EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ. ಪ್ರೇಂನಾಥ್ ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದ ಸಿನಿಮಾ ಪಾರು ಪಾರ್ವತಿ(paru Parvathi). ಬಿಗ್ ಬಾಸ್ ಮತ್ತು ನಾಗಿಣಿ ಸೀರಿಯಲ್ ಖ್ಯಾತಿಯ ದೀಪಿಕಾ ದಾಸ್(Deepika Das), ಪೂನಂ ಸರ್ ನಾಯಕ್ (Poonam Sar Nayak) ಹಾಗೂ ಫವಾಜ್ ಅಶ್ರಫ್ (Pavaj Ashraf) ಪ್ರಮುಖಪಾತ್ರದಲ್ಲಿ ನಟಿಸಿರುವ “#ಪಾರು ಪಾರ್ವತಿ” ಚಿತ್ರ ಚಿತ್ರಮಂದಿರಗಳ ಬಳಿಕ ಇದೀಗ ಓಟಿಟಿಗೆ (April 4) ಆಗಮಿಸಿದೆ.

ಜನವರಿ 31 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋ ಓಟಿಟಿಯಲ್ಲಿ ಸ್ಟ್ರೀಮಿಂಗ್ (Amazon Prime OTT) ಆರಂಭಿಸಿದೆ. ಆರಂಭದಲ್ಲಿ ಈ ಚಿತ್ರದ ಟ್ರೇಲರ್‌ಅನ್ನು ನಟ ಕಿಚ್ಚ ಸುದೀಪ್ (Kiccha Sudheep) ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಹಾರೈಸಿದ್ದರು. ಅದಾದ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾಕ್ಕೆ ಮೆಚ್ಚುಗೆಯೂ ಸಿಕ್ಕಿತ್ತು. ಇದೀಗ ಓಟಿಟಿಯಲ್ಲಿ ಕಣ್ತುಂಬಿಕೊಳ್ಳುವ ಸಮಯ ಬಂದಿದೆ.

ಪ್ರವಾಸ ಕಥನದ ಹಿನ್ನೆಲೆಯ “#ಪಾರು ಪಾರ್ವತಿ” ಸಿನಿಮಾವನ್ನು ಬೆಂಗಳೂರು(Bangalore), ಗೋವಾ(Goa), ಮಹಾರಾಷ್ಟ್ರ(Maharastra), ರಾಜಸ್ಥಾನ(Rajasthan) ಹಾಗೂ ಉತ್ತರಕಾಂಡ್(Uttarakand) ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಬಿನ್ ರಾಜೇಶ್ ಛಾಯಾಗ್ರಹಣ, ಆರ್ ಹರಿ ಸಂಗೀತ (R Hari Musiq) ನಿರ್ದೇಶನ ಹಾಗೂ ಸಿ.ಕೆ.ಕುಮಾರ ಅವರ ಸಂಕಲನ “#ಪಾರು ಪಾರ್ವತಿ” ಚಿತ್ರಕ್ಕಿದೆ.
