದಾಗ ದಂಪತಿ , ಕಪಾಳಮೋಕ್ಷ ಮಾಡಿ ಒದ್ದಿದ್ದಾನೆ ಎಂದು ಸಾಕ್ಷ್ಯವು ತೋರಿಸಿದೆ. ಮೂರು ವಿಭಿನ್ನ ಸಂದರ್ಭಗಳಲ್ಲಿ, ಒಂದು ದಿನ ರಜೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಮತ್ತು ಕೆಲಸ ತೊರೆಯಲು ಪ್ರಯತ್ನಿಸಿದ್ದಕ್ಕಾಗಿ ಸಂತ್ರಸ್ಥನಿಗೆ ರಿವಾಲ್ವರ್‌ನಿಂದ ಬೆದರಿಕೆ ಹಾಕಿದ ಆರೋಪವೂ ಇತ್ತು.