ಬಿಬಿಎಂಪಿ ವ್ಯಾಪ್ತಿಗೆ ಬರುವ ಎಲ್ಲಾ ಉದ್ಯಾನವನಗಳು ಇನ್ನು ಮುಂದೆ ಬೆಳ್ಳಗ್ಗೆ 5ರಿಂದ ರಾತ್ರಿ 8ರವರೆಗೆ ತೆರೆಯುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿ ವಾಯು ವಿಹಾರಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇಷ್ಟು ದಿನ ಬೆಳಗ್ಗ 5 ರಿಂದ 10 ಸಂಜೆ 4 ರಿಂದ ರಾತ್ರಿ 8 ರ ವರೆಗೆ ಮಾತ್ರ ಓಪನ್ ಇರುತ್ತಿದ್ದ ಪಾರ್ಕ್ ಇನ್ನು ಮುಂದೆ ದಿನದ 15 ಘಂಟೆಗಳು ತೆರೆದಿರುತ್ತವೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರ ವರೆಗೆ ಉದ್ಯಾನವನಗಳ ನಿರ್ವಹಣೆಗೆ ಅವಕಾಶ ನೀಡಲಾಗಿದೆ.
