ಶಿಕ್ಷಕರ ನೇಮಕಾತಿ ಹಗರಣ ಸೇರಿದಂತೆ ಅಕ್ರಮ ಹಣ ವರ್ಗಾವಾಣೆ ಆರೋಪದ ಮೇಲೆ ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಪಾರ್ಥ ಚಟರ್ಜಯನ್ನು ಪಶ್ಚಿಮ ಬಂಗಾಳ ಆಡಳಿತರೂಢ ಟಿಎಂಸಿ ಪಕ್ಷವು ವಿಧಾನಸಭೆ ಸಲಹಾ ಸಮಿತಿ ಸಭೆಗೆ ಆಹ್ವಾನಿಸಿದೆ.
ಮುಂದಿನ ವಾರ ಪ್ರಾರಂಭವಾಗಲಿರುವ ವಿಧಾನಸಭೆ ಅಧಿವೇಶನಕ್ಕೂ ಮುನ್ನ ನಡೆಯುವ ಸಲಹಾ ಸಮಿತಿ ಸಭೆಗೆ ಸದ್ಯ ಬಂಧಿತರಾಗಿರುವವರನ್ನು ಕರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು ಪಾರ್ಥ ಚಟರ್ಜಿ ಶಾಸಕರು ಹಾಗೂ ಸಲಹಾ ಸಮಿತಿ ಸದಸ್ಯರು ಆಗಿರುವುದರಿಂದ ಅವರು ಜೈಲ್ಲಿನಲ್ಲಿದ್ದರೂ ಸಹ ನಾವು ಸಂಪ್ರದಾಯದಂತೆ ಅವರ ಮನೆಗೆ ಆಹ್ವಾನ ಪತ್ರಿಕೆಯನ್ನು ಕಳಿಸಿದ್ದೇವೆ ಎಂದಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣದಿಂದ ತೀವ್ರ ಮುಜುಗರಕ್ಕೀಡಾಗಿದ ಟಿಎಂಸಿ ಸರ್ಕಾರವು ಅವರನ್ನು ಸಂಪುಟದಿಂದ ಹಾಗೂ ವಿಧಾನಸಭೆಯ ಎಲ್ಲಾ ಸಲಹಾ ಸಮಿತಿಗಳಿಂದ ವಜಾಗೊಳಿಸಿತ್ತು.